»   » ಲಾಂಗು, ಮಚ್ಚಿಗೆ ಗುಡ್ ಬೈ ಹೇಳಿದ ಹ್ಯಾಟ್ರಿಕ್ ಹೀರೋ

ಲಾಂಗು, ಮಚ್ಚಿಗೆ ಗುಡ್ ಬೈ ಹೇಳಿದ ಹ್ಯಾಟ್ರಿಕ್ ಹೀರೋ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಲಾಂಗು, ಮಚ್ಚಿಗೆ ಗುಡ್ ಬೈ ಹೇಳುತ್ತಿದ್ದಾರೆ. ಇದೀಗ ಅವರ ಕೈಗೆ ಇನ್ನೊಂದು ಅಸ್ತ್ರ ಕೊಟ್ಟಿದ್ದಾರೆ ನಿರ್ದೇಶಕರು. ಸಾಕಷ್ಟು ಹಿಂದೆಯೇ ಅನೌನ್ಸ್ ಆಗಿದ್ದ ಅವರ ಮುಂದಿನ ಚಿತ್ರ 'ಶಿವಲಿಂಗ'ದಲ್ಲಿ ಶಿವಣ್ಣ ಗನ್ ಹಿಡಿಯುತ್ತಿದ್ದಾರೆ.

ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ 'ಶಿವಲಿಂಗ' ಚಿತ್ರ ಘೋಷಣೆಯಾಗಿತ್ತು. ಇದೀಗ ಸೆಟ್ಟೇರುವ ಸಮಯ ಬಂದಿದೆ. ಡಿಸೆಂಬರ್ 15ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಸೆಟ್ಟೇರಲಿದೆ.

Shivrajkumar sporting a gun in Shivalinga

ಇದೇ ಮೊದಲ ಬಾರಿಗೆ ಶಿವಣ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಖ್ಯಾತ ನಿರ್ದೇಶಕ ಪಿ ವಾಸು. ಚಿತ್ರದ ನಾಯಕಿ ಯಾರು ಎಂಬುದು ಗೊತ್ತಾಗಬೇಕಾದರೆ ಡಿಸೆಂಬರ್ 15ರ ತನಕ ಕಾಯಲೇಬೇಕು. [ಈ ರಾಜಕೀಯ ಸಹವಾಸ ಸಾಕಾಗಿ ಹೋಗಿದೆ: ಶಿವಣ್ಣ]

ಈ ಬಾರಿ ವಾಸು ಕೋಲಿವುಡ್ ನ ಚೆಲುವೆಗೆ ಮಣೆಹಾಕಲಿದ್ದಾರೆ ಎಂಬುದು ವಿಶೇಷ. ಅವರು ಯಾರು ಎಂಬುದನ್ನು ಮಾತ್ರ ಸದ್ಯಕ್ಕೆ ಗುಟ್ಟಾಗಿ ಇಡಲಾಗಿದೆ. ಚಿತ್ರದಲ್ಲಿ ಖಡಕ್ ಸಿಐಡಿ ಅಧಿಕಾರಿಯಾಗಿ ಶಿವಣ್ಣ ಕಾಣಿಸಲಿದ್ದಾರೆ.

ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ, ಆರ್ ಎಕ್ಸ್ ಸೂರಿ ಚಿತ್ರಗಳನ್ನು ನಿರ್ಮಿಸಿದ್ದ ಸುರೇಶ್ ಅವರು ಶಿವಲಿಂಗ ಚಿತ್ರದ ನಿರ್ಮಾಪಕರು. ಬೆಳ್ಳಿ ಚಿತ್ರದಲ್ಲಿ ಒಂದೇ ಹಿಡಿಯ ಐದು ಲಾಂಗ್ ಗಳನ್ನು ಝಳಪಿಸಿದ್ದ ಶಿವಣ್ಣ ಈಗ ಸಿಐಡಿ ಅಧಿಕಾರಿಯಾಗಿ ಗನ್ ಹಿಡಿಯುತ್ತಿದ್ದಾರೆ. (ಏಜೆನ್ಸೀಸ್)

English summary
Century Star Shivrajkumar should sporting a gun in his upcoming movie Shivalinga. The muharat has been fixed for December 15 and The film is directed by P Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada