»   » ಕನ್ನಡದ ಶೋಲೆ ಫಿಕ್ಸ್ :ಪ್ರಮುಖ ಪಾತ್ರದಲ್ಲಿ ದರ್ಶನ್, ರೈ

ಕನ್ನಡದ ಶೋಲೆ ಫಿಕ್ಸ್ :ಪ್ರಮುಖ ಪಾತ್ರದಲ್ಲಿ ದರ್ಶನ್, ರೈ

Posted By:
Subscribe to Filmibeat Kannada

ಭಾರತೀಯ ಸಿನಿಮಾದ ಸಾರ್ವಕಾಲಿಕ ಹಿಟ್ ಚಿತ್ರ 'ಶೋಲೆ' ಕನ್ನಡಕ್ಕೆ ರಿಮೇಕ್ ಆಗುತ್ತಿರುವುದು ಖಚಿತವಾಗಿದೆ. ಈ ಚಿತ್ರದ ರೈಟ್ಸ್ ಪಡೆದಿರುವ ಆನಂದ್ ಅಪ್ಪುಗೋಳ್ ಈ ವಿಷಯವನ್ನು ಮಾಧ್ಯಮಗಳ ಮುಂದೆ ಖಚಿತ ಪಡಿಸಿದ್ದಾರೆ.

ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡೇ ಮಾಡುತ್ತೇನೆ. ಇದೇ ಆಗಸ್ಟ್ 15ರಂದು ಚಿತ್ರದ ಮಹೂರ್ತ ನಡೆಯಲಿದೆ ಎಂದು ಅಪ್ಪುಗೋಳ್ ಸ್ಪಷ್ಟ ಪಡಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನೂರು ದಿನದ ಸಂಭ್ರಮದಲ್ಲಿ ಮಾತನಾಡುತ್ತಿದ್ದ ಅಪ್ಪುಗೋಳ್, ಶೋಲೆ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಬೇಕೆನ್ನುವುದು ನನ್ನ ಬಹು ದಿನದ ಕನಸು. ಸ್ವಾತಂತ್ರ್ಯದಿನದಂದು ಚಿತ್ರದ ಮಹೂರ್ತಕ್ಕೆ ಸಿದ್ದತೆ ನಡೆಸುತ್ತೇನೆ ಎಂದಿದ್ದಾರೆ.

 Sholay in Kannada launch on August 15th

35 ವರ್ಷದ ಹಿಂದೆ ಶೋಲೆ ಚಿತ್ರ ಬಿಡುಗಡೆಯಾದಾಗ ಸುಮಾರು 100 ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಸಂಗೊಳ್ಳಿ ರಾಯಣ್ಣ ಚಿತ್ರದ ಯಶಸ್ಸು ಅದ್ದೂರಿಯಾಗಿ ಶೋಲೆ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲು ಸ್ಪೂರ್ತಿ ನೀಡಿದೆ.

ದರ್ಶನ್ ಮತ್ತು ಸುದೀಪ್ ನಿಜ ಜೀವನದಲ್ಲೂ ಉತ್ತಮ ಸ್ನೇಹಿತರು. ಇಬ್ಬರನ್ನೂ ಚಿತ್ರದಲ್ಲಿ ನಟಿಸುವಂತೆ ಒತ್ತಾಯಿಸುತ್ತಿದ್ದೇನೆ. ದರ್ಶನ್ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸುದೀಪ್ ಚಿತ್ರದಲ್ಲಿ ನಟಿಸಲು ಒಪ್ಪದಿದ್ದರೆ ಬೇರೆ ನಟನನ್ನು ಹುಡುಕುತ್ತೇನೆ.

ಧರ್ಮೇಂದ್ರನ ಪಾತ್ರದಲ್ಲಿ ದರ್ಶನ್ ಮತ್ತು ಅಮಿತಾಬ್ ಬಚ್ಚನ್ ಪಾತ್ರದಲ್ಲಿ ಸುದೀಪ್ ನಟಿಸಬೇಕೆನ್ನುವುದು ನನ್ನ ಆಸೆ. ಗಬ್ಬರ್ ಸಿಂಗ್ ಪಾತ್ರವನ್ನು ಪ್ರಕಾಶ್ ರೈ ಅವರ ಬಳಿ ಮಾಡಿಸಬೇಕೆಂದಿದ್ದೇನೆ ಎಂಗು ನಿರ್ಮಾಪಕ ಆನಂದ್ ಅಪ್ಪುಗೋಳ್ ಹೇಳಿದ್ದಾರೆ.

ಕಿಚ್ಚ ಸುದೀಪ್ 'ಶೋಲೆ' ಒಂದು ಲೆಜೆಂಡ್ ಚಿತ್ರ. ಅಂಥಹಾ ಚಿತ್ರವನ್ನು ರಿಮೇಕ್ ಮಾಡಲು ಹೋಗಬಾರದು ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.

English summary
"Kranti Veera Sangolli Raayanna' producer Anand Appugol going to remake the "Sholay' film in Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada