For Quick Alerts
  ALLOW NOTIFICATIONS  
  For Daily Alerts

  ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶ್ರೀಮುರಳಿ ದಂಪತಿ

  |

  ನಟ ಶ್ರೀ ಮುರಳಿ ಇಂದು ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಶ್ರೀ ಮುರಳಿ ಮಾತ್ರವಲ್ಲ ಅವರ ಇಡೀ ಕುಟುಂಬ ಈಗ ಸಂತಸದಲ್ಲಿದೆ. ಕಾರಣ ಇಂದು ಶ್ರೀ ಮುರಳಿ ಮತ್ತು ಅವರ ಪತ್ನಿ ವಿದ್ಯಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಒಂದಾಗಿರುವ ಶ್ರೀಮಿರಳಿ-ವಿದ್ಯಾ ದಂಪತಿ ಕುಟುಂಬದ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

  ಅಂದ್ಹಾಗೆ ಮುರಳಿ ದಂಪತಿಗೆ ಇಂದು 11ನೇ ವರ್ಷದ ವಿವಾಹ ವಾರ್ಷಿಕೋತ್ಸವ.

  ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಶ್ರೀ ಮುರಳಿ ಮತ್ತು ವಿದ್ಯಾ ಮೇ 11, 2008 ರಂದು ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

  ಶ್ರೀಮುರಳಿ ಜೊತೆ ಬುಲ್ ಬುಲ್ ರಚಿತಾ 'ಭರಾಟೆ' ಡಾನ್ಸ್

  ಉಗ್ರಂ ಸಿನಿಮಾದ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಶ್ರೀಮುರಳಿ ಸಿನಿ ಜೀವನದ ಉತ್ತುಂಗದಲ್ಲಿದ್ದಾರೆ. 2003ರಲ್ಲಿ 'ಚಂದ್ರಚಕೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರೋರಿಂಗ್ ಸ್ಟಾರ್ ಮೊದಲ ಸಿನಿಮಾದಲ್ಲೆ ಭರ್ಜರಿ ಸಕ್ಸಸ್ ಕಂಡಿದ್ದರು. ಸುಮಾರು 23 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀ ಮುರುಳಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

  ಶ್ರೀಮುರಳಿ ಸಿನಿ ಜೀವನದ ದಿಕ್ಕನ್ನು ಬದಲಾಯಿಸಿದ ಸಿನಿಮಾ 'ಉಗ್ರಂ'. 'ಉಗ್ರಂ' ಸಿನಿಮದ ಸಕ್ಸಸ್ ನ ನಂತರ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಮುರಳಿ ಸದ್ಯ 'ಭರಾಟೆ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಆನಂತರ 'ಮದಗಜ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  English summary
  Kannada actor Shri Murali celebrating his 11th year wedding anniversary. srii murali got married with vidya on 2008.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X