»   » ಶಿವಣ್ಣ-ಆರ್.ಜಿ.ವಿ 'ಕಿಲ್ಲಿಂಗ್ ವೀರಪ್ಪನ್' ಫಸ್ಟ್ ಲುಕ್ ಔಟ್

ಶಿವಣ್ಣ-ಆರ್.ಜಿ.ವಿ 'ಕಿಲ್ಲಿಂಗ್ ವೀರಪ್ಪನ್' ಫಸ್ಟ್ ಲುಕ್ ಔಟ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಾಂಟ್ರವರ್ಶಿಯಲ್ ನಿರ್ದೇಶಕ ರಾಮ್ ಗೋಪಲ್ ವರ್ಮಾ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುಭಾಷಾ ಚಿತ್ರ 'ಕಿಲ್ಲಿಂಗ್ ವೀರಪ್ಪನ್'.

'ಕಿಲ್ಲಿಂಗ್ ವೀರಪ್ಪನ್' ಅನೌನ್ಸ್ ಆದಾಗಿನಿಂದಲೂ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಎಕ್ಸ್ ಪೆಕ್ಟೇಷನ್ಸ್ ಇದೆ. ಸದ್ದಿಲ್ಲದೇ ಸಿನಿಮಾ ಸೆಟ್ಟೇರಿದೆ. ಇದೇ ಗ್ಯಾಪ್ ನಲ್ಲಿ, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಿದ್ದಾರೆ. ['ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ]

Shivarajkumar starrer 'Killing Veerappan' first look poster out

ಮುಸುಕುಧಾರಿ ವೇಷದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ 'ಕಿಲ್ಲಿಂಗ್ ವೀರಪ್ಪನ್' ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ರಾಮ್ ಗೋಪಾಲ್ ವರ್ಮಾ ಹೇಳಿದಂತೆ, ಚಿತ್ರದಲ್ಲಿ ವೀರಪ್ಪನ್ ಹತ್ಯೆ ಮಾಡುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ. [ಶಿವಣ್ಣನ ಕೈಲಿ ವೀರಪ್ಪನ್ ಹತ್ಯೆ ಮಾಡಿಸ್ತಾರೆ ವರ್ಮಾ.!]

ರಾಮ್ ಗೋಪಾಲ್ ವರ್ಮಾ ಅಡ್ಡದಿಂದ ಬಂದಿರುವ ಖಾಸ್ ಖಬರ್ ಪ್ರಕಾರ, 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಆಗಿ ನಟಿ ಯಜ್ಞಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. [ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಶಿವಣ್ಣ]

Shivarajkumar starrer 'Killing Veerappan' first look poster out

ಪ್ರಮುಖ ಪಾತ್ರದಲ್ಲಿ ನಟಿ ಪಾರುಲ್ ಯಾದವ್ ಮತ್ತು ರಂಗಭೂಮಿ ಕಲಾವಿದ ಸಂದೀಪ್ ಕೂಡ ಇದ್ದಾರೆ. ವೀರಪ್ಪನ್ ಬಗ್ಗೆ ವರ್ಷಗಳ ಕಾಲ ರಿಸರ್ಚ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಚಿತ್ರಕ್ಕೆ ಆಗಲೇ ಚಾಲನೆ ನೀಡಿದ್ದಾರೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಲೇಟೆಸ್ಟ್ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Controversial Director Ram Gopal Varma directorial, Century Star Shivarajkumar starrer 'Killing Veerappan' first look poster is out. 'Killing Veerappan' is all about a Man who killed Forest Brigand Veerappan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada