»   » ಅಮೆರಿಕದಲ್ಲೂ 'ಕಿಲ್ಲಿಂಗ್ ವೀರಪ್ಪನ್' ಆರ್ಭಟ

ಅಮೆರಿಕದಲ್ಲೂ 'ಕಿಲ್ಲಿಂಗ್ ವೀರಪ್ಪನ್' ಆರ್ಭಟ

Posted By:
Subscribe to Filmibeat Kannada

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಈಗಾಗಲೇ ಕರ್ನಾಟಕದಾದ್ಯಂತ ಎಲ್ಲೆಡೆ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಬರೀ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶದಲ್ಲೂ 'ವೀರಪ್ಪನ್' ಸಖತ್ ಸೌಂಡ್ ಮಾಡುತ್ತಿದೆ.

ಬಿಡುಗಡೆಯಾದ ಒಂದೇ ದಿನದಲ್ಲಿ ಕೋಟಿ ಕೋಟಿ ದುಡ್ಡು ಬಾಚಿಕೊಂಡಿರುವ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಇದೀಗ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಯುಎಸ್ ಎ ಮತ್ತು ಕೆನಡಾದಲ್ಲಿ ಜನವರಿ 1 ರಿಂದಲೇ ಸಿನಿಮಾ ಪ್ರದರ್ಶನ ಆಗಲು ಆರಂಭವಾಗಿದೆ.[ಕಿಲ್ಲಿಂಗ್ ವೀರಪ್ಪನ್ Vs ಅಟ್ಟಹಾಸ: ಯಾವುದು ನಿಜವಾದ ಇತಿಹಾಸ?]

Shivarajkumar starrer 'Killing Veerappan' USA and Canada theaters list

ಯುಎಸ್.ಎ ಮತ್ತು ಕೆನಡಾದಲ್ಲಿ ಸುಮಾರು 10 ಚಿತ್ರಮಂದಿರಗಳಲ್ಲಿ ಶಿವಣ್ಣ ಮತ್ತು ವರ್ಮಾ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಕಿಲ್ಲಿಂಗ್ ವೀರಪ್ಪನ್' ಅಬ್ಬರಿಸಲಿದೆ.

ಈ ವೀಕೆಂಡ್ ನಲ್ಲೂ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಪ್ರದರ್ಶನವಿದ್ದು, ಕೆನಡಾ ಮತ್ತು ಯುಎಸ್ಎ ನಲ್ಲಿರುವ ಕನ್ನಡಿಗರಿಗೆ ಈ ವೀಕೆಂಡ್ ಅನ್ನು ಭರ್ಜರಿಯಾಗಿ ಕಳೆಯಬಹುದು. ಇಂದು (ಜನವರಿ 9) ಮತ್ತು ನಾಳೆ (ಜನವರಿ 10) ಸಂಜೆ 5 ಘಂಟೆಗೆ 'Serra Theaters' (www.serratheaters.com) ನಲ್ಲಿ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಪ್ರದರ್ಶನ ಆಗಲಿದೆ.['ಆರ್.ಜಿ.ವಿ' ಆಪರೇಷನ್ ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]

ಇನ್ನುಳಿದಂತೆ ಎಸ್.ಎಫ್.ಬೇ ಏರಿಯಾದಲ್ಲಿ Cinegrad Fremont7 - Fremont ( www.cinegrand.us) ಥಿಯೇಟರ್ ನಲ್ಲಿ ದಿನನಿತ್ಯ ಸಿನಿಮಾ ಪ್ರದರ್ಶನಗೊಳ್ಳಲಿದ್ದು, ಬೆಳಗ್ಗೆ 9 ಘಂಟೆಗೆ, ಮಧ್ಯಾಹ್ನ 12.20ಕ್ಕೆ, ಮಧ್ಯಾಹ್ನ 1.45 ಕ್ಕೆ, 3.40ಕ್ಕೆ, ಸಂಜೆ 7.30ಕ್ಕೆ ಮತ್ತು ರಾತ್ರಿ 10.30ಕ್ಕೆ 'ಕಿಲ್ಲಿಂಗ್ ವೀರಪ್ಪನ್' ಶೋ ನಡೆಯಲಿದೆ.

Shivarajkumar starrer 'Killing Veerappan' USA and Canada theaters list

ವಾಶಿಂಗ್ಟನ್ ಡಿ.ಸಿ ಯ 'DC Cinemas-Falls Church' (www.dccinemas.com) ನಲ್ಲಿ ಜನವರಿ 9 ಮತ್ತು 10 ರಂದು 5 ಘಂಟೆಗೆ ಮತ್ತು ಚಿಕಾಗೋನ 'MovieMax Cinemas - Niles' ನಲ್ಲಿ ಶಿವಣ್ಣ ಅವರ 'ಕಿಲ್ಲಿಂಗ್ ವೀರಪ್ಪನ್' ಶೋ ನಡೆಯಲಿದೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]

'Tampa' ದ- Studio Movie Grill - Tampa ಚಿತ್ರಮಂದಿರದಲ್ಲಿ, Minneapolis ನ Carmike 15 - Apple Valley ಚಿತ್ರಮಂದಿರದಲ್ಲಿ, Bentonville ನ Carmike Sugar Creek - Bella Vista ಚಿತ್ರಮಂದಿರದಲ್ಲಿ, Raleigh ನ Carmike Park Place 16 - Morrisville ಚಿತ್ರಮಂದಿರದಲ್ಲಿ, Charlotte ನ Carmike Cinema Seven - Rock Hill ಚಿತ್ರಮಂದಿರದಲ್ಲಿ ಮತ್ತು ಬೋಸ್ಟನ್ ನ ಆಪಲ್ ಸಿನಿಮಾಸ್-ಕೇಂಬ್ರಿಡ್ಜ್ ನಲ್ಲಿ ನಾಳೆ ಮಧ್ಯಾಹ್ನ 12.45 ಕ್ಕೆ ಚಿತ್ರದ ಪ್ರದರ್ಶನ ಕಾಣಲಿದೆ.

ವರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಯಜ್ಞಾ ಶೆಟ್ಟಿ, ಪಾರುಲ್ ಯಾದವ್, ಸಂಚಾರಿ ವಿಜಯ್, ಸಂದೀಪ್ ಭಾರದ್ವಾಜ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು.

ಈಗಾಗಲೇ ತೆಲುಗು ವರ್ಷನ್ ಕೂಡ ತೆರೆ ಕಂಡಿದ್ದು, ಆಂಧ್ರಪ್ರದೇಶದಲ್ಲೂ ವೀರಪ್ಪನ್ ಹವಾ ಹೆಚ್ಚಾಗಿದೆ.

English summary
Kannada Actor Shiva Rajkumar starrer 'Killing Veerappan' is all set to release on January 1st. 'Killing Veerappan' simultaneously getting released in USA and Canada. 'Killing Veerappan' USA and Canada theaters list is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada