For Quick Alerts
  ALLOW NOTIFICATIONS  
  For Daily Alerts

  ಶ್ರವಣ್ ರಿಗ್ರೇಟ್ ಅಯ್ಯರ್ ಗೆ ಫಾಲ್ಕೆ ಪುರಸ್ಕಾರ

  By Mahesh
  |
  ಬೆಂಗಳೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಶ್ರವಣ್ ರಿಗ್ರೇಟ್ ಅಯ್ಯರ್ ಅವರು ಮೊಬೈಲ್ ಬಳಸಿ ಚಿತ್ರೀಕರಿಸಿದ ಸಾಕ್ಷ್ಮಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಸ್ಟಾಪ್ ಮೋಷನ್ ಅನಿಮೇಷನ್ ತಂತ್ರಜ್ಞಾನ ಬಳಕೆ ಮಾಡಿ ಮೊಬೈಲ್ ಮೂಲಕ ಇರುಳಿಗ ಜನಾಂಗದ ಬಗ್ಗೆ ಶ್ರವಣ್ ಸಾಕ್ಷ್ಯಚಿತ್ರ ತೆಗೆದಿದ್ದರು. ನೋಯಿಡಾದಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನಗೊಂಡು ಆಯ್ಕೆದಾರರ ಮೆಚ್ಚುಗೆ ಗಳಿಸಿತ್ತು.

  ರಾಮನಗರದ ಬುಡಕಟ್ಟು ಜನಾಂಗ ಇರುಳಿಗರ ಜೀವನಶೈಲಿ ಬಗ್ಗೆ ಹೇಳುವ ಮೊಬೈಲ್ ಸಾಕ್ಷ್ಯಚಿತ್ರಕ್ಕೆ ಮೊಬೈಲ್ ವಿಭಾಗದ ಅತ್ಯುತ್ತಮ ಚಿತ್ರ ಎಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆದರೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೋಯಿಡಾದಲ್ಲಿ ನಡೆದಿದ್ದರಿಂದ ಶ್ರವ್ಪಣ್ ಅವರು ನೇರವಾಗಿ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲವಂತೆ. ಆದರೆ, ನೂರಾರು ದೇಶಗಳ ಸಾಕ್ಷ್ಯಚಿತ್ರಗಳ ನಡುವೆ ಸ್ಪರ್ಧಿಸಿ 'ಕತ್ತಲಲ್ಲಿ ಇರುಳಿಗರು' ಪ್ರಶಸ್ತಿ ಗಳಿಸಿರುವುದು ಖುಷಿಕೊಟ್ಟಿದೆ ಎಂದು ಶ್ರವಣ್ ಹೇಳಿದ್ದಾರೆ.

  21 ವರ್ಷದ ಪತ್ರಿಕೋದ್ಯಮದ ವಿದ್ಯಾರ್ಥಿ ಶ್ರವಣ್ ರಿಗ್ರೆಟ್ ಅಯ್ಯರ್ ಭಾರತೀಯ ಚಿತ್ರರಂಗದಲ್ಲಿ ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಚಿಕ್ಕಂದಿನಿಂದಲೇ ಜಗತ್ತನ್ನು ಬೆರಗು ಗಣ್ಣಿನಿಂದ ನೋಡುತ್ತಾ, ವಿಭಿನ್ನ ದೃಷ್ಟಿಕೋನದಲ್ಲಿ ಯೋಚಿಸುವ ಹವ್ಯಾಸ ಬೆಳೆಸಿಕೊಂಡು ಚಿತ್ರಗಳನ್ನು ತೆಗೆಯುತ್ತಿದ್ದ ಶ್ರವಣನಿಗೆ ಆ ಫೋಟೋಗ್ರಫಿ ಹವ್ಯಾಸವೇ "ಸ್ಟಾಪ್-ಮೋಶನ್"ಸಾಕ್ಷ್ಯಚಿತ್ರ ತೆಗೆಯಲು ಪ್ರೇರಣೆ ನೀಡಿತಂತೆ.

  ನೋಕಿಯಾ- N8 ಮೊಬೈಲ್ ಬಳಸಿ ತೆಗೆದ ಮತ್ತೊಂದು ಸಾಕ್ಷ್ಯ ಚಿತ್ರ - "ರೆಕ್ಕೆ ಮುರಿದ ಹಕ್ಕಿ ನಾನು". ಬಗ್ಗೆ ಈಗಾಗಲೇ ನಮ್ಮ Gizbot ವಿಭಾಗದಲ್ಲಿ ವಿವರವಾಗಿ ಬರೆದಿದ್ದೆವು. [ಲೇಖನ ಓದಿ] ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಶ್ರವಣ್, ಜರ್ಮನಿ, ಫ್ರಾನ್ಸ್, ಸ್ಪೇನ್ ಸೇರಿದಂತೆ ನೂರಾರು ದೇಶದ ಪ್ರತಿಭಾವಂತರನ್ನು ಮಣಿಸಿ ಪ್ರತಿಷ್ಠಿತ ಪ್ರಶಸ್ತಿ ಗಳಿಸಿ ನಾಡೀಗೆ ಹೆಮ್ಮೆ ಎನಿಸಿದ್ದಾರೆ.

  ರಾಜ್ಯದ ಎಲ್ಲಾ ಆದಿವಾಸಿಗಳ ಬಗ್ಗೆ ಸಾಕ್ಷ್ಯಚಿತ್ರ ತೆಗೆಯಬೇಕು. ಅವರ ಜೀವನಶೈಲಿ ಸಾರ್ವಜನಿಕರಿಗೆ ಪರಿಚಯವಾಗಬೇಕು. ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂಬ ಮಹದಾಸೆ ಕೂಡಾ ಶ್ರವಣ್ ಗೆ ಇದೆ. ಶ್ರವಣ್ ತೆಗೆದ ಇರುಳಿಗರ ಬದುಕಿನ ಕಥೆ ಸಾಕ್ಷ್ಯಚಿತ್ರ ನೋಡಿ

  English summary
  A short documentary on the Iruligas tribes of Ramanagar by Shravan Regret Iyer from fetches him Dadasaheb Phalke award under mobile movie section. The documentary is made using a cell phone highlights the culture and tradition followed by Iruligas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X