»   » 'ಚಂದ್ರ'ಮುಖಿ ಶ್ರೀಯಾ ಈಗ ಕೆಎಂಎಫ್ ರಾಯಭಾರಿ

'ಚಂದ್ರ'ಮುಖಿ ಶ್ರೀಯಾ ಈಗ ಕೆಎಂಎಫ್ ರಾಯಭಾರಿ

Posted By:
Subscribe to Filmibeat Kannada

ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಬೊಂಬಾಟ್ ಬೆಡಗಿ ಶ್ರೀಯಾ ಸರನ್. ಈಗವರು ಕೆಎಂಎಫ್ ಉತ್ಪನ್ನವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಕೆಎಂಎಫ್ ಎಂಡಿ ಪ್ರೇಮನಾಥ್ ತಿಳಿಸಿದ್ದಾರೆ.

ಈಗಾಗಲೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೆಎಂಎಫ್ ನ ನಂದಿನಿ ಉತ್ಪನ್ನಗಳ ರಾಯಭಾರಿಗಳಾಗಿ ನಿಯೋಜನೆಗೊಂಡಿರುವುದು ಗೊತ್ತೇ ಇದೆ. [ಚಂದ್ರ ಚಿತ್ರವಿಮರ್ಶೆ]


ಇದೀಗ ಶ್ರೀಯಾ ಅವರು ಕೆಎಂಎಫ್ ನ ಗುಡ್ ಲೈಫ್ ಹಾಲಿಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಹೊರ ರಾಜ್ಯಗಳಲ್ಲಿ ಗುಡ್ ಲೈಫ್ ಹಾಲಿನ ರಾಯಭಾರಿ ಅವರು. ಮೂರು ತಿಂಗಳಿಗೂ ಹೆಚ್ಚು ಕಾಲ ಕೆಡದಂತೆ ಬಾಳಿಕೆ ಬರುವ ಗುಡ್ ಲೈಫ್ ಹಾಲನ್ನು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಪ್ರಚಾರ ಮಾಡಲಿದ್ದಾರೆ. [ಕನ್ನಡ ಚಿತ್ರಕ್ಕೆ ಶ್ರೀಯಾ ಸರನ್ ಸಂಭಾವನೆ ಎಷ್ಟು?]

ಟ್ರೆಟ್ರಾಪ್ಯಾಕ್ ಸಂಸ್ಥೆ ಹಾಗೂ ಕೆಎಂಎಫ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಏ.29) ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಗುಡ್ ಲೈಫ್ ಹಾಲಿನ ಟೆಟ್ರಾಪ್ಯಾಕನ್ನು ಶ್ರೀಯಾ ಸರನ್ ಬಿಡುಗಡೆ ಮಾಡಲಿದ್ದಾರೆ.

ದಕ್ಷಿಣ ಭಾರತದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಲು ಕೆಎಂಎಫ್ ಮುಂದಡಿಯಿಟ್ಟಿದ್ದು, ಟೆಟ್ರಾಪ್ಯಾಕ್ ನಲ್ಲಿ ಹಾಲನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಶ್ರೀಯಾ ಅವರನ್ನು ರಾಯಭಾರಿಯಾಗಿ ನಿಯೋಜಿಸಿದೆ. ಪ್ರಸ್ತುತ ಶ್ರೀಯಾ ಅವರು ತೆಲುಗು, ತಮಿಳು ಹಾಗೂ ಹಿಂದಿಯ ತಲಾ ಒಂದೊಂದು ಚಿತ್ರದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)

English summary
Actor Shriya Sarana will be the new brand ambassador for KMF Goodlife milk. KMF has decided to appoint Shriya as the brand ambassador for Goodlife milk for Tamilnadu, Andra Pradesh and Kerala.
Please Wait while comments are loading...