»   » ಮಂಡ್ಯದಲ್ಲಿ ಭರದಿಂದ ಸಾಗಿದೆ ಶಿವಣ್ಣ 'ಬೆಳ್ಳಿ'

ಮಂಡ್ಯದಲ್ಲಿ ಭರದಿಂದ ಸಾಗಿದೆ ಶಿವಣ್ಣ 'ಬೆಳ್ಳಿ'

Posted By:
Subscribe to Filmibeat Kannada

ಸ್ವಲ್ಪ ಗ್ಯಾಪ್ ನ ಬಳಿಕ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೆ ಕೈಗೆ ಲಾಂಗ್ ತೆಗೆದುಕೊಂಡಿರುವ ಚಿತ್ರ 'ಬೆಳ್ಳಿ'. ಅದರಲ್ಲೂ ಈ ಚಿತ್ರದಲ್ಲಿ ಡಿಫರೆಂಟ್ ಲಾಂಗ್ ಗಳ ಮೂಲಕ ಶಿವಣ್ಣ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅದ್ದೂರಿಯಾಗಿ ಸೆಟ್ಟೇರಿದ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದರೂ ಶಿವಣ್ಣ ಮಾತ್ರ ಬೆಳ್ಳಿ ಚಿತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಶಿವಣ್ಣ ಒಬ್ಬ ಪ್ರಬುದ್ಧ ನಟ. ಆದರೆ ಇಲ್ಲಿಯವರೆಗೂ ಶಿವಣ್ಣ ಮಾಡದಂತಹಾ ನಿಜಕ್ಕೂ ಭಿನ್ನ ಅನ್ನಿಸೋ ಪಾತ್ರ ಅವರದ್ದು. ಈ ಪಾತ್ರವೇ ಶಿವಣ್ಣನಿಗೆ ಇಷ್ಟವಾಗಿದೆ. ['ಬೆಳ್ಳಿ' ಲಾಂಗುಗಳ ಸಿಂಹಾಸನ ಏರಿದ ಸೆಂಚುರಿ ಸ್ಟಾರ್]


ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸುತ್ತಿರುವ 'ಬೆಳ್ಳಿ' ಚಿತ್ರಕ್ಕೆ ಮಂಡ್ಯದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಹೇಶ್(ಮುಸ್ಸಂಜೆಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ.

ಇಲ್ಲಿ ವಿನೋದ್ ಪ್ರಭಾಕರ್, ಶಿಷ್ಯ ದೀಪಕ್, ಒರಟ ಪ್ರಶಾಂತ್, ವೆಂಕಿ ಅನ್ನೋ ನಾಲ್ಕು ಹೀರೋಗಳು ಶಿವಣ್ಣನ ಗೆಳೆಯರಾಗಿ ಕಾಣಿಸಿಕೊಳ್ತಿದ್ದಾರೆ. ಹೀರೋಗಳು ಶಿವಣ್ಣನ ಗೆಳೆಯರಾಗಿ ಕಾಣಿಸಿಕೊಳ್ಳೋಕೆ ಸೈ ಅಂದಿರೋದು ಶಿವಣ್ಣನಿಗೆ ಆನೆ ಬಲ ಬಂದಂತಾಗಿದೆ.

ಬೆಳ್ಳಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಡಬ್ಬಲ್ ಶೇಡ್ ನಲ್ಲಿ ಕಾಣಿಸಿಕೊಳ್ತಿದ್ದು ಶಿವಣ್ಣ ಬೆಳ್ಳಿಯಾದ್ರೆ ನಾನು ಬಂಗಾರ ಅಂತಾರೆ ಕೃತಿ ಖರಬಂದ. ಗೋಲ್ಡ್ ಆಯ್ತು ಸಿಲ್ವರ್ ಆಯ್ತು ಡೈಮಂಡ್ ಯಾರು ಅಂದ್ರೆ ಡೈರೆಕ್ಟ್ರೇ ನನ್ ಪ್ರಕಾರ ಡೈಮಂಡ್ ಅಂದಿದ್ದಾರೆ.

ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Century Star Shivrajkumar upcoming movie Belli shooting progressed in Mandya. The movie directed by Mussanje Mahesh. Kriti Kharbanda is the female lead of the movie. It also includes struggling actors Vinod Prabhakar, Deepak, Prashanth, and Venkatesh Prasad. 
Please Wait while comments are loading...