»   » ಹ್ಯಾಟ್ರಿಕ್ ಹೀರೋ 'ಬೆಳ್ಳಿ'ರಥ ರಾಜ್ಯಾದ್ಯಂತ ರನ್ನಿಂಗ್

ಹ್ಯಾಟ್ರಿಕ್ ಹೀರೋ 'ಬೆಳ್ಳಿ'ರಥ ರಾಜ್ಯಾದ್ಯಂತ ರನ್ನಿಂಗ್

By: ಜೀವನರಸಿಕ
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬೆಳ್ಳಿ' ಚಿತ್ರ ಇದೇ ಶುಕ್ರವಾರ (ಅಕ್ಟೋಬರ್ 31) ತೆರೆಗೆ ಬರ್ತಿದೆ. ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣನಿಗೆ-ಬ್ಯೂಟಿ ಡಾಲ್ ಕೃತಿ ಖರಬಂದ ಜೋಡಿಯಾಗಿರೋ ಚಿತ್ರ 'ಬೆಳ್ಳಿ'. ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರದ ಕಥೆ ಅಪರೂಪವಾಗಿರೋದ್ರಿಂದ ಚಿತ್ರಕ್ಕಾಗಿ ನಿರ್ಮಾಪಕರು ಕೋಟಿ ಕೋಟಿ ಹಣ ಸುರಿದಿದ್ದಾರೆ.

ಚಿತ್ರವನ್ನ ನಿಗದಿತ ಸಮಯದಲ್ಲಿ ಅಚ್ಚುಕಟ್ಟಾಗಿ ತೆರೆಗೆ ತರ್ತಿರೋ ಚಿತ್ರತಂಡಕ್ಕೆ ಗೆಲುವಿನ ವಿಶ್ವಾಸವಿದೆ. ಮಲ್ಟಿಸ್ಟಾರರ್ ಚಿತ್ರವಾಗಿರೋ 'ಬೆಳ್ಳಿ' ಚಿತ್ರದ ಪ್ರಚಾರವನ್ನ ಭರ್ಜರಿಯಾಗೇ ನಡೆಸ್ತಿದೆ. ಬೆಳ್ಳಿತೆರೆಯಲ್ಲಿ ಬೆಳ್ಳಿ ಮೇಳೈಸೋಕೆ ಶಿವಣ್ಣ ಅಂಡ್ ಟೀಂ ಭರ್ಜರಿ ತಯಾರಿ ಮಾಡಿಕೊಳ್ತಿದೆ.

ರಮ್ಯಾ-ಶಿವಣ್ಣ ಜೋಡಿಯ 'ಆರ್ಯನ್' ಅಂದುಕೊಳ್ಳೋ ಮಟ್ಟಿಗೆ ಯಶಸ್ಸು ಪಡೆಯದೇ ಇರೋದ್ರಿಂದ ಶಿವಣ್ಣ ಕೂಡ ಬೆಳ್ಳಿ ಚಿತ್ರದ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ತಯಾರಾಗಿದ್ದಾರೆ. ಕಥೆಯಲ್ಲೇ ಕಿಕ್ ಇಟ್ಟಿರೋ ಬೆಳ್ಳಿಯ ಎಂಟ್ರಿ ಹೇಗಿರುತ್ತೆ. ಬೆಳ್ಳಿ ಚಿತ್ರದ ಥ್ರಿಲ್ಲಿಂಗ್ ಅಂಶಗಳೇನು ಅನ್ನೋದು ಸ್ಲೈಡ್ ನಲ್ಲಿದೆ ನೋಡಿ.

ಬೆಳ್ಳಿ ಪಾತ್ರವೇ ಹೈಲೈಟ್

ಚಿತ್ರದಲ್ಲಿ ಶಿವರಾಜ್ ಕುಮಾರ್ ಮಾಡಿರೋ ಬೆಳ್ಳಿ ಪಾತ್ರದಲ್ಲಿ ಭರ್ಜರಿ ತಾಕತ್ತಿದೆ. ಅದು ಶಿವಣ್ಣ ಹಾಕಿರೋ ಗೆಟಪ್ ನಲ್ಲಿ ಕಾಣಿಸಿದೆ. ಆದ್ರೆ ಅಲ್ಲಿರೋದು ಸ್ಟಿಲ್ ಅಷ್ಟೇ ಒಳಗೆ ಬಂದ್ರೆ ಬೆಳ್ಳಿಯ ನಿಜವಾದ ಪವರ್ ತಿಳಿಯುತ್ತಂತೆ.

ಬೆಳ್ಳಿಯ ಇನ್ನೊಂದು ಶೇಡ್

ಬೆಳ್ಳಿ ಎರಡು ಶೇಡ್ ನ ಚಿತ್ರ ಅಂತಿದೆ ಗಾಂಧಿನಗರ, ಮಲ್ಟಿಸ್ಟಾರರ್ ಚಿತ್ರ ಬೆಳ್ಳಿಯಲ್ಲಿ ಪ್ರತೀಪಾತ್ರಕ್ಕೂ ಶಕ್ತಿ ಇದೆ. ಪ್ರತೀ ಪಾತ್ರವೂ ಇಲ್ಲಿ ಹೀರೋನೇ ಆದ್ರೆ ಬೆಳ್ಳಿ ವಿಭಿನ್ನ ವಿಶಿಷ್ಠವಂತೆ.

ಶಿವಣ್ಣ-ಕೃತಿ ಖರಬಂದ ಜೋಡಿ

ಚಿತ್ರದಲ್ಲಿ ಸೆಂಟಿಮೆಂಟ್ ಮತ್ತು ಆಕ್ಷ್ಯನ್ ನಲ್ಲಿ ಕಿಂಗ್ ಆಗಿ ಶಿವಣ್ಣ ಮಿಂಚಿದ್ರೆ, ಶಿವಣ್ಣ ಖದರ್ ಗೆ ಕಲರ್ ಎರಕ ಹುಯ್ಯೋದು ಬ್ಯೂಟಿ ಡಾಲ್ ಕೃತಿ. ಚಿತ್ರದಲ್ಲಿ ಕೃತಿ ಅಭಿನಯವೂ ನಿಮ್ಮನ್ನ ಪ್ರೇಮ್ ಅಡ್ಡಾ ಸಿನಿಮಾದಂತೆ ತಣ್ಣಗೆ ಕೊರೆಯುತ್ತೆ ಅನ್ನೋದು ಚಿತ್ರತಂಡದ ನಂಬಿಕೆ.

ನಿಮ್ಮೂರಿಗೂ ಬರುತ್ತೆ ಬೆಳ್ಳಿ ರಥ

ಶಿವಣ್ಣ ಅಭಿನಯದ ಬೆಳ್ಳಿ ಚಿತ್ರತಂಡ ಬೆಳ್ಳಿರಥದ ಮೂಲಕ ರಾಜ್ಯಾದ್ಯಂತ ಸಂಚರಿಸ್ತಿದೆ. ಚಿತ್ರತಂಡದವ್ರು ಪ್ರತೀ ತಾಲೂಕಿನಲ್ಲೂ ಬೆಳ್ಳಿ ಚಿತ್ರದ ವಿಭಿನ್ನತೆಯನ್ನ ಸಾರ್ತಿದ್ದಾರೆ. ನಾಳೆ ನಾಡಿದ್ದು ಬೆಳ್ಳಿ ರಥ ನಿಮ್ಮೂರಿಗೂ ಬರಬಹುದು.

ಬೆಳ್ಳಿ ರಥ ರಾಜ್ಯಾದ್ಯಂತ

ಬೆಳ್ಳಿ ಚಿತ್ರತಂಡ ರಾಜ್ಯಾದ್ಯಂತ ವಿಭಿನ್ನ ಪ್ರಚಾರ ಮಾಡ್ತಿದೆ. ಬೆಳ್ಳಿ ಚಿತ್ರದ ವಾಹನಗಳು ರಾಜ್ಯಾದ್ಯಂತ ಸಂಚರಿಸಿ ಬೆಳ್ಳಿ ಚಿತ್ರದ ಬಗ್ಗೆ ಪ್ರಶ್ನೆ ಕೇಳಿ ಬಹುಮಾನವನ್ನೂ ನೀಡ್ತಿದೆ.

ಜನುಮದ ಜೋಡಿ ನೆನಪಿಸೋ ಹಾಡು

ವಿ ಶ್ರೀಧರ್ ಸಂಗೀತದ ಹಾಡುಗಳ ಜನುಮದ ಜೋಡಿ ಚಿತ್ರವನ್ನ ನೆನಪಿಸುವಂತಿದೆ. ಚಿತ್ರದ ಹಾಡುಗಳು ಈಗಾಗ್ಲೇ ಚಿತ್ರಪ್ರೇಮಿಗಳ ಕಿವಿಯಲ್ಲಿ ಗುಂಯ್ ಗುಡುತ್ತಿವೆ.

English summary
Century Star Shivrajkumar, Kriti Kharbanda starrer Kannada movie 'Belli' releasing all over the state on 31st October, 2014. The movie team special designed 'Belli chariot' for promotional purpose. Shivanna Portrays an underworld don, who gets into the whirlpool of love and emotions. Movie is Directed by "Mussanje mathu" Mahesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada