»   » ತೆರೆ ಮೇಲೆ ಸುಧಾರಾಣಿ, ಶಿವಣ್ಣ ಮತ್ತೆ ಟುವ್ವಿ ಟುವ್ವಿ

ತೆರೆ ಮೇಲೆ ಸುಧಾರಾಣಿ, ಶಿವಣ್ಣ ಮತ್ತೆ ಟುವ್ವಿ ಟುವ್ವಿ

Posted By:
Subscribe to Filmibeat Kannada

ಒಂದು ಕಾಲದ ಜನಪ್ರಿಯ ಜೋಡಿ ಈಗ ಮತ್ತೆ ಒಂದಾಗುತ್ತಿದೆ. ಅವರು ಬೇರಾರು ಅಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅಭಿಮಾನಿಗಳ 'ಮನಮೆಚ್ಚಿದ ಹುಡುಗಿ' ಸುಧಾರಾಣಿ. ಈ ಹಿಟ್ ಜೋಡಿ ಈಗ ಮತ್ತೆ ಒಂದಾಗುತ್ತಿದ್ದಾರೆ, ಆದರೆ ಸಿನಿಮಾದಲ್ಲಿ ಅಲ್ಲ.

ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿರುವುದು ಜಾಹೀರಾತು ಒಂದರಲ್ಲಿ. ಕಲ್ಯಾಣ್ ಜ್ಯುವೆಲ್ಲರ್ಸ್ ಜಾಹೀರಾತಿನಲ್ಲಿ ಇಬ್ಬರೂ ಕ್ಯಾಮೆರಾಗೆ ಮುಖಾಮುಖಿಯಾಗಿದ್ದಾರೆ. ಇವರಿಬ್ಬರ ಅಭಿನಯದ ಜಾಹೀರಾತು ಇನ್ನು ಮುಂದೆ ಬೆಳ್ಳಿಪರದೆ, ಕಿರುತೆಯಲ್ಲಿ ನೋಡಿ ಆನಂದಿಸಬಹುದು. [ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ]


'ಆನಂದ್' (1986) ಚಿತ್ರದ ಮೂಲಕ ಸುಧಾರಾಣಿ ಹಾಗೂ ಶಿವರಾಜ್ ಕುಮಾರ್ ಬೆಳ್ಳಿಪರದೆಗೆ ಅಡಿಯಿಟ್ಟವರು. ಅದಾದ ಬಳಿಕ ಇವರಿಬ್ಬರ ಕಾಂಬಿನೇಷನಲ್ಲಿ ಬಂದಂತಹ ಚಿತ್ರಗಳು ಚಿತ್ರರಸಿಕರನ್ನು ರಂಜಿಸಿವೆ.


Shivrajkumar and Sudharani team up again

ಅವುಗಳಲ್ಲಿ ಮನಮೆಚ್ಚಿದ ಹುಡುಗಿ (1987), ಆಸೆಗೊಬ್ಬ ಮೀಸೆಗೊಬ್ಬ (1990), ಸಮರ (1995), ರಣರಂಗ (1988), ಆನಂದ ಜ್ಯೋತಿ (1993), ಅಣ್ಣತಂಗಿ (2005) ಚಿತ್ರಗಳು ಪ್ರಮುಖವಾದವು. ತಮಸ್ಸು, ಬೆಳ್ಳಿ ಚಿತ್ರಗಳಲ್ಲೂ ಈ ಜೋಡಿ ಕಾಣಿಸಿಕೊಂಡಿದೆ.


ಈ ಜೋಡಿ ಅಭಿನಯದ ಕೊನೆಯ ಚಿತ್ರ 'ಬೆಳ್ಳಿ'. ಈ ಚಿತ್ರದಲ್ಲಿ ಸುಧಾರಾಣಿ ನಾಯಕಿಯಾಗಿ ಅಲ್ಲದೆ ಪ್ರಮುಖ ಪಾತ್ರವನ್ನು ಪೋಷಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ರಂಜಿಸಿದ್ದ ಈ ಜೋಡಿ ಜಾಹೀರಾತೊಂದರಲ್ಲಿ ಜೊತೆಯಾಗಿ ಅಭಿನಯಿಸಿರುವುದು ಇದೇ ಮೊದಲು.


ಕಲ್ಯಾಣ್ ಜ್ಯುವೆಲ್ಲರ್ಸ್ ರಾಯಭಾರಿಯಾಗಿ ಶಿವಣ್ಣ ಈಗಾಗಲೆ ಬಿಗ್ ಬಿ ಅಮಿತಾಬ್ ಜೊತೆ ಅಭಿನಯಿಸಿರುವುದು ಗೊತ್ತೇ ಇದೆ. ಇದೀಗ ಶಿವಣ್ಣ ಹಾಗೂ ಸುಧಾರಾಣಿ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ. (ಏಜೆನ್ಸೀಸ್)

English summary
The most popular pair of Sandalwood Shivrajkumar and Sudharani team up again. This time the duo are seen in a commercial of Kalyan Jewels. The pair acted in many films including 'Mana Mechchida Hudugi', 'Aasegobba Meesegobba', 'Samara', 'Ranaranga', 'Ananda Jyothi', 'Anna Thangi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada