twitter
    For Quick Alerts
    ALLOW NOTIFICATIONS  
    For Daily Alerts

    32 ವರ್ಷದ ಹಿಂದೆ ಶಿವಣ್ಣ ಮಾಡಿದ್ದ ದೊಡ್ಡ ಸಹಾಯವನ್ನು ಬಿಚ್ಚಿಟ್ಟ ಮಾಜಿ ಖೈದಿ

    |

    ಶಿವರಾಜ್ ಕುಮಾರ್ ನಟನೆಯಿಂದ ಮಾತ್ರವಲ್ಲದೆ ತಮ್ಮ ಸಾಮಾಜಿಕ ಕಳಕಳಿಯಿಂದಲೂ ಖ್ಯಾತರು. ಆದರೆ ತಾವು ಮಾಡಿದ ಸಹಾಯದ ಬಗ್ಗೆ ಎಂದೂ ಡಂಗೂರ ಭಾರಿಸಿದವರಲ್ಲ ಶಿವರಾಜ್ ಕುಮಾರ್.

    Recommended Video

    ಕ್ಯಾನ್ಸರ್ ಪೀಡಿತರಿಗಾಗಿ ತಲೆ ಕೂದಲು ದಾನ ಮಾಡಿದ ನಟಿ | Sukrutha Wagle | Cancer Awareness | Oneindia kannada

    ಹೌದು, ಕೊರೊನಾ ಸಂಕಷ್ಟಕ್ಕೆ ಕನ್ನಡದ ನಟರು ಸ್ಪಂದಿಸುತ್ತಿಲ್ಲ ಎಂಬ ಮಾತೊಂದು ಸಣ್ಣಗೆ ಕೇಳಿಬರುತ್ತಿರುವ ಸಮಯದಲ್ಲಿಯೇ ಶಿವರಾಜ್ ಕುಮಾರ್ ಅವರು 32 ವರ್ಷಗಳ ಹಿಂದೆ ಮಾಡಿದ್ದ ದೊಡ್ಡ ಸಹಾಯವೊಂದು ಮುನ್ನೆಲೆಗೆ ಬಂದಿದೆ.

    ಮಾಜಿ ಖೈದಿಯೊಬ್ಬ, ಶಿವರಾಜ್ ಕುಮಾರ್ ಅವರು ತಮಗೆ ಹಾಗೂ ತನ್ನಂತ 25 ಮಂದಿಗೆ ಮಾಡಿದ್ದ ದೊಡ್ಡ ಸಹಾಯವನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಶಿವಣ್ಣನಿಂದ ಸಹಾಯ ಸ್ವೀಕರಿಸಿದ್ದ ಮಾಜಿ ಖೈದಿ ಗೋಪಾಲ್

    ಶಿವಣ್ಣನಿಂದ ಸಹಾಯ ಸ್ವೀಕರಿಸಿದ್ದ ಮಾಜಿ ಖೈದಿ ಗೋಪಾಲ್

    1988 ರಲ್ಲಿ ಶಿವರಾಜ್ ಕುಮಾರ್ ಶಿಕ್ಷೆಯ ಅವಧಿ ಮುಗಿದು ದಂಡ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದ 26 ಖೈದಿಗಳ ದಂಡದ ಹಣ ಪಾವತಿಸಿ ಜೈಲಿನಿಂದ ಬಿಡುಗಡೆಗೊಳಿಸಿದ್ದರಂತೆ ಶಿವಣ್ಣ. ಈ ಬಗ್ಗೆ ವಿವರವಾಗಿ ಹೇಳಿದ್ದಾರೆ ಶಿವಣ್ಣನಿಂದ ಸಹಾಯ ಸ್ವೀಕರಿಸಿದ ಗೋಪಾಲ್ ಎಂಬ ಖೈದಿ.

    ಮೈಲಾರಪಟ್ಟಣದ ಗೋಪಾಲ್ ಹೇಳಿದ ಶಿವಣ್ಣನ ಕತೆ

    ಮೈಲಾರಪಟ್ಟಣದ ಗೋಪಾಲ್ ಹೇಳಿದ ಶಿವಣ್ಣನ ಕತೆ

    ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮೈಲಾರಪಟ್ಟಣದ ಗೋಪಾಲ್ ಎಂಬ ಆಟೋ ಚಾಲಕನನ್ನು ಶಿವಣ್ಣ ಅವರ ಅಭಿಮಾನಿಯೊಬ್ಬ ಮಾತನಾಡಿಸಿ ವಿಡಿಯೋ ಮಾಡಿ ಫೇಸ್‌ ಬುಕ್ ನಲ್ಲಿ ಹಾಕಿದ್ದು, 1988 ರಲ್ಲಿ ಶಿವರಾಜ್ ಕುಮಾರ್ ಶಿಕ್ಷೆ ಅವಧಿ ಮುಗಿದ ಖೈದಿಗಳಿಗೆ ಮಾಡಿದ್ದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

    ಮೃತ್ಯುಂಜಯ ಸಿನಿಮಾ ಚಿತ್ರೀಕರಣಕ್ಕೆ ಜೈಲಿಗೆ ಹೋಗಿದ್ದ ಶಿವಣ್ಣ

    ಮೃತ್ಯುಂಜಯ ಸಿನಿಮಾ ಚಿತ್ರೀಕರಣಕ್ಕೆ ಜೈಲಿಗೆ ಹೋಗಿದ್ದ ಶಿವಣ್ಣ

    1988 ರ ಸುಮಾರಿಗೆ ಶಿವರಾಜ್ ಕುಮಾರ್ ಅವರು ಮೃತ್ಯುಂಜಯ ಸಿನಿಮಾದ ಚಿತ್ರೀಕರಣಕ್ಕೆಂದು ಮೈಸೂರು ಜೈಲಿಗೆ ಹೋಗಿದ್ದರಂತೆ. ಆಗ ಅಲ್ಲಿ ಗೋಪಾಲ್ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ತನ್ನ ಕತೆ ಹೇಳಿಕೊಂಡಾಗ ಆತ ಕಟ್ಟಬೇಕಾದ ಮೂರು ಲಕ್ಷ ಹಣ ಕೊಟ್ಟು ಗೋಪಾಲ್ ಬಿಡುಗಡೆ ಆಗುವಂತೆ ಮಾಡಿದ್ದರಂತೆ ಶಿವರಾಜ್‌ ಕುಮಾರ್. ಸಹಾಯ ಇಷ್ಟಕ್ಕೆ ಮುಗಿಯಲಿಲ್ಲ.

    ಒಟ್ಟು 26 ಮಂದಿಗೆ ಸಹಾಯ ಮಾಡಿದ್ದ ಶಿವರಾಜ್‌ ಕುಮಾರ್

    ಒಟ್ಟು 26 ಮಂದಿಗೆ ಸಹಾಯ ಮಾಡಿದ್ದ ಶಿವರಾಜ್‌ ಕುಮಾರ್

    ಗೋಪಾಲ್ ಮಾತ್ರವಲ್ಲ ಆತನಂತೆಯೇ ಶಿಕ್ಷೆಯ ಅವಧಿ ಮುಗಿದು, ದಂಡದ ಮೊತ್ತ ಪಾವತಿಸಲಾಗದೆ ಜೈಲಿನಲ್ಲೇ ಇದ್ದ ಇನ್ನೂ 25 ಮಂದಿಯ ದಂಡದ ಹಣವನ್ನು ಶಿವರಾಜ್ ಕುಮಾರ್ ಕಟ್ಟಿ ಅವರೆಲ್ಲರೂ ಬಿಡುಗಡೆ ಆಗುವಂತೆ ಮಾಡಿದ್ದರಂತೆ.

    ಮೈಲಾರಪಟ್ಟಣದ ಗೋಪಾಲ್ ಹೇಳಿದ ಕತೆ

    ಮೈಲಾರಪಟ್ಟಣದ ಗೋಪಾಲ್ ಹೇಳಿದ ಕತೆ

    ಮೈಲಾರಪಟ್ಟಣದ ಗೋಪಾಲ್ ತನ್ನ 16 ನೇ ವಯಸ್ಸಿನಲ್ಲಿಯೇ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿದ್ದರಂತೆ. ಅವರೇ ಹೇಳುವ ಪ್ರಕಾರ ಶಿವರಾಜ್ ಕುಮಾರ್ ಅವರು ಆಗಿನ ಕಾಲದಲ್ಲೇ ಸುಮಾರು 28 ಲಕ್ಷ ಹಣ ಸಹಾಯ ಮಾಡಿದ್ದರಂತೆ. ಅದರ ಈಗಿನ ಮೌಲ್ಯ ಎಷ್ಟೋ ಕೋಟಿಗಳಾಗುತ್ತವೆ ಎನ್ನುತ್ತಾರೆ ಅವರು. ಗೋಪಾಲ್ ಅವರು ಈಗ ಆಟೋ ಓಡಿಸುತ್ತಿದ್ದಾರೆ.

    English summary
    Actor Shivraj Kumar helped 26 prisoners who's punishment period ended in 1988. Shivraj Kumar paid their fine amount.
    Saturday, May 30, 2020, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X