»   » ಶಿವಣ್ಣ - ಗೀತಾ: ನಗುತಾ ನಗುತಾ ಬಾಳಿ ನೀವು ನೂರು ವರುಷ

ಶಿವಣ್ಣ - ಗೀತಾ: ನಗುತಾ ನಗುತಾ ಬಾಳಿ ನೀವು ನೂರು ವರುಷ

Posted By:
Subscribe to Filmibeat Kannada

ಆನಂದ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ವರನಟ ರಾಜ್ ಪುತ್ರ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಮತ್ತು ಅವರ ಶ್ರೀಮತಿಯವರಿಗೆ ಮೇ 19 ವಿಶೇಷ ದಿನ.

ಪುಟ್ಟಸ್ವಾಮಿ ಆಲಿಯಾಸ್ ಶಿವರಾಜ್ ಕುಮಾರ್ 29 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾರನ್ನು ಮದುವೆಯಾದ ದಿನ. (ಭೂಕಂಪ ಸಂತ್ರಸ್ತರಿಗೆ ಶಿವಣ್ಣ ನೆರವಿನ ಹಸ್ತ)

ಈ ಆದರ್ಶ ದಂಪತಿಗಳಿಗೆ ನಿವೇದಿತಾ ಮತ್ತು ನಿರುಪಮಾ ಎನ್ನುವ ಮಕ್ಕಳು. ಶಿವಣ್ಣ ಅಭಿಮಾನಿಗಳ ಸಂಘ ಇವರ 'ಮದುವೆ ವಾರ್ಷಿಕೋತ್ಸವದ' ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಲ್ಲದೇ, ಶಿವಣ್ಣ ಮಂಗಳವಾರ (ಮೇ 19) ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಅವರ ಬೆಂಗಳೂರಿನ ನಾಗಾವರದ ನಿವಾಸದಲ್ಲಿ ವಿತರಿಸಲಿದ್ದಾರೆ.

ಶಿವಣ್ಣ - ಗೀತಾ ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭ ಹಾರೈಸುತ್ತಾ ಅವರಿಬ್ಬರ ಕೆಲವೊಂದು ಅಪರೂಪದ ಫೋಟೋಗಳ ಸ್ಲೈಡ್ ಶೋ..

ಮದುವೆ ಮಹೂರ್ತದ ಫೋಟೋ

ಶಿವಣ್ಣ ಮತ್ತು ಗೀತಾ ಅವರದ್ದು ಎರೇಂಜ್ಡ್ ಮದುವೆ. ಬಂಗಾರಪ್ಪ ಪುತ್ರಿ ಮತ್ತು ರಾಜ್ ಪುತ್ರ ಮಹೂರ್ತದ ಸಂದರ್ಭದಲ್ಲಿನ ಫೋಟೋ.

ಇವರಿಬ್ಬರು, ಇವರಿಗಿಬ್ಬರು

ಶಿವಣ್ಣ ಮತ್ತು ಗೀತಾ ದಂಪತಿಗಳಿಗೆ ಇಬ್ಬರು ಮಕ್ಕಳು. ಮೊದಲನೇ ಮಗಳು ನಿವೇದಿತಾ ಶಿವಣ್ಣ ಜೊತೆ ಅಂಡಮಾನ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು.

ವೈವಾಹಿಕ ಜೀವನದ 29ನೇ ವರ್ಷ

ಶಿವಣ್ಣ ಮೇ 19, 1986 ರಂದು ಗೀತಾ ಅವರನ್ನು ವರಿಸಿದ್ದರು, ದಂಪತಿಗಳಿಗೆ ವೈವಾಹಿಕ ಜೀವನದ 29ನೇ ವರ್ಷ.

ಗಂಡನಿಗೆ ತಕ್ಕ ಹೆಂಡತಿ

ವೈಯಕ್ತಿಕ ಬದುಕಿನಲ್ಲದೇ ಶಿವಣ್ಣ ಅವರ ವೃತ್ತಿ ಜೀವನದಲ್ಲೂ ಗೀತಾ ಗಂಡನಿಗೆ ತಕ್ಕ ಹೆಂಡತಿ.

ಶಿವಣ್ಣ ಮತ್ತು ಗೀತಾ ಹಳೆ ಫೋಟೋ

1986ರಲ್ಲಿ ಆನಂದ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಶಿವಣ್ಣ ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ ಚಿತ್ರದ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರ ನೀಡಿ 'ಹ್ಯಾಟ್ರಿಕ್ ಹೀರೋ' ಎಂದು ಅಭಿಮಾನಿಗಳಿಂದ ಕರೆಯಲ್ಪಟ್ಟರು.

ತಂದೆ ಜೊತೆ ಶಿವಣ್ಣ ಕುಟುಂಬ

ವರನಟ ಡಾ. ರಾಜಕುಮಾರ್ ಜೊತೆ ಶಿವಣ್ಣ, ಅವರ ಮಡದಿ ಮತ್ತು ಮಕ್ಕಳು.

ತಾಯಿಯ ಪ್ರೀತಿಯ ಮುತ್ತು

ಶಿವಣ್ಣ ಅವರಿಗೆ ತಾಯಿ ಪಾರ್ವತಮ್ಮ ರಾಜಕುಮಾರ್ ಅವರಿಂದ ಪ್ರೀತಿಯ ಮುತ್ತು. ಈ ಚಿತ್ರ ಶಿವಣ್ಣ ಅಭಿನಯದ ಅಣ್ಣತಂಗಿ ಚಿತ್ರದ ವೇಳೆ ಕ್ಲಿಕ್ಕಿಸಿದ್ದು..

ರಾಜ್ ಸಮಾಧಿ

ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ಶಿವಣ್ಣ ದಂಪತಿಗಳಿಂದ ನಮನ (ಹಳೇ ಫೋಟೋ)

ಹುಟ್ಟುಹಬ್ಬದ ಸಂಭ್ರಮ

ಶಿವಣ್ಣ ಹುಟ್ಟುಹಬ್ಬದಾಚರಣೆಯ ಹಳೇ ಫೋಟೋ.

English summary
29th wedding anniversary for Vajrakaya star Shivarajkumar and Geetha Shivarajkumar (In Pics)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada