»   » ಇತಿಹಾಸ ನಿರ್ಮಿಸಲು ಮುಂದಾಗಿರುವ ಸ್ಮೈಲ್ ಗುರು ಚಿತ್ರ

ಇತಿಹಾಸ ನಿರ್ಮಿಸಲು ಮುಂದಾಗಿರುವ ಸ್ಮೈಲ್ ಗುರು ಚಿತ್ರ

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಿರು ಚಿತ್ರಗಳು ಮೊದಲಿಗೆ ಬರೀ ಯುಟ್ಯೂಬ್ ಗೆ ಮಾತ್ರ ಸೀಮಿತವಾಗಿತ್ತು. ಯಾರೂ ಕಿರುಚಿತ್ರಕ್ಕೆ ಅಷ್ಟು ಪ್ರಾಮುಖ್ಯತೆ ಕೊಡದ ಕಾಲನೂ ಇತ್ತು. ಆದರೆ, ಈಗ ಪ್ರತಿಭಾವಂತ ಯುವಕರು ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಮೊದಲು ಈ ರೀತಿ ಕಿರುಚಿತ್ರ ಮಾಡುವುದು ವಾಡಿಕೆ ಆಗಿದೆ. ಹಾಗೇ ಕಿರುಚಿತ್ರಕ್ಕೆ ಬೇಡಿಕೆ ಕೂಡಾ ಬಂದಿದೆ. ಆದರೆ, ನಾವು ಈಗ ಹೇಳುತ್ತಿರುವ ಕಿರುಚಿತ್ರದಲ್ಲಿ ತುಂಬಾ ವಿಶೇಷಕರ ಸಂಗತಿಗಳಿವೆ. ಆ ವಿಶೇಷಕರ ವಿಷಯಗಳಿಂದ ತುಂಬ ಸದ್ದು ಮಾಡುತ್ತಿರುವ ಕಿರುಚಿತ್ರದ ಹೆಸರು 'ಸ್ಮೈಲ್ ಗುರು'. ಈ ಚಿತ್ರದ ಪ್ರೊಮೋ ಹೊಸ ಇತಿಹಾಸ ನಿರ್ಮಿಸಲಿದೆ.

  ಈ ಸ್ಮೈಲ್ ಗುರು ಚಿತ್ರ ಮುಹೂರ್ತದಲ್ಲೇ ಒಂದು ದಾಖಲೆ ಬರೆದಿದೆ. ಕಿರುಚಿತ್ರಕ್ಕೆ ದೊಡ್ಡ ಮಟ್ಟದ ಮುಹೂರ್ತ ಆಯೋಜಿಸಲಾಗಿತ್ತು ಹಾಗೂ ಹಲವಾರು ಗಣ್ಯರು ಆಗಮಿಸಿದ್ದರು.

  ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾ ರಾ ಗೋವಿಂದು. ರಾಜಕೀಯದಲ್ಲಿ ಡಾಕ್ಟರೇಟ್ ಪಡೆದಿರುವ ಆರ್.ಅರುಣಾಚಲಮ್. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಅಲೆಮಾರಿ ಸಂತು. ಈಗಷ್ಟೆ ಸಿನಿಮಾ ರಂಗಕ್ಕೆ ಬಂದು ಚೊಚ್ಚಲ ಚಿತ್ರದಲ್ಲಿ ಹೆಸರು ಮಾಡಿರೋ ಅನೂಪ ಸಾ ರಾ ಗೋವಿಂದು ಮತ್ತು ಮುದ್ದು ಮನಸೇ ಚಿತ್ರದ ನಾಯಕ ಅರು ಗೌಡ. ಈ ಕಿರುಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ ಓದಿ...

  ಕಿರುಚಿತ್ರದ ಮೂಹುರ್ತಕ್ಕೆ ಗಣ್ಯಾತಿಗಣ್ಯರು

  ರಾಜಕೀಯ ನಾಯಕರು ಆರ್.ರಾಮಚಂದ್ರ ಮತ್ತು ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ದಾಸ್ ಯಾದವ್ ಇತರ ಎಲ್ಲಾ ಕ್ಷೇತ್ರದ ಹೆಸರಾಂತ ಗಣ್ಯರು ಈ ಕಿರುಚಿತ್ರದ ಮೂಹುರ್ತಕ್ಕೆ ಸಾಕ್ಷಿಯಾಗಿದ್ದಾರೆ.

  ಶುಭಹಾರೈಸಿದ ಗಣ್ಯರು

  ಸಿನಿಮಾರಂಗ, ಕಿರುತೆರೆಯಲ್ಲಿ ಹೆಸರು ಮಾಡಿರೋ ಜಯಶ್ರೀ, ಉದಯ ಮ್ಯೂಸಿಕ್ ಮತ್ತು ರಾಜ್ ಮ್ಯೂಸಿಕ್ ಖ್ಯಾತಿಯ ವಿ.ಜೆ ಚೈತ್ರ ಮತ್ತು ವಿ.ಜೆ ಮನೋಜ ಜೋಶಿ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದರು.ಈ ವಿಷಯ ಕಿರುಚಿತ್ರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಈ ರೀತಿಯ ದೊಡ್ಡ ಮೂಹುರ್ತ ಎಂದು ಇತಿಹಾಸ ಬರೆದಿತ್ತು.

  ಪ್ರೋಮೋ ವಿಶೇಷತೆ

  ಈಗ ಮತ್ತೆ ಇತಿಹಾಸ ಬರೆಯಲು ಹೊರಟಿರುವ ಸ್ಮೈಲ್ ಗುರು ಕಿರುಚಿತ್ರ ಬರೀ ಕಿರುಚಿತ್ರ ಇತಿಹಾಸದಲ್ಲಿ ಅಷ್ಟೆ ಅಲ್ಲ ಕನ್ನಡ ಚಿತ್ರರಂಗದಲ್ಲೇ ಪ್ರಥಮ ಬಾರಿಗೆ ಒಂದು ಸ್ಟಾಪ್ ಮೋಷನ್ ಗ್ರಾಫಿಕ್ ಪ್ರೋಮೊ ಬಿಡುಗಡೆ ಮಾಡಲು ಸಜ್ಜಾಗಿದೆ.
  ಇದರ ವಿಶೇಷ ಏನಂದ್ರೆ ಕನ್ನಡ ಚಿತ್ರರಂಗದಲ್ಲೇ ಇಲ್ಲಿಯವರೆಗೂ ಯಾರೂ ಈ ತರಹದ ಪ್ರೋಮೊ ಬಿಡುಗಡೆ ಮಾಡಿಲ್ಲ. ಪ್ರೋಮೊ ಬಿಡುಗಡೆ ಮಾಡುತ್ತಿರುವ ಸ್ಮೈಲ್ ಗುರು ಕಿರುಚಿತ್ರ ತಂಡ ಒಂದು ದೊಡ್ಡ ಮಟ್ಟದ ಇತಿಹಾಸ ಬರೆಯುತ್ತಿದೆ.

  70MM ರೀಲ್ಸ್ ಸ್ಟೂಡೀಯೊ ವತಿಯಿಂದ ಪ್ರೋಮೊ

  ಈಗಾಗಲೇ ಐರಾವತ, ಮಾಸ್ಟರ್ ಪೀಸ್, ಡವ್, ಬಹದ್ದೂರ, ಭರ್ಜರಿಯಂತ ಸೂಪರ್ ಹಿಟ್ ಚಿತ್ರಗಳಿಗೆ ಗ್ರಾಫಿಕ್ಸ್ ಮಾಡಿರುವ 70MM ರೀಲ್ಸ್ ಸ್ಟೂಡೀಯೊ ವತಿಯಿಂದ ಪ್ರೋಮೊ ತಯಾರಾಗುತ್ತಿದ್ದು ಇದೇ ತಿಂಗಳು ಜನವರಿ 20ರ ವೇಳೆಗೆ ಒಬ್ಬ ವಿಶೇಷ ವ್ಯಕ್ತಿಯಿಂದ ಪ್ರೋಮೊ ಬಿಡುಗಡೆ ಮಾಡುವ ಯೋಜನೆ ಈ ಚಿತ್ರತಂಡ ಮಾಡಿಕೊಂಡಿದೆ.

  ಹೊಸ ಪ್ರತಿಭೆಗಳ ಸಂಗಮ

  ಈ ಚಿತ್ರದಲ್ಲಿ ನಾಯಕನಾಗಿ ಹೊಸ ಪ್ರತಿಭೆ ರಕ್ಷಿತ ಮತ್ತು ನಾಯಕಿಯಾಗಿ ಮೇಘಾ ಶೆಣೈ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟನ ಗೆಳೆಯನ ಪಾತ್ರವನ್ನು ತಮಿಶ್ರ ಚಿತ್ರದ ಮುಖ್ಯ ಪಾತ್ರದಾರಿ ಸುಜೀವ ಅವರು ನಟಿಸಿದ್ದಾರೆ. ಅಭಿ, ಶ್ರೀಧರ, ಸಂತು, ಸಾಗರ ಮತ್ತು ಮೋಹನ ಅಂತಹ ಹೊಸ ಪ್ರತಿಭೆಗಳನ್ನು ಒಳಗೊಂಡ ಚಿತ್ರ ಇದಾಗಿದೆ.

  ಒಳ್ಳೆಯ ಟೆಕ್ನಿಕಲ್ ತಂಡ

  ಒಗ್ಗರಣೆ ಡಬ್ಬಿ, ಲೈಫ್ ಸೂಪರ್ ಗುರು ಕಾರ್ಯಕ್ರಮ ಮತ್ತು ಗ್ರಹಲಕ್ಷ್ಮೀ ಧಾರಾವಾಹಿಗಳಿಗೆ ಸಹಾಯಕ ಕ್ಯಾಮರಾಮ್ಯಾನ್ ಆಗಿದ್ದ ಸೀನು ಅವರು ಕ್ಯಾಮರಾ ಕೆಲಸ ನೋಡಿಕೊಳ್ಳಲಿದ್ದಾರೆ. ಒಂದು ಒಳ್ಳೆಯ ಟೆಕ್ನಿಕಲ್ ತಂಡ ಇರುವ ಈ ಚಿತ್ರದ ನಿರ್ಮಾಣಕ್ಕೆ ಬೆನ್ನೆಲುಬು ಆಗಿ ನಿಂತಿರುವುದು ಶ್ರೀ ಸಾಯಿ ಬಾಬಾ ಪಿಕ್ಚರ್ಸನ ಮಾಲೀಕ ವಿನೋದ ಅಂಬಿಗೆರ್.. ಹಲವು ರೀತಿಯಲ್ಲಿ ಕುತೂಹಲ ಹುಟ್ಟಿಸಿರುವ ಈ ಕಿರುಚಿತ್ರಕ್ಕೆ ಫಿಲ್ಮಿಬೀಟ್ ತಂಡದಿಂದ ಶುಭ ಹಾರೈಕೆಗಳು.

  English summary
  Kannada short Film Smile Guru set to create new record in Kannada Film Industry by releasing a promo created using Stop Motion Graphics technology. Smile Guru had big muhurat which attended and wished by KFCC president Sa.Ra Govindu and others. Smile Guru has Rakshith and Megha in the lead roles.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more