»   » ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೆ ಅದ್ದೂರಿ ಮುಹೂರ್ತ

ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೆ ಅದ್ದೂರಿ ಮುಹೂರ್ತ

Posted By:
Subscribe to Filmibeat Kannada

'ಶ್ರಾವಣಿ-ಸುಬ್ರಮಣ್ಯ' ಚಿತ್ರದ ನಂತರ ನಿರ್ದೇಶಕ ಮಂಜು ಸ್ವರಾಜ್ ರವರ ಕನಸಿನ ಕೂಸು 'ಶ್ರೀಕಂಠ' ಚಿತ್ರಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇವತ್ತು 'ಶ್ರೀಕಂಠ' ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿತು.

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಲಕ ಲಕ ಹೊಳೆಯುತ್ತಿದ್ದರು. ಅದೇ ಹುರುಪು, ಅದೇ ಎನರ್ಜಿಯಿಂದ ಕಂಠೀರವ ಸ್ಟುಡಿಯೋಗೆ ಕಾಲಿಟ್ಟ ಶಿವಣ್ಣ, ನಗು ನಗುತ್ತಲೇ 'ಶ್ರೀಕಂಠ' ಚಿತ್ರಕ್ಕೆ ಚಾಲನೆ ನೀಡಿದರು.

Shivarajkumar starrer 'Srikanta' gets grand launch

ಮೊದಲು ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಪೂಜಾ ಕಾರ್ಯಗಳನ್ನು ನೆರವೇರಿಸಿ, 'ಶ್ರೀಕಂಠ' ಚಿತ್ರದ ಮುಹೂರ್ತದ ಶಾಟ್ ಗೆ ಕ್ಲಾಪ್ ಮಾಡಿದರು. [ಶಿವಣ್ಣ ಫಿಟ್ ಅಂಡ್ ಫೈನ್; 'ಶ್ರೀಕಂಠ' ಶುಕ್ರವಾರ ಶುರು]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ನಟಿ ಪ್ರೇಮ 'ಶ್ರೀಕಂಠ' ಮುಹೂರ್ತಕ್ಕೆ ಸಾಕ್ಷಿಯಾದರು.

Shivarajkumar starrer 'Srikanta' gets grand launch

ನಿರ್ದೇಶಕ ಮಂಜು ಸ್ವರಾಜ್ ಹೇಳುವ ಪ್ರಕಾರ 'ಶ್ರೀಕಂಠ' ಸಾಮಾಜಿಕ ಸಂದೇಶ ಸಾರುವ ಸಿನಿಮಾ. ಶಿವರಾಜ್ ಕುಮಾರ್ ಇಲ್ಲಿ 'CM' ಅರ್ಥಾತ್ C (ಕಾಮನ್) M (ಮ್ಯಾನ್) ಆಗಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಚಿತ್ರದಲ್ಲಿ ಶಿವಣ್ಣ ಲಾಂಗ್ ಹಿಡಿಯುತ್ತಿಲ್ಲ. ['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]

ಈಗಷ್ಟೇ ಮುಹೂರ್ತ ಮುಗಿಸಿರುವ 'ಶ್ರೀಕಂಠ' ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.

    English summary
    Kannada Actor Shivarajkumar starrer 'Srikanta' muhoorth ceremony was held in Kanteerava Studio, Bengaluru today (October 16th). Manju Swaraj is directing this movie.
 
 

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada