For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ವಿಶಾಲ್ ಗೆ ಜೋಡಿಯಾದ ನಟಿ ಶ್ರದ್ಧಾ ಶ್ರೀನಾಥ್

  |

  ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಶ್ರದ್ಧಾ ಅಭಿನಯದ ತೆಲುಗಿನ 'ಜೆರ್ಸಿ' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಷ್ಟೆಯಲ್ಲ ಚಿತ್ರದಲ್ಲಿ ಶ್ರದ್ಧಾ ಅಭಿನಯ ಕಂಡು ತೆಲುಗು ಅಭಿಮಾನಿಗಳು ಫಿದಾ ಆಗಿದ್ದಾರೆ.

  ಈಗ ಮತ್ತೊಂದು ಸಿನಿಮಾ ಆಫರ್ ಶ್ರದ್ಧಾ ಪಾಲಿಗೆ ಒಲಿದು ಬಂದಿದೆ. ತಮಿಳು ಸ್ಟಾರ್ ನಟ ವಿಶಾಲ್ ಅಭಿನಯದ ಹೊಸ ಸಿನಿಮಾಗೆ ಶ್ರದ್ಧಾ ನಾಯಕಿಯಾಗಿ ಆಯ್ಕೆ ಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಶ್ರದ್ಧಾ ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಜರ್ಸಿ' ಸಕ್ಸಸ್ ಸಂಭಾವನೆ ಹೆಚ್ಚಿಸಿಕೊಂಡ ಶ್ರದ್ಧಾ ಶ್ರೀನಾಥ್

  ಅಂದ್ಹಾಗೆ ವಿಶಾಲ್ ಅಭಿನಯದ 'ಅಭಿಮನ್ಯುಡು' ಸಿನಿಮಾದ ಸೀಕ್ವೆಲ್ ತಯಾರಾಗುತ್ತಿದೆಯಂತೆ. ಕಳೆದ ವರ್ಷ ರಿಲೀಸ್ ಆಗಿದ್ದ 'ಅಭಿಮನ್ಯುಡು' ಸೂಪರ್ ಹಿಟ್ ಸಿನಿಮಾವಾಗಿತ್ತು. ತಮಿಳಿನ 'ಇರುಂಬು ತಿರೈ' ತೆಲುಗು ಡಬ್ಬಿಂಗ್ 'ಅಭಿಮನ್ಯುಡು'. ಈಗ 'ಅಭಿಮನ್ಯುಡು ಪಾರ್ಟ್-2' ಮಾಡುವ ಪ್ಲಾನ್ ಮಾಡಲಾಗಿದ್ದು ಕನ್ನಡತಿ ಶ್ರದ್ಧಾ ವಿಶಾಲ್ ಗೆ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  'ಅಭಿಮನ್ಯುಡು' ಮೊದಲ ಭಾಗದಲ್ಲಿ ವಿಶಾಲ್ ಗೆ ನಾಯಕಿಯಾಗಿ ಸಮಂತಾ ಕಾಣಿಸಿಕೊಂಡಿದ್ದರು. ಆದ್ರೀಗ ಸೀಕ್ವಲ್ ಗೆ ಸಮಂತಾ ಜಾಗಕ್ಕೆ ಶ್ರದ್ದಾ ಎಂಟ್ರಿ ಕೊಟ್ಟಿದ್ದಾರಂತೆ. ಈ ಹಿಂದೆ ಸಮಂತಾ ವಿರುದ್ಧ ಮಾತನಾಡಿ ಸಮಂತಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರದ್ದಾ ಈಗ ಸಮಂತಾ ಜಾಗಕ್ಕೆ ಎಂಟ್ರಿ ಕೊಡುತ್ತಿರುವುದು ಅಚ್ಚರಿ ಮೂಡಿಸಿದೆ.

  ಶ್ರದ್ಧಾ ಕನ್ನಡದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 'ರುಸ್ತುಂ' ಮುಂದಿನ ತಿಂಗಳು 14ಕ್ಕೆ ತೆರೆಗೆ ಬರುತ್ತಿದೆ. ಇನ್ನು ತೆಲುಗಿನಲ್ಲಿ ಸಾಯಿ ಕುಮಾರ್ ಪುತ್ರ ಆದಿ ಅಭಿನಯದ 'ಜೋಡಿ' ಸಿನಿಮಾಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶ್ರದ್ಧಾ ಹೆಸರು ಸಾಕಷ್ಟು ನಾಯಕರ ಸಿನಿಮಾಗಳಲ್ಲಿ ಕೇಳಿ ಬರುತ್ತಿದೆ ಆದ್ರೆ ಯಾವುದು ಅಧಿಕೃತ ಎನ್ನುವುದು ಗೊತ್ತಾಗಬೇಕಿದೆ ಅಷ್ಟೆ.

  English summary
  Kannada actress Shraddha Srinath has been the female lead opposite tamil actor vishal. Shraddha female lead in vishal starrer abhimanyudu part-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X