»   » 'ನನ್ನ ರಾಜ್ಯ, ನನ್ನ ಬಾವುಟ'ಕ್ಕೆ ಭರ್ಜರಿ ಬೆಂಬಲ ನೀಡುತ್ತಿರುವ 'ಶಿವು ಅಡ್ಡ'

'ನನ್ನ ರಾಜ್ಯ, ನನ್ನ ಬಾವುಟ'ಕ್ಕೆ ಭರ್ಜರಿ ಬೆಂಬಲ ನೀಡುತ್ತಿರುವ 'ಶಿವು ಅಡ್ಡ'

Posted By:
Subscribe to Filmibeat Kannada

ಕನ್ನಡ ನೆಲ, ಜಲ, ನಾಡು, ನುಡಿ ವಿಷಯ ಬಂದಾಗ ಕನ್ನಡಿಗರಿಗೆ ಅದರಲ್ಲೂ ಕನ್ನಡ ಸಿನಿ ಪ್ರಿಯರಿಗೆ ಥಟ್ ಅಂತ ನೆನಪಾಗುವುದು 'ಅಣ್ಣಾವ್ರು'. ಯಾಕಂದ್ರೆ 'ಗೋಕಾಕ್ ಚಳುವಳಿ'ಯ ಪ್ರಮಾಣವನ್ನು ಅಗಾಧಗೊಳಿಸಿದ ವ್ಯಕ್ತಿತ್ವವೇ ಡಾ.ರಾಜ್ ಕುಮಾರ್.!

ಡಾ.ರಾಜ್ ಕುಮಾರ್ ರವರ ಒಂದೇ ಒಂದು ಕೂಗಿಗೆ ಇಡೀ ಕನ್ನಡ ಚಿತ್ರರಂಗವೇ 'ಗೋಕಾಕ್ ಚಳುವಳಿ'ಗೆ ಧುಮುಕಿತು. ಅತಿ ದೊಡ್ಡ ಸ್ವರೂಪ ಪಡೆದುಕೊಂಡ 'ಗೋಕಾಕ್ ಚಳುವಳಿ'ಗೆ ಕರ್ನಾಟಕ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿತು. ಅಂದಿನಿಂದ ಕನ್ನಡಿಗರ ಪಾಲಿಗೆ ಡಾ.ರಾಜ್ ಕುಮಾರ್ 'ಆದರ್ಶ ವ್ಯಕ್ತಿ' ಹಾಗೂ ಕನ್ನಡಿಗರ ರಾಯಭಾರಿ.!

ಡಾ.ರಾಜ್ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತಕ್ಕೆ ಸ್ಪೂರ್ತಿ ಎಂದ ಯೋಗಗುರು

ಇದೀಗ ಕರುನಾಡಿನಲ್ಲಿ ಕನ್ನಡಿಗರ ಪ್ರತ್ಯೇಕ ಧ್ವಜದ ಕೂಗು ಕೇಳಿಬಂದಿರುವುದರಿಂದ ಕನ್ನಡ ಪರ ಹೋರಾಟಗಾರರು ಡಾ.ರಾಜ್ ಸ್ಮರಣೆ ಮಾಡುತ್ತಿದ್ದಾರೆ. ಅದರಲ್ಲೂ ''ರಾಜ'ವಂಶ'' ಹಾಗೂ ಕನ್ನಡ ಚಿತ್ರರಂಗದ ಅಪ್ಪಟ ಅಭಿಮಾನಿಗಳಾಗಿರುವ 'ಶಿವು ಅಡ್ಡ' ಬಳಗ 'ನನ್ನ ರಾಜ್ಯ ನನ್ನ ಬಾವುಟ' (ಮೈ ಸ್ಟೇಟ್ ಮೈ ಫ್ಲ್ಯಾಗ್) ಅಭಿಯಾನಕ್ಕೆ ಭರ್ಜರಿ ಬೆಂಬಲ ನೀಡಿದೆ. ಮುಂದೆ ಓದಿರಿ...

ಟ್ವಿಟ್ಟರ್ ನಲ್ಲಿ ಶಿವು ಅಡ್ಡ ಬೆಂಬಲ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಇಡೀ ಅಣ್ಣಾವ್ರ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಬೆಂಬಲಿಗರಾಗಿರುವ 'ಶಿವು ಅಡ್ಡ' ಬಳಗ ಟ್ವಿಟ್ಟರ್ ನಲ್ಲಿ 'ನನ್ನ ರಾಜ್ಯ ನನ್ನ ಬಾವುಟ' ಅಭಿಯಾನಕ್ಕೆ ಜೈಕಾರ ಹಾಕಿದೆ.

ಭಾರತೀಯತೆ ಕಮ್ಮಿ ಆಗಲ್ಲ

''ನನ್ನ ರಾಜ್ಯ ನನ್ನ ಬಾವುಟ' ಎಂದಾಕ್ಷಣ ನನ್ನ ಭಾರತೀಯತೆ ಕಮ್ಮಿ ಆಗಲ್ಲ'' ಎಂಬ ಸಂದೇಶ ಸಾರುವ 'ಕೆಂಪು-ಹಳದಿ' ಬಾವುಟ ಹಿಡಿದಿರುವ ಡಾ.ರಾಜ್ ಭಾವಚಿತ್ರವನ್ನ 'ಶಿವು ಅಡ್ಡ' ಟ್ವೀಟ್ ಮಾಡಿದೆ.

ಇಂದು ಅಣ್ಣಾವ್ರು ನಮ್ಮೊಂದಿಗೆ ಇದ್ದಿದ್ದರೆ.?

''ಇಂದು ಅಣ್ಣಾವ್ರು ನಮ್ಮೊಂದಿಗೆ ಇದ್ದಿದ್ದರೆ, ಬಿಜೆಪಿಯ ದೆಹಲಿ ಗುಲಾಮರು ನಮಗೆ ಕೆಂಪು ಹಳದಿ ಬಾವುಟ ಬೇಡ ಅಂತ ಕ್ಯಾತೆ ತೆಗೆಯೋ ಧೈರ್ಯ ತೋರ್ತಿದ್ರಾ.?'' ಎಂದು ರಾಮಚಂದ್ರ ಎಂಬುವರು ಮಾಡಿದ ಟ್ವೀಟ್ ನೂ ಶಿವು ಅಡ್ಡ ರೀಟ್ವೀಟ್ ಮಾಡಿಕೊಂಡಿದೆ.

ರಾಜ್ ರಾಜ್ಯಭಾರ.!

ಸದ್ಯ ಟ್ವಿಟ್ಟರ್ ನ ತುಂಬೆಲ್ಲ ಡಾ.ರಾಜ್ ಕುಮಾರ್ ಹಾಗೂ ಹಳದಿ-ಕೆಂಪು ಬಾವುಟವೇ ರಾರಾಜಿಸುತ್ತಿದೆ.

ಶಿವಣ್ಣನ ಅಭಿಮಾನಿಗಳೆಲ್ಲ ಒಂದಾಗಿದ್ದಾರೆ

'ಮೈ ಸ್ಟೇಟ್ ಮೈ ಫ್ಲ್ಯಾಗ್' ಅಭಿಯಾನಕ್ಕೆ ಶಿವಣ್ಣನ ಅಭಿಮಾನಿಗಳು ಕೂಡ ಕೈ ಜೋಡಿಸಿದ್ದಾರೆ.

English summary
Shivu Adda, Followers of Dr.Raj Kumar family and Supporters of Kannada Film Industry supports 'My State My Flag' 'One Union many Flags' campaign in Twitter

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada