For Quick Alerts
  ALLOW NOTIFICATIONS  
  For Daily Alerts

  'ಜರ್ಸಿ' ಸಕ್ಸಸ್ ಸಂಭಾವನೆ ಹೆಚ್ಚಿಸಿಕೊಂಡ ಶ್ರದ್ಧಾ ಶ್ರೀನಾಥ್

  |
  ಒಂದೇ ಸಮನೆ ಹೆಚ್ಚಾಯ್ತು ಶ್ರದ್ಧಾ ಸಂಭಾವನೆ..!?

  ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರದ್ಧಾ ಅಭಿನಯದ ಜರ್ಸಿ ಸಿನಿಮಾ ಇತ್ತೀಚಿಗಷ್ಟೆ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರದ್ಧಾ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದರೆ.

  'ಜರ್ಸಿ' ಸೂಪರ್ ಹಿಟ್ ಆಗುತ್ತಿದಂತೆ ಶ್ರದ್ಧಾ ತನ್ನ ಸಂಭಾವನೆಯನ್ನು ಏರಿಸಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಜರ್ಸಿ ಸಿನಿಮಾಗೆ ಶ್ರದ್ಧಾ 20 ಲಕ್ಷ ಸಂಭಾವನೆ ಪಡೆದಿದ್ದಾರಂತೆ. ಆದ್ರೀಗ ಮುಂದಿನ ಸಿನಿಮಾಗಳಿಗೆ ಬರೊಬ್ಬರಿ 70 ಲಕ್ಷ ಬೇಡಿಕೆ ಇಡುತ್ತಿದ್ದಾರಂತೆ. ದಿಢೀರನೆ ಸಂಭಾವನೆ ಏರಿಸಿಕೊಂಡಿದ್ದು ನೋಡಿ ತೆಲುಗು ನಿರ್ಮಾಪಕರು ಶಾಕ್ ಆಗಿದ್ದಾರಂತೆ.

  'ಯಶ್ ಅಥವಾ ನಾನಿ' ಇಬ್ಬರಲ್ಲಿ ಶ್ರದ್ಧಾ ಆಯ್ಕೆ ಮಾಡಿದ್ದು ಇವರನ್ನು

  ತೆಲುಗಿನ ನಿರ್ಮಾಪಕ ದಿಲ್ ರಾಜು ನಟ ನಾಗ ಚೈತನ್ಯ ಜೊತೆ ಸಿನಿಮಾ ಮಾಡುತ್ತಿದ್ದಾರಂತೆ. ಆ ಸಿನಿಮಾಗೆ ಶ್ರದ್ಧಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಮಾತುಕತೆ ನಡೆಯುತ್ತಿದೆಯಂತೆ. ಆ ಸಿನಿಮಾಗೆ ಶ್ರದ್ಧಾ ಬರೊಬ್ಬರಿ 70 ಲಕ್ಷ ಚಾರ್ಜ್ ಮಾಡುತ್ತಿದ್ದಾರಂತೆ.

  ಶ್ರದ್ಧಾ ಸದ್ಯ ತೆಲುಗಿನಲ್ಲಿ ಸಾಯಿಕುಮಾರ್ ಪುತ್ರ ಆದಿ ಅಭಿನಯದ 'ಜೋಡಿ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತಮಿಳಿನ 'ಕೆ 13' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇನ್ನು ಕನ್ನಡದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

  English summary
  Kannada actress Shraddha Srinath raised the remuneration after success of jersey telugu movie. Telugu actor Nani appeared as a hero in Jersey film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X