»   » ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!

ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಟಗರು' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ 'ಟಗರು' ಟೀಮ್, ಎರಡನೇ ಹಂತವನ್ನ ವೇಗವಾಗಿ ಚಿತ್ರೀಕರಿಸುತ್ತಿದೆ.

'ಟಗರು' ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ, ಕೆಂಡ ಸಂಪಿಗೆ ಮಾನ್ವಿತಾ, ಜಾಕಿ ಭಾವನ ಅಭಿನಯಿಸುತ್ತಿದ್ದಾರೆ. ಸದ್ಯ, ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಸುತ್ತಾಮುತ್ತಾ ಶೂಟಿಂಗ್ ಮುಗಿಸಿರುವ 'ಟಗರು', ಕೆಲವು ಮೇಕಿಂಗ್ ಸ್ಟಿಲ್ ಗಳನ್ನ ಬಿಡುಗಡೆ ಮಾಡಿದೆ.[ಹುಶಾರು..ಇದು ಪೊಗರು ತುಂಬಿರೋ 'ಟಗರು']

ಶಿವಣ್ಣನ ಖದರ್ ಲುಕ್, ಜೊತೆಗೆ ಮಾನ್ವಿತಾ ಹರೀಶ್ ಅವರ ರಗಡ್ ಲುಕ್ ಈಗ ಸಖತ್ ಸುದ್ದಿ ಮಾಡ್ತಿದೆ. 'ಟಗರು' ಚಿತ್ರದ ಮೇಕಿಂಗ್ ಸ್ಟಿಲ್ ಗಳು ಇಲ್ಲಿವೆ ನೋಡಿ....

'ಟಗರು' ಚಿತ್ರದಲ್ಲಿ ಶಿವಣ್ಣ-ಮಾನ್ವಿತಾ

'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಕೆಂಡಸಂಪಿಗೆ ಖ್ಯಾತಿಯ ಮಾನ್ವಿತಾ ಒಟ್ಟಾಗಿ ಅಭಿನಯಿಸುತ್ತಿದ್ದು, ಚಿತ್ರದ ಒಂದು ಮಾಸ್ ಲುಕ್ ಇದು.[ಶಿವಣ್ಣನ 'ಟಗರಿ'ಗೆ ಬಂದ್ರು ಹೊಸ ಪೋರಿ! ]

ಶೂಟಿಂಗ್ ನಲ್ಲಿ ಜೋಡಿ!

ಮಾನ್ವಿತಾ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಚಿತ್ರೀಕರಣದ ವೇಳೆ ಸೆರೆಯಾದ ಒಂದು ದೃಶ್ಯ.

ಮಾನ್ವಿತಾ ರಗಡ್ ಲುಕ್!

'ಟಗರು' ಚಿತ್ರದಲ್ಲಿ ಮಾನ್ವಿತಾ ಇಂಪಾರ್ಟೆಂಟ್ ಪಾತ್ರವನ್ನ ನಿರ್ವಹಿಸುತ್ತಿದ್ದು, ಅವರ ಗೆಟಪ್ ಸಖತ್ ರಗಡ್ ಆಗಿದೆ. ಸ್ಟೈಲೀಶ್ ಕಾಸ್ಟ್ಯೂಮ್ ಹಾಗೂ ಸ್ಟೈಲೀಶ್ ಲುಕ್ ನಲ್ಲಿ ಮಾನ್ವಿತಾ ಮಿಂಚಿದ್ದಾರೆ.['ಟಗರು' ಗೊಂಬೆ ಮಾನ್ವಿತಾ ಹೊಸ ಲುಕ್ ನೋಡಿದ್ರೆ ನೀವು ಶಾಕ್ ಆಗ್ತೀರಾ]

ಮಂಗಳೂರಿನಲ್ಲಿ ಶಿವಣ್ಣ

ಮಂಗಳೂರು ಸುತ್ತಾಮುತ್ತಾ 'ಟಗರು' ಚಿತ್ರದ ಚಿತ್ರೀಕರಣ ನಡೆದಿದ್ದು, ಮಂಗಳೂರು ಬಂದರುನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು ಹೀಗೆ.[ಶಿವಣ್ಣ-ಸೂರಿಯ 'ಟಗರು' ಚಿತ್ರದ ಅದ್ಧೂರಿ ಮುಹೂರ್ತದ ಫೋಟೋ ಆಲ್ಬಂ]

ಮಲ್ಪೆ ಬೀಚ್ ನಲ್ಲಿ ಸೆಂಚುರಿ ಸ್ಟಾರ್

'ಟಗರು' ಚಿತ್ರದ ಶೂಟಿಂಗ್ ಮುಗಿದ ನಂತರ ಮಲ್ಪೆ ಬೀಚ್ ನಲ್ಲಿ ಶಿವರಾಜ್ ಕುಮಾರ್ ಅವರ ರೌಂಡ್.['ರಾಟೆ' ರಾಜನ ರಗಡ್ ಲುಕ್ ಬೋ ಪಸಂದ್ ಆಗೈತಿ...]

ಬೋಟ್ ನಲ್ಲಿ ಜರ್ನಿ!

'ಟಗರು' ಚಿತ್ರದ ಶೂಟಿಂಗ್, ಮಲ್ಪೆ ಬೀಚ್ ನಲ್ಲಿ ನಡೆದಿದ್ದು, ಶಿವರಾಜ್ ಕುಮಾರ್ ಅವರು ಬೋಟ್ ನಲ್ಲಿ ಪ್ರಯಾಣ ಮಾಡಿದ ಚಿತ್ರ.

ಶಿವಣ್ಣನನ್ನ ನೋಡಲು ಮುಗಿಬಿದ್ದ ಪುಟಾಣಿಗಳು

ಉಡುಪಿಯಲ್ಲಿ 'ಟಗರು' ಚಿತ್ರದ ಶೂಟಿಂಗ್ ವೇಳೆ, ನೂರಾರು ಸಂಖ್ಯೆಯಲ್ಲಿ ಮಕ್ಕಳು ಶಿವರಾಜ್ ಕುಮಾರ್ ಅವರನ್ನ ನೋಡಲು ಮುಗಿಬಿದ್ದರು.

ಸೆಂಚುರಿ ಸ್ಟಾರ್ ಗೆ ಸನ್ಮಾನ!

ಉಡುಪಿಯಲ್ಲಿ 'ಟಗರು' ಚಿತ್ರೀಕರಣದ ವೇಳೆ ಶಿವರಾಜ್ ಕುಮಾರ್ ಅವರಿಗೆ ಸನ್ಮಾನ ಮಾಡಲಾಯಿತು.

'ಟಗರು'ಗಾಗಿ ವಿಶೇಷ ಕಾರ್!

'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಒಂದು ವಿಶೇಷ ಕಾರನ್ನ ಬಳಸಲಿದ್ದಾರೆ. ಈ ಕಾರಿನ ಮೇಲೆ ಟಗರಿನ ಪೋಸ್ಟರ್ ಅಂಟಿಸಿರುವುದು ಸ್ಪೆಷಲ್ ಆಗಿದೆ.

ನಿರ್ದೇಶಕ-ನಿರ್ಮಾಪಕ

'ಟಗರು' ಚಿತ್ರದ ನಿರ್ದೇಶಕ ದುನಿಯಾ ಸೂರಿ ಅವರು ಆಕ್ಷನ್ ಕಟ್ ಹೇಳುತ್ತಿರುವುದು. ಪಕ್ಕದಲ್ಲಿ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಸಾಥ್ ಕೊಟ್ಟಿದ್ದಾರೆ.

ಶೂಟಿಂಗ್ ಸೆಟ್ ನಲ್ಲಿ ಗೀತಾ ಶಿವರಾಜ್ ಕುಮಾರ್!

ಮಂಗಳೂರಿನ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಗಳು, ನಿವೇದಿತಾ ಭೇಟಿ ನೀಡಿದ್ದರು.

ಅಡುಗೆ ಮಾಡಿದ ಶಿವಣ್ಣ!

ಚಿತ್ರೀಕರಣದ ವೇಳೆ ಅಡುಗೆ ಮಾಡುತ್ತಿರುವ ದೃಶ್ಯದಲ್ಲಿ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡರು. ಇದು ಸಿನಿಮಾದಲ್ಲ ಅಥವಾ ಪ್ರೊಡಕ್ಷನ್ ಗಾಗಿನ ಎಂಬುದು ಕುತೂಹಲ ಮೂಡಿಸಿದೆ.

ದುನಿಯಾ 'ಟಗರು'

ಸಮುದ್ರದ ತೀರದಲ್ಲಿ ಚಿತ್ರದ ನಿರ್ದೇಶಕ ದುನಿಯಾ ಸೂರಿ ಕಾಣಿಸಿಕೊಂಡ ಒಂದು ಸ್ಪೆಷಲ್ ಮೂಮೆಂಟ್ ಇದು.

English summary
Shivarajkumar Starring 'Tagaru' Movie Shooting Going on In Mangalore. Movie Directed by Duniya Suri' and also featured Dhananjaya, Vasishta N Simh, Manvitha Harish and Bhavana. Here is the Some Shooting Pics of TAGARU Movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X