Just In
Don't Miss!
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಯ್ತು 2021ರ ಬಜಾಜ್ ಪಲ್ಸರ್ 220ಎಫ್ ಬೈಕ್
- News
"ಸೋಂಕಿನ ವಿರುದ್ಧ ಲಸಿಕೆಗಳು ಸಂಜೀವಿನಿಯಂತೆ ಕಾರ್ಯ ನಿರ್ವಹಿಸಲಿವೆ"
- Sports
ಭಾರತ vs ಆಸ್ಟ್ರೇಲಿಯಾ: ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆ
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಬಲ್ ಖುಷಿಯ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಕುಟುಂಬ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಇಂದು ಎರಡೆರೆಡು ಸಂಭ್ರಮ. ಮೇ 19 ಶಿವರಾಜ್ ಕುಮಾರ್ ಕುಟುಂಬಕ್ಕೆ ಮರೆಯಲಾರದ ದಿನ. ಅವರ ಮನೆಯಲ್ಲಿ ಹಬ್ಬದ ವಾತಾವರಾಣ ನಿರ್ಮಾಣವಾಗಿರುತ್ತೆ. ಹೌದು, ಒಂದು ಖುಷಿಗೆ ಕಾರಣ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿದು.
1986 ಮೇ 19 ಶಿವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಅವರ ಕೈ ಹಿಡಿದ ಸುಸಂದರ್ಭ. ಈ ಬಾರಿ ಶಿವಣ್ಣ ದಂಪತಿ 33ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
'ಪೊಲೀಸ್ ಬೇಬಿ' ಹಾಡಿನ ವಿರುದ್ಧ ಸಿಡಿದೆದ್ದ ಶಿವಣ್ಣ ಫ್ಯಾನ್ಸ್
ಶಿವಣ್ಣ ಮತ್ತು ಗೀತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿರೂಪಮಾ ಮತ್ತು ನಿವೇದಿತಾ. ಈಗಾಗಲೆ ನಿರೂಪಮಾ ಮದುವೆ ಆಗಿ ಗಂಡನ ಮನೆಯಲ್ಲಿದ್ದಾರೆ. ನಿವೇದಿತಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಶ್ರೀಮುತ್ತು ನಿರ್ಮಾಣ ಸಂಸ್ಥೆಯ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಮತ್ತೊಂದು ವಿಶೇಷ ಅಂದರೆ ಕನ್ನಡ ಸಿನಿಮಾರಂಗದಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿರುವ ಚಿತ್ರ 'ಓಂ'. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ 'ಓಂ' ಸಿನಿಮಾ ಬಿಡುಗಡೆ ಆಗಿ ಇಂದಿಗೆ 24 ವರ್ಷಗಳು ಕಳೆದು ಹೋಗಿವೆ.
24 ವರ್ಷದ ಹಿಂದೆ ಇದೇ ದಿನ 'ಓಂ' ಚಿತ್ರ ಬಿಡುಗಡೆ ಆಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ಪ್ರೇಮ, ಮತ್ತು ರಿಯಲ್ ಸ್ಟಾರ್ ಉಪೇಂದ್ರ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟಂತ ಸಿನಿಮಾ. ವಿಲನ್ ಶೇಡ್ ನಲ್ಲಿ ಶಿವರಾಜ್ ಕುಮಾರ್ ಮಿಂಚಿದ್ರು.
ವಿಶೇಷ ಅಂದ್ರೆ 'ಓಂ' ಅದೆಷ್ಟು ಬಾರಿ ರೀ ರಿಲೀಸ್ ಆಗಿದೆ ಅಂದ್ರೆ ಲೆಕ್ಕಕ್ಕೆ ಇಲ್ಲ. ಉತ್ತಮ ಸಿನಿಮಾಗಳು ಬಿಡುಗಡೆ ಆಗದೆ ಇದ್ದ ಸಂದರ್ಭದಲ್ಲಿ ಚಿತ್ರಮಂದಿರದ ಮಾಲಿಕರಿಗೆ ವರವಾಗಿ ಕಾಪಾಡುವುದು ಇದೆ ಓಂ ಸಿನಿಮಾ. ಇಂದಿಗೂ ಕೂಡ ರೀ ರಿಲೀಸ್ ಆದ್ರೆ ಇವತ್ತೂ ಅದೆ ಕ್ರೇಜ್ ನಲ್ಲಿ ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ.