For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷಕ್ಕೆ 'ಕಿಲ್ಲಿಂಗ್ ವೀರಪ್ಪನ್' ಗ್ರ್ಯಾಂಡ್ ರಿಲೀಸ್

  By Harshitha
  |

  ತಮ್ಮ ಚಿತ್ರಗಳ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪ್ ಸೆಟ್ ಆಗಿದ್ದರು. ಅದನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು.

  ಈಗ ಶಿವಣ್ಣ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಪತ್ರಿಕೆಗಳಲ್ಲಿ ಚಿತ್ರತಂಡ ನೀಡಿರುವ ಜಾಹಿರಾತಿನ ಪ್ರಕಾರ, 'ಕಿಲ್ಲಿಂಗ್ ವೀರಪ್ಪನ್' ಜನವರಿ 1 ರಂದು ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಆಗಲಿದೆ. [ಶಿವರಾಜ್ ಕುಮಾರ್ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿರುವುದೇಕೆ?]

  ಹಾಗ್ನೋಡಿದರೆ, ಮೊದಲು ಶಿವಣ್ಣ ಅಭಿನಯದ 'ಶಿವಲಿಂಗ' ಸಿನಿಮಾ ಬಿಡುಗಡೆ ಆಗ್ಬೇಕಿತ್ತು. ಮೊದಲು ಆರಂಭವಾಗಿ, ಮೊದಲು ಸೆನ್ಸಾರ್ ಆದ ಸಿನಿಮಾ 'ಶಿವಲಿಂಗ'. ಆದರೂ, 'ಶಿವಲಿಂಗ' ಸಿನಿಮಾದ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ['ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ]

  ಪೊಲೀಸ್ ಆಫೀಸರ್ ಆಗಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ರಾಜೇಶ್ ನಟರಂಗ, ಸಂಚಾರಿ ವಿಜಯ್ ಸೇರಿದಂತೆ ಹಲವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ನಟಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಚಿತ್ರದ ನಿರ್ದೇಶಕ.

  ಬಹುನಿರೀಕ್ಷೆ ಹುಟ್ಟಿಸಿರುವ 'ಕಿಲ್ಲಿಂಗ್ ವೀರಪ್ಪನ್' ಹೊಸ ವರ್ಷಕ್ಕೆ ನಿಮ್ಮ ಮುಂದೆ ಬರುತ್ತಿದೆ. ಶಿವಣ್ಣ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ನ್ಯೂ ಇಯರ್ ಗಿಫ್ಟ್ ಬೇಕಾ?

  English summary
  Shiva Rajkumar starrer 'Killing Veerappan' is all set to release on January 1st 2016. 'Killing Veerappan' is directed by Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X