»   » ಗೋಲ್ಡನ್ ಏಜ್ ಫಿಲ್ಮ್ ಹೌಸ್ ಕಿರುಚಿತ್ರಗಳ ಶೋ

ಗೋಲ್ಡನ್ ಏಜ್ ಫಿಲ್ಮ್ ಹೌಸ್ ಕಿರುಚಿತ್ರಗಳ ಶೋ

Posted By:
Subscribe to Filmibeat Kannada

ಈ ವಾರದ ಪ್ಲಾನ್ ಏನು? ಯಾವ ಚಿತ್ರ ವೀಕ್ಷಿಸಬೇಕೆಂದಿದ್ದೀರಿ? ಅಯ್ಯೊ ಈ ಹಾಳದ್ದು ಯಾವುದಕ್ಕೂ ಟೈಮೇ ಸಿಗಲ್ಲ ಎಂಬುದು ತಾನೆ ನಿಮ್ಮ ಪ್ರಾಬ್ಲಂ. ಕೇವಲ 45 ನಿಮಿಷದಲ್ಲಿ ಒಂದಕ್ಕಿಂತಲೂ ಒಂದು ಭಿನ್ನವಾದ ಮೂರು ಕಿರುಚಿತ್ರಗಳನ್ನು ವೀಕ್ಷಿಸುವ ಸುವರ್ಣಾವಕಾಶ ಇಲ್ಲಿದೆ ನೋಡಿ.

'ಗೋಲ್ಡನ್ ಏಜ್ ಫಿಲ್ಮ್ ಹೌಸ್' ಎಂಬ ಕಿರುಚಿತ್ರ ತಂಡವೊಂದು ಈ ಮೂರು ಚಿತ್ರಗಳನ್ನು ಹೊರತರುತ್ತಿದೆ. ಇದೇ ಮೊದಲ ಬಾರಿಗೆ ನವಿಲುಗರಿ (ಕನ್ನಡ), ರುದ್ರ (ಹಿಂದಿ) ಹಾಗೂ ಮಿಸ್ ಫೈರ್ (ಕನ್ನಡ) ಈ ಮೂರು ಚಿತ್ರಗಳ ಮೊದಲ ಪ್ರದರ್ಶನ (ಪ್ರಿಮಿಯರ್) ಬೆಂಗಳೂರಿನ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಆಯೋಜಿಸಲಾಗಿದೆ.

Three short films premiere

ತಮ್ಮ ಕಿರುಚಿತ್ರದ ಬಗ್ಗೆ ಗೋಲ್ಡನ್ ಏಜ್ ಫಿಲ್ಮ್ ಹೌಸ್ ನ ಕೀರ್ತಿ ನಟರಾಜನ್ ಅವರು ಹೇಳುವುದೇನೆಂದರೆ, "ಕಳೆದ 2-3 ವರ್ಷಗಳಿಂದ ಅನೇಕ ಕಿರುಚಿತ್ರಗಳನ್ನು ಮಾಡಿಕೊಂಡು ಬಂದಿದ್ದೇವೆ. ಮೂರು ನಿಮಿಷ ಚಿತ್ರದಿಂದ ಪ್ರಾರಂಭಿಸಿ ಇಂದು ಮೂವತ್ತು ನಿಮಿಷದ ಚಿತ್ರಗಳನ್ನು ಮಾಡುವ ಹಂತಕ್ಕೆ ಬಂದು ತಲುಪಿದ್ದೇವೆ. ಅತಿ ಕಡಿಮೆ ಖರ್ಚಿನಲ್ಲಿ ನಮ್ಮ ಕೈಗೆಟುಕುವ ಸೌಲಭ್ಯವನ್ನಸ್ಟೆ ಬಳಸಿಕೊಂಡು ಈ ಚಿತ್ರಗಳನ್ನು ನಿರ್ಮಿಸಿದ್ದೇವೆ" ಎನ್ನುತ್ತಾರೆ.

"ಜನರು ಇಲ್ಲಿಯವರೆಗೂ ನಮ್ಮ ಕಿರುಚಿತ್ರಗಳನ್ನು ಯೂ ಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ನೋಡಿ ಪ್ರೋತ್ಸಾಹಿಸಿದ್ದಾರೆ. ನಮ್ಮ ಕೆಲವು ಕಿರುಚಿತ್ರಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದಿವೆ. ಈಗ ನಮ್ಮ ಈ ಸಿನಿಮಾ ಹವ್ಯಾಸವನ್ನು ಒಂದು ಹೆಜ್ಜೆ ಮುಂದಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿದ್ದೇವೆ" ಎಂಬ ಮಹದಾಸೆ ಕೀರ್ತಿ ಅವರದು.

ಈ ಕಾರ್ಯಕ್ರಮದಲ್ಲಿ 3 ಕಿರುಚಿತ್ರಗಳು (2 ಕನ್ನಡ, 1 ಹಿಂದಿ) ತಮ್ಮ ಮೊದಲ ಪ್ರದರ್ಶನ (ಪ್ರಿಮಿಯರ್) ಕಾಣಲಿವೆ. ನವಿಲುಗರಿ [25 ನಿಮಿಷ] ನಿರ್ದೇಶನ ಕೀರ್ತಿ ನಟರಾಜನ್, ರುದ್ರ [10 ನಿಮಿಷ] ನಿರ್ದೇಶನ ಸ್ನೇಹಲ್ ಭೋಸಲೆ ಹಾಗೂ ಮಿಸ್‌ಫೈಯರ್ [10 ನಿಮಿಷ] ನಿರ್ದೇಶನ ಜೊಯಿತ ದಾಸ್. ಈ ಎಲ್ಲಾ ಕಿರುಚಿತ್ರಗಳಿಗೂ ಇಂಗ್ಲಿಷ್ ಸಬ್ ಟೈಟಲ್ ಇರುತ್ತದೆ.

ಇದೇ ಶನಿವಾರ (ಜನವರಿ 18) ಈ ಕಿರುಚಿತ್ರಗಳನ್ನು ಪ್ರದರ್ಶಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಯ ಬೆಳಗ್ಗೆ 10.30 ಗಂಟೆ. ಈ ಮೂರು ಚಿತ್ರಗಳ ಟಿಕೆಟ್ ಬೆಲೆ ರು.50. ಟಿಕೆಟ್ ಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಕೀರ್ತಿ (80958 62930), ಭರತ್ (90089 99200) ಹಾಗೂ ಮಾಧವ್ (99641 42241). (ಒನ್ಇಂಡಿಯಾ ಕನ್ನಡ)

English summary
Golden Age Film House presents three short films Navilugari, Misfire (Kannada) and Rudra (Hindi) premiere show on 18th January, 2014 at 10.30 am in KH Kala Soudha, Bangalore. For tickets contact Keerthi 80958 62930).
Please Wait while comments are loading...