»   » ಪತ್ರಿಕೆಯೊಂದಕ್ಕೆ ಬಟ್ಟೆ ಕಳಚಿದ ತಾರೆ ಶ್ರಿಯಾ ಸರನ್

ಪತ್ರಿಕೆಯೊಂದಕ್ಕೆ ಬಟ್ಟೆ ಕಳಚಿದ ತಾರೆ ಶ್ರಿಯಾ ಸರನ್

By: ರವಿಕಿಶೋರ್
Subscribe to Filmibeat Kannada
ಬಣ್ಣದ ಜಗತ್ತಿನಲ್ಲಿ ಈ ರೀತಿಯ ಸುದ್ದಿಗಳೂ ಹೊಸತೂ ಅಲ್ಲ ಹಳತೂ ಅಲ್ಲ ನಿತ್ಯನೂತನ. ಈ ಹಿಂದೆ ಹಲವಾರು ಹಾಟ್ ತಾರೆಗಳು ತಮ್ಮ ಖಾಸಗಿ ಆಸ್ತಿಪಾಸ್ತಿಯನ್ನು ಪತ್ರಿಕೆಗಳಲ್ಲಿ ರಾಜಾರೋಷವಾಗಿ ಘೋಷಿಸಿಕೊಂಡಿದ್ದರು.

ಈಗ ಕನ್ನಡಕ್ಕೆ ಅಡಿಯಿಟ್ಟಿರುವ ಶ್ರಿಯಾ ಸರನ್ ಎಂಬ ಬೆಳದಿಂಗಳ ಬಾಲೆ ತಮ್ಮ ದೇಹಸಿರಿಯನ್ನು ಅನಾವರಣಗೊಳಿಸಿದ್ದಾರೆ. ಪುರುಷರ ನಿಯತಕಾಲಿಕೆ 'ಮ್ಯಾಕ್ಸಿಮ್' ಆಗಸ್ಟ್, 2012ರ ಸಂಚಿಕೆ ಶ್ರಿಯಾ ಸರನ್ ಅವರ ಹಾಟ್ ಫೋಟೋಗಳನ್ನು ಹೊತ್ತುತಂದಿದೆ.

ಬ್ಲ್ಯಾಕ್ ಬಿಕಿನಿಯಲ್ಲಿ ಶ್ರಿಯಾ ಸರನ್ ಫೋಟೋ ಮ್ಯಾಕ್ಸಿಮ್ ನಿಯತಕಾಲಿಕೆಯ ಮುಖಪುಟ ಅಲಂಕರಿಸಿದೆ. ಮುಖಪುಟದಲ್ಲೇ ಹೀಗಿದ್ದರೆ ಇನ್ನು ಒಳಪುಟಗಳಲ್ಲಿ ಏನಿದೆಯೋ ಎಂಬ ಕುತೂಹಲ ಆಕೆಯ ಅಭಿಮಾನಿಗಳನ್ನು ಕೆಣಕುತ್ತಿದೆ.

ಸದ್ಯಕ್ಕೆ ಶ್ರಿಯಾ ಸರನ್ ಕನ್ನಡದ 'ಚಂದ್ರ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಮುಖಪುಟ' ಖ್ಯಾತಿಯ ರೂಪಾ ಅಯ್ಯರ್ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್. ಈಗಾಗಲೆ ಈ ಚಿತ್ರದ ಫೋಟೋ ಶೂಟ್ ನಡೆದಿದ್ದು ಕನ್ನಡ ಚಿತ್ರೋದ್ಯಮದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಕೆಲ ದಿನಗಳ ಹಿಂದೆ ಶ್ರಿಯಾ ಸರನ್ ಅವರ ಹಾಟ್ ವಿಡಿಯೋವೊಂದು ಭಾರಿ ಸುದ್ದಿ ಮಾಡಿತ್ತು. 'ಮಿಡ್ ನೈಟ್ಸ್ ಚಿಲ್ಡ್ರನ್' ಎಂಬ ಹೆಸರಿನ ಇಂಗ್ಲಿಷ್ ವಿಡಿಯೋದಲ್ಲಿನ ಹಾಟ್ ಕಿಸ್ಸಿಂಗ್ ಸೀನ್ ಪಡ್ಡೆಗಳ ನಿದ್ದೆಗೆಡಿಸುತ್ತಿದೆ.

ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಬರೆದಿರುವ 'ಮಿಡ್ ನೈಟ್ಸ್ ಚಿಲ್ಡ್ರನ್' ಎಂಬ ಕೃತಿ ಆಧಾರವಾಗಿ ಈ ಚಿತ್ರವನ್ನು ಅದೇ ಹೆಸರಿನಲ್ಲಿ ತೆರೆಗೆ ತರಲಾಗುತ್ತಿದೆ. ಚಿತ್ರದ ನಿರ್ದೇಶಕಿ ದೀಪಾ ಮೆಹ್ತಾ. ತಮ್ಮ ಚಿತ್ರಕ್ಕೆ ಇಸ್ಲಾಂ ಮೂಲಭೂತವಾದಿಗಳ ವಿರೋಧವಿರುವ ಕಾರಣ ಈ ಚಿತ್ರದ ಚಿತ್ರೀಕರಣ ಗುಟ್ಟಾಗಿ ನಡೆಸುತ್ತಿದ್ದಾರೆ. ಇನ್ನೇನು ಶೀಘ್ರದಲ್ಲೇ ತೆರೆಗೆ ಅಪ್ಪಳಿಸಬಹುದು.

English summary
Actress Shriya Saran goes hot for Maxim for August edition, 2012. The actress looks hot on the cover page of Maxim in revealing black bikini.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada