For Quick Alerts
  ALLOW NOTIFICATIONS  
  For Daily Alerts

  'ವೇದ' ಕ್ಲೈಮ್ಯಾಕ್ಸ್ ಮುಗಿಯಲ್ಲ: ಶಿವಣ್ಣನ 'ವೇದ 2' ಕಥೆಯೇನು?

  |

  ಶಿವಣ್ಣನ 125ನೇ ಸಿನಿಮಾ 'ವೇದ' ಅದ್ಧೂರಿ ರಿಲೀಸ್ ಕಂಡಿದೆ. ಕನ್ನಡದ ಮತ್ತೊಂದು ಸಿನಿಮಾ ತೆಲುಗು ಹಾಗೂ ತಮಿಳಿಗೆ ಡಬ್ ಆಗಿದೆ. ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

  'ವೇದ' ಸಿನಿಮಾ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾದ ಕಥೆಯನ್ನು ಹೆಣೆಯಲಾಗಿತ್ತು. ಚಿತ್ರತಂಡದ ಆಶಯದಂತೆ ಮಹಿಳೆಯರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಹಾಗೇ ಈ ಸಿನಿಮಾದ ಮಹಿಳಾ ಪಾತ್ರಗಳೂ ಕೂಡ ಅದ್ಭುತವಾಗಿ ನಟನೆ ಮಾಡಿವೆ.

  "ಯಾರ್ ಮಗ ಅವ್ರು, ನಟನೆ ಬಗ್ಗೆ ದೂಸ್ರಾ ಮಾತಿಲ್ಲ, KGF, ಕಾಂತಾರ ನಂತರ ವೇದ": ತಮಿಳು ಪ್ರೇಕ್ಷಕರು ಹೇಳಿದಿಷ್ಟು!

  ಶಿವಣ್ಣನ 125ನೇ ಸಿನಿಮಾ 'ವೇದ' ರಿಲೀಸ್ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಚಾಪ್ಟರ್ 2ಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ನಿರ್ದೇಶಕ ಎ ಹರ್ಷ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

  'ವೇದ' ರೆಸ್ಪಾನ್ಸ್ ಹೇಗಿದೆ?

  'ವೇದ' ರೆಸ್ಪಾನ್ಸ್ ಹೇಗಿದೆ?

  'ವೇದ' ಸಿನಿಮಾ ಮೊದಲ ದಿನದಿಂದಲೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದ ಬಹುತೇಕ ಮಂದಿಗೆ 'ವೇದ' ಇಷ್ಟನೂ ಆಗಿದೆ. ಇನ್ನು ಬಾಕ್ಸಾಫೀಸ್‌ನಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ವರದಿಯಾಗಿದೆ. ನಾಲ್ಕನೇ ದಿನ ( ಡಿಸೆಂಬರ್ 26) ಈ ಸಿನಿಮಾದ ಕಲೆಕ್ಷನ್ 1 ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಒಟ್ಟು ಈ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಶಿವಣ್ಣನ 125ನೇ ಸಿನಿಮಾದ ಕಲೆಕ್ಷನ್ 8.75 ಕೋಟಿ ರೂ. ಎಂದು ಮೂಲಗಳು ಹೇಳುತ್ತಿವೆ. ಹೀಗಾಗಿಯೇ 'ವೇದ 2' ಬರಬಹುದು ಎಂಬ ಸುದ್ದಿ ಹರಿದಾಡುತ್ತಿದೆ.

  'ವೇದ 2' ಸಿನಿಮಾ ಸೆಟ್ಟೇರುತ್ತಾ?

  'ವೇದ 2' ಸಿನಿಮಾ ಸೆಟ್ಟೇರುತ್ತಾ?

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮತ್ತೆ 'ವೇದ' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು. ಇನ್ನೊಂದು ಚಾಪ್ಟರ್ ಬರಬೇಕು ಎಂದು ಚಿತ್ರತಂಡದ ಮೇಲೆ ಒತ್ತಡ ತರುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಎ ಹರ್ಷ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. " ವೇದ ನೋಡಿದವರಿಗೆ ಸಿನಿಮಾ ಇಷ್ಟ ಆಗಿದೆ. ನನಗೆ ಬಹಳಷ್ಟು ಮಂದಿ ವೇದ 2 ಮಾಡಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೊರಗಡೆನೂ ಚರ್ಚೆ ನಡೆಯುತ್ತಿದೆ. ಅದು ನನಗೆ ಗೊತ್ತಿದೆ. ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇನೆ." ಎಂದು ನಿರ್ದೇಶಕ ಎ ಹರ್ಷ ಮಾಹಿತಿ ನೀಡಿದ್ದಾರೆ.

  ಎಷ್ಟು ಸ್ಕ್ರೀನ್‌ನಲ್ಲಿದೆ 'ವೇದ'?

  ಎಷ್ಟು ಸ್ಕ್ರೀನ್‌ನಲ್ಲಿದೆ 'ವೇದ'?

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 'ವೇದ' ಸಿನಿಮಾ ವಿಶ್ವದಾದ್ಯಂತ ಸುಮಾರು 1200 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ಮೂರು ದಿನದ ಬಳಿಕವೂ ಸಿನಿಮಾ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆಯಾಗಿಲ್ಲ. ಕರ್ನಾಟಕದಲ್ಲಿ ಸುಮಾರು 350 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದ್ದು, ಸೋಮವಾರದ ಬಳಿಕವೂ ಮುಂದುವರೆದಿದೆ." ಸೋಮವಾರದ ನಂತರವೂ ಸಿನಿಮಾ ರೆಸ್ಪಾನ್ಸ್ ಚೆನ್ನಾಗಿದೆ. ಮೈಸೂರು, ಮಂಡ್ಯ,ಬೆಂಗಳೂರು ಕಡೆಗಳಲ್ಲಂತೂ ಪ್ರತಿಕ್ರಿಯೆ ಜೋರಾಗಿಯೇ ಇದೆ." ಎಂದು ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ.

  'ವೇದ'ನಿಗೆ ಕ್ಲೈಮ್ಯಾಕ್ಸ್ ಇಲ್ಲ

  'ವೇದ'ನಿಗೆ ಕ್ಲೈಮ್ಯಾಕ್ಸ್ ಇಲ್ಲ

  'ವೇದ' ಕ್ಲೈಮ್ಯಾಕ್ಸ್ ಮುಗಿಯೋದೇ ಇಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು ಇಂತಹದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಎ ಹರ್ಷ ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಇಂತಹದ್ದೊಂದು ಸುಳಿವು ಕೊಟ್ಟಿದ್ದಾರೆ. ಈ ಕಾರಣಕ್ಕೆ 'ವೇದ 2' ಬಂದರೂ ಬರಬಹುದು. ಸದ್ಯ ಹರ್ಷ ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದಾರೆ. ಅಲ್ಲದೆ ಗೀತಾ ಆರ್ಟ್ಸ್ ಹಾಗೂ ಜೀ ಸ್ಟುಡಿಯೋ ಕಾಂಬಿನೇಷನ್‌ನಲ್ಲಿ 'ವೇದ' ನಿರ್ಮಾಣ ಆಗಿತ್ತು. ಹೀಗಾಗಿ ಎರಡೂ ಸಂಸ್ಥೆಗಳು ಒಪ್ಪಿದರೆ ಸಿನಿಮಾ ಆಗಬಹುದು.

  English summary
  Shivarajkumar's Success 125th film A Harsha Revealed Information About Vedha 2, Know More.
  Tuesday, December 27, 2022, 19:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X