»   » ಶಿವಣ್ಣನ 'ಲೀಡರ್' ಚಿತ್ರದ ಫಸ್ಟ್‌ ಲುಕ್ ರಿಲೀಸ್

ಶಿವಣ್ಣನ 'ಲೀಡರ್' ಚಿತ್ರದ ಫಸ್ಟ್‌ ಲುಕ್ ರಿಲೀಸ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯೆಸ್ಟ್ ನಟ. ಸದ್ಯ, ಶಿವಣ್ಣನ ಕೈಯಲ್ಲಿ ಎಷ್ಟು ಸಿನಿಮಾಗಳು ಇವೆ ಅಂತ ಬಹುಶಃ ಎಲ್ಲರಿಗೂ ಗೊತ್ತಿದೆ. ಶಿವಣ್ಣ ಅಭಿನಯದ 'ಶ್ರೀಕಂಠ' ಬಿಡುಗಡೆಗೆ ಸಿದ್ದವಾಗುತ್ತಿದೆ. ಅದಾದ ನಂತರ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರಲಿರುವ 'ಟಗರು' ಹಾಗೂ ಯೋಗಿ ನಿರ್ದೇಶನ ಮಾಡುತ್ತಿರುವ 'ಬಂಗಾರು ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ.

ಇವರೆಡು ಚಿತ್ರಗಳ ಜೊತೆಯಲ್ಲಿ ಸಾಗುತ್ತಿರುವ ಮತ್ತೊಂದು ಚಿತ್ರ ಲೀಡರ್. ಹೌದು, ಸೈಲಾಂಟ್ ಆಗಿ ಶೂಟಿಂಗ್ ಶುರು ಮಾಡಿರುವ ಲೀಡರ್ ಚಿತ್ರ, ಇತ್ತೀಚೇಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳನ್ನ ಅಧಿಕೃತವಾಗಿ ಬಿಡುಗಡೆಯಾಗಿದೆ.[ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್]

ಸಹನಾ ಮೂರ್ತಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಲೀಡರ್' ಚಿತ್ರ, ಈಗಾಗಲೇ ಪ್ರಿ-ಪ್ರೊಡಕ್ಷನ್ ಮುಗಿಸಿ, ಭರ್ಜರಿ ಫೋಟೋಶೂಟ್ ಕೂಡ ಮಾಡಿದೆ. ಸದ್ಯ, ರಿಲೀಸ್ ಆಗಿರುವ 'ಲೀಡರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಅದ್ದೂರಿಯಾಗಿದ್ದು, ಮಾಸ್ ಲುಕ್ ನಲ್ಲಿ ಶಿವಣ್ಣ ಅಬ್ಬರಿಸಿದ್ದಾರೆ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋಗೆ ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೇಶ್, ಹಾಗೂ ಗುರು ಜಗ್ಗೇಶ್, ಪ್ರಣಿತಾ ಕೂಡ ಸಾಥ್ ಕೊಟ್ಟಿದ್ದಾರೆ.

ಹಾಗಾದ್ರೆ, 'ಲೀಡರ್' ಚಿತ್ರದ ಫಸ್ಟ್ ಲುಕ್ ಹೇಗಿದೆ ಅಂತ ಮುಂದೆ ಓದಿ.....

'ಲೀಡರ್' ಶಿವಣ್ಣನ ಫಸ್ಟ್ ಲುಕ್

ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿರುವ ಶಿವರಾಜ್ ಕುಮಾರ್, ಈಗ 'ಲೀಡರ್' ಅವತಾರವೆತ್ತಿದ್ದಾರೆ. 'ಲೀಡರ್' ಚಿತ್ರದಲ್ಲಿ ಶಿವಣ್ಣನ ಗೆಟಪ್ ಈಗ ರಿವಿಲ್ ಆಗಿದ್ದು, ಒನ್ಸ್ ಅಗೈನ್ ಸೆಂಚುರಿಸ್ಟಾರ್ ಘರ್ಜಿಸುವ ಮುನ್ಸೂಚನೆ ಕೊಟ್ಟಿದ್ದಾರೆ.

'ಡಾನ್' ಸೆಂಚುರಿಸ್ಟಾರ್

ಟೈಟಲ್ ಗೆ ತಕ್ಕಂತೆ ಚಿತ್ರದಲ್ಲಿ ಶಿವಣ್ಣ 'ಲೀಡರ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚೇನೂ ಬಿಟ್ಟು ಕೊಟ್ಟಿಲ್ಲ. ಆದ್ರೆ, ಚಿತ್ರದ ಫಸ್ಟ್ ಲುಕ್ ಗಮನಿಸಿದ್ರೆ, ಡಾನ್ ಪಾತ್ರ ಮಾಡಿರಬಹುದು ಎಂಬ ಅನುಮಾನ ಕಾಡುತ್ತೆ.

'ಸ್ಟೈಲಿಶ್' ಶಿವಣ್ಣ

54ರ ಹರೆಯದಲ್ಲೂ ಶಿವರಾಜ್ ಕುಮಾರ್ ಖದರ್ ಸ್ವಲ್ಪನೂ ಕಮ್ಮಿಯಾಗಿಲ್ಲ. ಕ್ಲಾಸ್, ಮಾಸ್ ಗೆ ಬಾಸ್ ಆಗಿರುವ ಶಿವಣ್ಣ, ಸ್ಟೈಲ್ ಗೂ ಕಿಂಗ್ ಅಂತ 'ಲೀಡರ್' ಪೋಸ್ಟರ್ ಹೇಳುತ್ತಿದೆ.

ದೊಡ್ಡ ತಾರ ಬಳಗ

'ಲೀಡರ್' ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವಿದೆ. ಶಿವಣ್ಣನ ಜೊತೆಯಲ್ಲಿ ನಟ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ವಂಶಿ ಕೃಷ್ಣ ಹಾಗೂ ಲೂಸ್ ಮಾದ ಯೋಗೇಶ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

ವಿಲನ್ ಆಗಿ ಲೂಸ್ ಮಾದ

ಈಗಾಗಲೇ ಗೊತ್ತಿರುವಾಗ 'ಲೀಡರ್' ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ವಿಲನ್ ಪಾತ್ರ ಮಾಡುತ್ತಿದ್ದಾರಂತೆ. ಈಗ ರಿಲೀಸ್ ಆಗಿರುವ ಪೋಸ್ಟರ್ ನಲ್ಲೂ ಶಿವಣ್ಣ ಹಾಗೂ ಲೂಸ್ ಮಾದ ಮುಖಾಮುಖಿಯಾಗಿ ಲಾಂಗ್ ಹಿಡಿದು ಖಡಕ್ ಫೋಸ್ ಕೊಟ್ಟಿದ್ದಾರೆ.[ಸತತ ಸೋಲಿನಿಂದ ಕಂಗೆಟ್ಟ ಯೋಗಿ ಕೈ ಹಿಡಿದ 'ಲೀಡರ್'.!]

ಲೀಡರ್ ಜೊತೆ ಪ್ರಣಿತಾ

'ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ 'ಪ್ರಣೀತಾ ಸುಭಾಶ್' ನಾಯಕಿಯಾಗಿದ್ದಾರೆ.[ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?]

ವಿಶೇಷ ಪಾತ್ರದಲ್ಲಿ ದೀಪಿಕಾ ಕಾಮಯ್ಯ

ಮಲ್ಟಿಸ್ಟಾರ್ ಕಾಸ್ಟಿಂಗ್ ಹೊಂದಿರುವ 'ಲೀಡರ್' ಚಿತ್ರದಲ್ಲಿ 'ಚಿಂಗಾರಿ' ಬೆಡಗಿ ದೀಪಿಕಾ ಕಾಮಯ್ಯ ಕೂಡ ಕಾಣಿಸಿಕೊಳ್ಳುತ್ತಿದ್ದು, ಪತ್ರಕರ್ತೆಯಾಗಿ ಬಣ್ಣ ಹಚ್ಚಲಿದ್ದಾರಂತೆ.

ಹ್ಯಾಟ್ರಿಕ್ ಹೀರೋ ಹಾಗೂ ಶ್ರೀನಗರ ಕಿಟ್ಟಿ ಮಗಳು

ಶ್ರೀನಗರ ಕಿಟ್ಟಿ-ಭಾವನಾ ದಂಪತಿಯ ಪುತ್ರಿ ಪರಿಣಿತಾ 'ಲೀಡರ್' ಚಿತ್ರದಲ್ಲಿ ಶಿವಣ್ಣನ ಮಗಳ ಪಾತ್ರ ನಿರ್ವಹಿಸಲಿದ್ದಾರೆ.

ಸಹನಾ ಮೂರ್ತಿ ಆಕ್ಷನ್ ಕಟ್

ಇಂಟ್ರೆಸ್ಟಿಂಗ್ ಕಥಾಹಂದರ ಹೊಂದಿರುವ 'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಲಿದ್ದಾರೆ. ತರುಣ್ ಶಿವಣ್ಣ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಗುರು ಪ್ರಶಾಂತ್ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಲೀಡರ್ ಚಿತ್ರ ಮುಹೂರ್ತ ಮಾಡಿ ಶೂಟಿಂಗ್ ಶುರು ಕೂಡ ಮಾಡಿದೆ.

English summary
Kannada Actor Shiva Rajkumar Starrer Kannada Movie 'Leader' First look Posters Release. The movie features Pranitha, Deepika Kamaiah, Vijay Raghavendra, Yogesh and is directed by Sahana Murthy of 'Rose' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada