»   » ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?

ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?

Posted By:
Subscribe to Filmibeat Kannada

ಈ ಫೋಟೋನ ಒಮ್ಮೆ ಕ್ಲಿಯರ್ ಆಗಿ ನೋಡಿ....ಬಿಳಿ ಜುಬ್ಬ-ಪೈಜಾಮ ತೊಟ್ಟು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕೊಂಡು, ಕೈಯಲ್ಲಿ ಬಂದೂಕು ಹಿಡಿದು, ಬೆಂಬಲಿಗರ ಜೊತೆ ಆಗಮಿಸುತ್ತಿರುವ ಈ ವ್ಯಕ್ತಿಯನ್ನ ನೋಡಿ ತಾಲಿಬಾನ್ ಗ್ಯಾಂಗ್ ನವರಿರಬಹುದಾ ಅಂತ ಊಹಿಸಬೇಡಿ.

ಇವರು ನಿಮ್ಮೆಲ್ಲರ ನೆಚ್ಚಿನ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.! ಹೌದು, ಅಣ್ಣಾವ್ರ ಮಗ ಶಿವಣ್ಣ ತಾಳಿರುವ ಹೊಸ ಅವತಾರ ಇದು. ಹಾಗಾದ್ರೆ, ಈ ಗೆಟಪ್ ಹೊಸ ಚಿತ್ರಕ್ಕಿರಬಹುದಲ್ವಾ ಅಂತ ಲೆಕ್ಕ ಹಾಕಬೇಡಿ.

Shivarajkumar's terrorist getup in RGV's Killing Veerappan

ಈಗಾಗಲೇ ಶೂಟಿಂಗ್ ನಡೆಯುತ್ತಿರುವ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕಾಗಿ ಶಿವಣ್ಣ ಈ ರೂಪ ತಾಳಿದ್ದಾರೆ. ಅಲ್ಲಿಗೆ, 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಶಿವಣ್ಣ ಟೆರರಿಸ್ಟ್ ಪಾತ್ರ ನಿರ್ವಹಿಸುತ್ತಾರಾ? ಗೊತ್ತಿಲ್ಲ.! ಆದ್ರೆ, ಸಿನಿಮಾದಲ್ಲಿ ವೀರಪ್ಪನ್ ನ ಟ್ರ್ಯಾಪ್ ಮಾಡೋಕೆ ಶಿವಣ್ಣ ತಾಳುವ ಹತ್ತು ಹಲವು ಅವತಾರಗಳಲ್ಲಿ ಇದೂ ಒಂದು.

ಅಂದ್ಹಾಗೆ, ಈ ಗೆಟಪ್ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಮೇಜರ್ ಟ್ವಿಸ್ಟ್ ನೀಡುತ್ತಂತೆ. ಅಷ್ಟು ಬಿಟ್ಟರೆ ಬಾಕಿ ಸಮಾಚಾರ ಗುಪ್ತ್ ಗುಪ್ತ್ ಆಗಿದೆ.

ದಿನಕ್ಕೊಂದು ವಿಶೇಷತೆಗಳಿಂದ 'ಕಿಲ್ಲಿಂಗ್ ವೀರಪ್ಪನ್' ಸದ್ದು ಮಾಡುತ್ತಲೇ ಇದೆ. ವರ್ಮಾ ಕಿಸೆಯಲ್ಲಿ ಇನ್ನೂ ಏನೇನ್ ಇದ್ಯೋ ದೇವರೇ ಬಲ್ಲ.

    English summary
    Is Kannada Actor Shivarajkumar playing terrorist in Ram Gopal Varma's 'Killing Veerappan'? Well, the photo which is released from the movie team depicts Shivanna in Terrorist avatar. Check out the brand new getup of the Actor in RGV's 'Killing Veerappan'.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada