»   » ಹ್ಯಾಟ್ರಿಕ್ ಹೀರೋ, ಹರ್ಷ ಹೊಸ ಚಿತ್ರ 'ವಜ್ರಕಾಯ'

ಹ್ಯಾಟ್ರಿಕ್ ಹೀರೋ, ಹರ್ಷ ಹೊಸ ಚಿತ್ರ 'ವಜ್ರಕಾಯ'

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕರಾಗಿ ಬದಲಾಗಿರುವ ನೃತ್ಯ ನಿರ್ದೇಶಕ ಎ ಹರ್ಷ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಂತಹ 'ಭಜರಂಗಿ' ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದು ಗೊತ್ತೇ ಇದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ ಜೂನ್ ತಿಂಗಳಲ್ಲೇ ಸುಸೂತ್ರವಾಗಿ ಸೆಟ್ಟೇರಲಿದೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ 'ವಜ್ರಕಾಯ' ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಈ ಹಿಂದೆ 'ಮುತ್ತುರಾಜ' ಎಂದು ಹೆಸರಿಡಲಾಗಿತ್ತು. ['ಭಜರಂಗಿ' ಚಿತ್ರ ವಿಮರ್ಶೆ]

Shivanna with Harsha (Working still)

ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಸೆಟ್ಟೇರಿದ ಚಿತ್ರಕ್ಕೆ ಇದೀಗ 'ವಜ್ರಕಾಯ' ಎಂದು ಮರುನಾಮಕರಣ ಮಾಡಲಾಗಿದೆ. 'ಭಜರಂಗಿ' ಎಂದರೂ ವ'ಜ್ರಕಾಯ' ಎಂದರೂ ರಾಮಭಕ್ತ ಹನುಮಂತನ ಪರ್ಯಾಯ ಹೆಸರುಗಳು.

ಈ ಬಾರಿಯೂ ಹರ್ಷ ಅವರು ಫ್ಯಾಂಟಸಿ ಚಿತ್ರ ಮಾಡ್ತಾರಾ? ಇಲ್ಲವೆ ಎಂಬುದನ್ನು ಕಾದುನೋಡಬೇಕು. ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದಲ್ಲಿ ಯಾರೆಲ್ಲಾ ಇರುತ್ತಾರೆ? ಎಂಬುದು ಇನ್ನಷ್ಟೇ ಗೊತ್ತಾಗಬೇಕು.

2013ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ 'ಭಜರಂಗಿ' ಚಿತ್ರ ದಾಖಲೆಗೆ ಕಾರಣವಾಗಿತ್ತು. ಬಾಕ್ಸ್ ಆಫೀಸಲ್ಲಿ ಮೊದಲ ವಾರದಲ್ಲೇ ಸರಿಸುಮಾರು ರು.9 ಕೋಟಿ ಕಲೆಕ್ಷನ್ ಮಾಡಿ ಜೈಕಾರ ಹಾಕಿತ್ತು. ಹಾಗಾಗಿ ಹರ್ಷ ಮುಂದಿನ ಚಿತ್ರದ ಬಗ್ಗೆಯೂ ಇದೇ ರೀತಿಯ ನಿರೀಕ್ಷೆಗಳಿವೆ. (ಏಜೆನ್ಸೀಸ್)

English summary
Hat Trick Hero Shivrajkumar new film titled as 'Vajrakaya'. The new film to be directed by choreographer turned director A Harsha. Earlier Harsha and Shivanna combination movie 'Bhajarangi' declared a blockbuster at the box office.
Please Wait while comments are loading...