»   » ಜು.18ಕ್ಕೆ ಶಿವರಾಜ್ ಕುಮಾರ್, ರಮ್ಯಾ ಆರ್ಯನ್

ಜು.18ಕ್ಕೆ ಶಿವರಾಜ್ ಕುಮಾರ್, ರಮ್ಯಾ ಆರ್ಯನ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ಚಿತ್ರ ಇದೇ ಜುಲೈ 18ರಂದು ತೆರೆಗೆ ಅಪ್ಪಳಿಸುತ್ತಿದೆ. ರಾಜಕೀಯದ ಕಹಿಯನ್ನು ಮರೆತು ಅತ್ತ ಶಿವಣ್ಣ ಇತ್ತ ರಮ್ಯಾ ಇಬ್ಬರೂ ಜೊತೆಯಾಗಿ ಅಭಿನಯಿಸಿರುವ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಇದೆ.

ಈಗಾಗಲೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು ಕೇಳುಗರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. 'ಆರ್ಯನ್' ಚಿತ್ರತಂಡಕ್ಕೆ ಆರಂಭದಿಂದಲೂ ಸಾಕಷ್ಟು ಅಡೆತಡೆಗಳು ಉಂಟಾಗುತ್ತಲೇ ಬಂದಿದ್ದವು. ಈಗ ಚಿತ್ರ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ತಂದಿದೆ. [ಆರ್ಯನ್ ಆಡಿಯೋ ವಿಮರ್ಶೆ]

Aaryan movie still

ಒಂದು ಕಡೆ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣ, ಇನ್ನೊಂದು ಕಡೆ ಶಿವಣ್ಣ, ರಮ್ಯಾ ಅವರ ರಾಜಕೀಯ ಪಯಣ ಚಿತ್ರ ತೆರೆಗೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿತು. ಇದೀಗ ಜುಲೈ 18ಕ್ಕೆ ತೆರೆಗೆ ಬರುತ್ತಿದ್ದು ರಮ್ಯಾ, ಶಿವಣ್ಣ ಅಭಿಮಾನಿಗಳು ಖುಷಿಯಿಂದ ಕುಣಿದಾಡುವಂತಾಗಿದೆ.

ಚಿತ್ರದಲ್ಲಿ ಶಿವಣ್ಣ ಅಥ್ಲೆಟಿಕ್ ಕೋಚ್ ಆಗಿದ್ದು, ರಮ್ಯಾ ಅಥ್ಲೀಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದ ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ಬಳಿಕ ಗುರುದತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರ ಹೆಸರಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

<iframe width="600" height="360" src="//www.youtube.com/embed/RBQ5CKZaePw?feature=player_embedded" frameborder="0" allowfullscreen></iframe>

ಈ ಚಿತ್ರವನ್ನು ಡಿ.ಕೇಶವ್ ಫಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿದ್ದಾರೆ. ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)
English summary
Hat trick hero Shivrajkumar, lucky star Ramya lead Kannada movie Aaryan releases on 18th July. The movie directed by Guru Datt and Jassie Gift is the music director and Chandrashekar is the cinematographer of the film.&#13;
Please Wait while comments are loading...