For Quick Alerts
  ALLOW NOTIFICATIONS  
  For Daily Alerts

  'ಸಿಂಪಲ್ಲಾಗ್' ಸುನಿ ಜೊತೆ ಶಿವಣ್ಣನ ಮುಂದಿನ ಚಿತ್ರ

  By Rajendra
  |

  ಈಗಷ್ಟೇ 'ಭಜರಂಗಿ' ಚಿತ್ರದ ಹುಮ್ಮಸ್ಸಿನಲ್ಲಿ ಜೀಕಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ಶಿವಣ್ಣ ಪ್ರಯೋಗಶೀಲ ನಿರ್ದೇಶಕ ಸುನಿ ಜೊತೆ ಕೈಜೋಡಿಸಿದ್ದಾರೆ. ಹೊಸಬರೊಂದಿಗಿನ ಸಿನಿಮಾ ಎಂದರೆ ಕುತೂಹಲ ಇದ್ದೇ ಇರುತ್ತದೆ ತಾನೆ?

  'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಗಮನಸೆಳೆದ ನಿರ್ದೇಶಕ ಸುನಿ. ಈಗವರು 'ಬಹುಪರಾಕ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾಎರ್. ಈ ಚಿತ್ರದ ನಾಯಕ ಡೈಮಂಡ್ ಸ್ಟಾರ್ ಶ್ರೀನಗರಕಿಟ್ಟಿ. ಈಗಾಗಲೆ ಈ ಚಿತ್ರದ ಟ್ರೇಲರ್ ಸಖತ್ ಸದ್ದು ಮಾಡಿರುವುದು ಗೊತ್ತೇ ಇದೆ. [ಭಜರಂಗಿ ಚಿತ್ರವಿಮರ್ಶೆ]

  ಈಗ ಶಿವಣ್ಣ ಜೊತೆಗಿನ ಚಿತ್ರಕ್ಕೆ ಸುನಿ ಇಟ್ಟಿರುವ ಹೆಸರು 'ಮನಮೋಹಕ'. ಹಳೆ ಬೇರು ಹೊಸ ಚಿಗುರು ಎಂಬಂತೆ ಹೆಸರೇ ಇಷ್ಟು ಮೋಹಕವಾಗಿದೆ ಎಂದರೆ ಇನ್ನು ಚಿತ್ರವೂ ಅಷ್ಟೇ 'ಮನಮೋಹಕ'ವಾಗಿರುತ್ತದೆ ಎಂಬುದು ಮೊದಲ ನೋಟಕ್ಕೇ ಗೊತ್ತಾಗುತ್ತದೆ.

  'ಬಹುಪರಾಕ್' ಚಿತ್ರದ ಬಳಿಕ 'ಮನಮೋಹಕ' ಚಿತ್ರ ಸೆಟ್ಟೇರಲಿದೆ. ಇನ್ನು 'ಬಹುಪರಾಕ್' ಚಿತ್ರದ ಬಗ್ಗೆ ಹೇಳಬೇಕೆಂದರೆ ಕಿಟ್ಟಿ ಜೊತೆ ಮೇಘನಾ ಸುಂದರ್ ರಾಜ್ ಜೋಡಿಯಾಗಿರೋ 'ಬಹುಪರಾಕ್' ಚಿತ್ರ 2014ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. [ಸಿಂಪಲ್ಲಾಗಿ ಕಾಯ್ತಾ ಇರಿ 'ಬಹುಪರಾಕ್' ಬರ್ತಾ ಇದೆ]

  ಬಹುಪರಾಕ್ ಚಿತ್ರ ಸಾಕಷ್ಟು ವಿಶೇಷತೆಗಳನ್ನ ಹೊಂದಿದ್ದು ಅದ್ಧೂರಿಯಾಗಿ ಶೂಟ್ ಮಾಡಿರೋ ಸಿನಿಮಾ. ಬರುವ ಫೆಬ್ರುವರಿ ಅಥವಾ ಮಾರ್ಚ್ ವೇಳೆಗೆ ತಯಾರಾಗಲಿರೋ ಸಿನಿಮಾ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ರಿಲೀಸಾಗಿ ಹೆಚ್ಚೂ ಕಡಿಮೆ ಒಂದು ವರ್ಷಕ್ಕೆ ಸರಿಯಾಗಿ 'ಬಹುಪರಾಕ್' ತೆರೆಗೆ ಬರಲಿದೆ. (ಒನ್ಇಂಡಿಯಾ ಕನ್ನಡ)

  English summary
  Century Star Shivrajkumar's forthcoming film with 'Simple Agi Ondh Love Story' fame Suni. The movie titled as Manamohaka. Which will go on sets after Bahuparak. This will be an interesting combo says director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X