»   » ಹ್ಯಾಟ್ರಿಕ್ ಹೀರೋ 'ಆರ್ಯನ್' ಅಬ್ಬರದ ಆಟ ಶುರು

ಹ್ಯಾಟ್ರಿಕ್ ಹೀರೋ 'ಆರ್ಯನ್' ಅಬ್ಬರದ ಆಟ ಶುರು

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಕಿಂಗ್-ಸ್ಯಾಂಡಲ್ ವುಡ್ ಕ್ವೀನ್ ಜೋಡಿಯಾಗಿರೋ 'ಆರ್ಯನ್' ಸಿನಿಮಾ ಆಗಸ್ಟ್ 1ರಂದು ಬಿಗ್ ರಿಲೀಸ್ ಕಂಡಿದೆ. ಶಿವಣ್ಣಗೆ ಬಹುದೊಡ್ಡ ಯಶಸ್ಸು ಕೊಟ್ಟ 'ಭಜರಂಗಿ' ಸಿನಿಮಾದ ನಂತರದ ಚಿತ್ರ ಅನ್ನೋ ಕಾರಣಕ್ಕೆ ಆರ್ಯನ್ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ.

ರಮ್ಯಾ ರಾಜಕೀಯಕ್ಕೆ ಇಳಿದ ನಂತರ ಯಾವ ಸಿನಿಮಾಗಳೂ ತೆರೆಗೆ ಬಂದಿರಲಿಲ್ಲ. ಈಗ ರಮ್ಯಾ ರಾಜಕೀಯದಿಂದ ಸಿನಿಮಾ ಕಡೆ ಮುಖಮಾಡಿದಂತಿದ್ದಾರೆ. ಆದರೆ ಬಹಳ ಸಮಯದ ನಂತರ ರಮ್ಯಾ ಅಭಿನಯದ ಸಿನಿಮಾ ಬರ್ತಿರೋದು ಅಭಿಮಾನಿಗಳ ನಿರೀಕ್ಷೆ ಗರಿಗೆದರೋಕೆ ಮತ್ತೊಂದು ಕಾರಣ. [ಆರ್ಯನ್ ಆಡಿಯೋ ವಿಮರ್ಶೆ]

ದ್ರುವದಾಸ್ ಮತ್ತು ಕಮರ್ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿರೋದು ಇಬ್ಬರು ನಿರ್ದೇಶಕರು. ಈ ಕಾರಣಕ್ಕೆ ಕೂಡ ಚಿತ್ರ ವಿಶೇಷ. ಡಿ ರಾಜೇಂದ್ರಬಾಬು ಅರ್ಧ ಸಿನಿಮಾ ಮುಗಿದಿದ್ದಾಗಲೇ ದಿವಂಗತರಾದರು. ನಂತರ ಇದನ್ನ ಮುಂದುವರೆಸಿದ್ದು, ಚಿ ಉದಯಶಂಕರ್ ಪುತ್ರ ಚಿ ಗುರುದತ್.

ಸ್ಫೋರ್ಟ್ಸ್ ಬೇಸ್ಡ್ ಕಥೆ ಹೊಂದಿರೋ ಚಿತ್ರ ವರ್ಷದ ಬಹುನಿರೀಕ್ಷಿತ ಚಿತ್ರ ಅಂತಲೇ ಬಿಂಬಿತವಾಗಿದೆ. ಹಾಗಿದ್ರೆ ಏನು ಆರ್ಯನ್ ಸ್ಪೆಷಲ್ ನಿಮ್ಗೆ ಗೊತ್ತಿಲ್ಲದ ಆರ್ಯನ್ ವಿಶೇಷತೆಗಳನ್ನ ನಾವ್ ಹೇಳ್ತೀವಿ ನೋಡ್ತಾ ಹೋಗಿ.

ಆನಂದ್ ಬ್ಯಾಸ್ಕೇಟ್ ಬಾಲ್-ಆರ್ಯನ್ ಕೋಚ್

ಶಿವಣ್ಣ ಮೊದಲ ಸಿನಿಮಾ ಆನಂದ್ ನಲ್ಲಿ ಬ್ಯಾಸ್ಕೇಟ್ ಬಾಲ್ ಪ್ಲೇಯರ್. ಈಗ 107 ಸಿನಿಮಾ ಮುಗಿದಿದೆ. ಈಗ ಅಥ್ಲೆಟಿಕ್ ಕೋಚ್. ರಮ್ಯಾರನ್ನ ಚಾಂಪಿಯನ್ ಮಾಡೋ ಛಲವಾದಿ ಕೋಚ್ ಆರ್ಯನ್ ಆಗಿ ಅಭಿನಯಿಸಿದ್ದಾರೆ.

ರಮ್ಯಾಗಾಗಿ ಡೇಟ್ಸ್ ಹೊಂದಿಸಿಕೊಂಡ ಶಿವಣ್ಣ

ಇಲ್ಲಿಯವರೆಗೂ ಶಿವಣ್ಣ ಯಾರಿಗೂ ಡೇಟ್ಸ್ ಹೊಂದಿಸಿಕೊಳ್ಳೋ ಪ್ರಮೇಯ ಬಂದಿರಲಿಲ್ಲ. ಆದ್ರೆ ಮೊದಲಬಾರಿ ಸಂಸದೆಯಾಗಿದ್ದ ರಮ್ಯಾ ಡೇಟ್ಸ್ ಗೆ ಹೊಂದಾಣಿಕೆ ಮಾಡಿಕೊಂಡು ಸೂಪರ್ ಅನ್ನಿಸಿಕೊಂಡಿದ್ದಾರೆ ಶಿವಣ್ಣ. ಕೇಳಿದ್ರೆ ಅವರು ಮಂಡ್ಯದ ಜನಪ್ರತಿನಿಧಿ ಅವರ ಜವಾಬ್ದಾರಿಯನ್ನ ನಾವೂ ಅರ್ಥಮಾಡಿಕೊಳ್ಳಬೇಕಲ್ವಾ ಅಂತಾರೆ.

ಕ್ಯಾಮೆರಾ ಹಿಡಿದು ಶೂಟ್ ಮಾಡಿದ್ದಾರೆ ಶಿವಣ್ಣ

ಸಿಂಗಪೂರ್ ಏರ್ಪೋರ್ಟ್ನಲ್ಲಿ ಪರ್ಮಿಷನ್ ಇಲ್ಲದೇ ಶೂಟ್ ಮಾಡೋ ಪ್ರಮೇಯ ಬಂದಾಗ ಕ್ಯಾಮೆರಾಮನ್ ಕೈಯ್ಯಿಂದ ಕ್ಯಾಮೆರಾ ತೆಗೆದುಕೊಂಡು ತಾನೇ ಧೈರ್ಯವಾಗಿ ಶೂಟ್ ಮಾಡಿದ್ರಂತೆ ಶಿವಣ್ಣ.

ರಮ್ಯಾ ರನ್ನಿಂಗ್ ನಲ್ಲಿ ರೆಕಾರ್ಡ್

ಸಿನಿಮಾಗೆ ಆಯ್ಕೆಯಾಗೋ ಮೊದ್ಲು ರಮ್ಯಾ ಒಬ್ಬರು ರನ್ನರ್ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಆದ್ರೆ ರಮ್ಯಾ ಊಟಿಯಲ್ಲಿ ಓದ್ತಿದ್ದಾಗ ನೀಲಗಿರಿ ಜಿಲ್ಲೆಯಲ್ಲಿ ರಮ್ಯಾ ರನ್ನಿಂಗ್ ನ ಮಾಡಿರೋ ದಾಖಲೆ ಈಗಲೂ ಹಾಗೆ ಇದೆಯಂತೆ.

ಜೆಸ್ಸಿಗಿಫ್ಟ್ ಸಂಗೀತದ ಹಾಡುಗಳು

ಮೊದಲ ಬಾರಿಗೆ ಜೆಸ್ಸಿಗಿಫ್ಟ್ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಸಿನಿಮಾಗೆ ಸಂಗೀತ ಮಾಡಿದ್ದು ಕೇಳುಗರು ಮತ್ತೆ ಮತ್ತೆ ಗುನುಗುನಿಸುವಂತಿವೆ ಹಾಡುಗಳು. ಹಾಡುಗಳಲ್ಲಿ ಸ್ಯಾಂಡಲ್ ವುಡ್ ಕಿಂಗ್ ಕ್ವೀನ್ ಜೋಡಿಯನ್ನ ನೋಡೋದೇ ಹಬ್ಬ.

ಆರ್ಯನ್ ಸಿನಿಮಾದಲ್ಲಿದೆ ಡೆವಿಲ್ ಫೈಟ್

ಮನುಷ್ಯರ ಜೊತೆ ಹೀರೋ ಹೊಡೆದಾಡೋದನ್ನ ನೋಡಿದ್ದೀರಿ ಆದ್ರೆ ಇಲ್ಲಿ ಡೆವಿಲ್ ಫೈಟ್ ಕರಾಮತ್ತು ಇರಲಿದೆ. ಶಿವಣ್ಣ ಸಡನ್ ಅಟ್ಯಾಕ್ ಮಾಡೋ ದೆವ್ವಗಳ ಜೊತೆ ಹೊಡೆದಾಡಲಿದ್ದಾರಂತೆ.

English summary
Hat Trick Hero Dr Shivrajkumar and Ramya lead Aaryan movie highlights. The movie is based on the life of Aryan (acted by Shivrajkumar), who is an athletics coach. His protégé, a sprint queen (acted by Ramya) goes on win a major athletics event. Against this backdrop, there is a love story between the two.
Please Wait while comments are loading...