For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ನಟನೆಯ 'ಕನ್ನಡಿಗ' ಚಿತ್ರದ ಹಾಡಿಗೆ ದನಿಯಾದ ಶಿವಣ್ಣ

  |

  ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ರವಿಚಂದ್ರನ್ ನಟಿಸುತ್ತಿರುವ ಹೊಸ ಸಿನಿಮಾದ ಹಾಡೊಂದನ್ನು ಶಿವಣ್ಣ ಹಾಡಿದ್ದಾರೆ.

  ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಕನ್ನಡಿಗ' ಚಿತ್ರದ ಹಾಡಿಗೆ ಸೆಂಚುರಿ ಸ್ಟಾರ್ ದನಿಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿರುವ ರವಿ ಬಸ್ರೂರ್ ಅವರ ಸ್ಟುಡಿಯೋಗೆ ಆಗಮಿಸಿದ ಶಿವಣ್ಣ ಹಾಡು ಹಾಡಿದ್ದಾರೆ.

  'ಕನ್ನಡಿಗ' ಸಿನಿಮಾದ ರವಿಚಂದ್ರನ್ ಲುಕ್ ರಿವೀಲ್'ಕನ್ನಡಿಗ' ಸಿನಿಮಾದ ರವಿಚಂದ್ರನ್ ಲುಕ್ ರಿವೀಲ್

  ಕನ್ನಡದ ಕುರಿತು ಸಾಹಿತ್ಯ ಬರೆದಿರುವ ಹಾಡು ಇದಾಗಿದ್ದು, ಚಿತ್ರಕ್ಕೆ ಬಹಳ ಜೋಶ್ ನೀಡಲಿದೆಯಂತೆ. ರವಿಚಂದ್ರನ್ ಅವರ ಚಿತ್ರಕ್ಕೆ ಹಾಡಿದರ ಕುರಿತು ಮಾತನಾಡಿದ ಶಿವಣ್ಣ ''ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ರವಿ ಸಿನಿಮಾದಲ್ಲಿ ಹಾಡಿದ್ದು ಖುಷಿ ತಂದಿದೆ. ಚಿತ್ರದ ಕಾನ್ಸೆಪ್ಟ್ ಕೇಳಿದ್ದೀನಿ, ಬಹಳ ಚೆನ್ನಾಗಿದೆ'' ಎಂದರು.

  ಕನ್ನಡಿಗ ಸಿನಿಮಾ ಬಗ್ಗೆ....

  ನಿಜವಾದ ಘಟನೆಯನ್ನು ಆಧರಿಸಿ ಕನ್ನಡಿಗ ಸಿನಿಮಾ ಮಾಡಲಾಗಿದ್ದು, ಬರಹಗಾರರ ಕುಟುಂಬದಿಂದ ಬಂದ ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯಯ ಕಾಲಘಟ್ಟದ ಕಥೆಯ ಇಲ್ಲಿರಲಿದೆ. 1550 ರ ದಶಕದ ಫ್ಲಾಶ್‌ಬ್ಯಾಕ್ ದೃಶ್ಯಗಳು ಈ ಕಥೆಯಲ್ಲಿ ಬರಲಿದೆ.

  ಜರ್ಮನ್ ಕನ್ನಡಿಗನನ್ನು ಭೇಟಿಯಾದ 'ಕನ್ನಡಿಗ' ರವಿಚಂದ್ರನ್ಜರ್ಮನ್ ಕನ್ನಡಿಗನನ್ನು ಭೇಟಿಯಾದ 'ಕನ್ನಡಿಗ' ರವಿಚಂದ್ರನ್

  'ಕನ್ನಡಿಗ' ಸಿನಿಮಾದಲ್ಲಿ ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾನಿ ಚಂದ್ರಶೇಖರ್ ಕಾಣಿಸಿಕೊಂಡರೇ, ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಪಾತ್ರದಲ್ಲಿ ಪಾತ್ರದಲ್ಲಿ ಜೇಮಿ ಆಲ್ಟರ್ ಬಣ್ಣಹಚ್ಚುತ್ತಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

  ಚಿಕ್ಕ ಹುಡುಗನ ಆಟ ಇದು ಎಂದು ದರ್ಶನ್ ಫ್ಯಾನ್ಸ್ ಗೆ ಸ್ಪಷ್ಟನೆ ಕೊಟ್ಟ ಜಗ್ಗೇಶ್
  English summary
  Kannada actor Shiva Rajkumar sings song to ravichandran's 'Kannadiga' Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X