For Quick Alerts
  ALLOW NOTIFICATIONS  
  For Daily Alerts

  ನಟಿ ಸುಧಾರಾಣಿಗೆ ಸಖತ್ ಸರ್ಪ್ರೈಸ್ ಕೊಟ್ಟ ಶ್ರುತಿ-ಮಾಳವಿಕಾ

  |

  ಸ್ಯಾಂಡಲ್ ವುಡ್ ನ ಖ್ಯಾತ ನಟಿ, 90ರ ದಶಕದ ಬಹುಬೇಡಿಕೆಯ ಸುಂದರಿ ಸುಧಾರಾಣಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆಗಸ್ಟ್ 15ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಸುಧಾರಾಣಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  ಸಾಮಾಜಿಕ ಜಾಲತಾಣಗಳಲ್ಲಿ ಸುಧಾರಾಣಿ ಫೋಟೋ ಶೇರ್ ಮಾಡಿ ವಿಶ್ ಮಾಡಿ ಸಂತಸ ಪಡುತ್ತಿದ್ದಾರೆ. ಬಾಲಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಧಾರಾಣಿ, ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ತೆರೆಮೇಲೆ ಮಿಂಚಿದವರು. 1978 ಕಿಲಾಡಿ ಕಿಟ್ಟು ಸಿನಿಮಾ ಮೂಲಕ ಸುಧಾರಾಣಿ ಬಾಲನಟಿಯಾಗಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡರು. ಬಳಿಕ 1986ರಲ್ಲಿ ಬಿಡುಗಡೆಯಾದ ಆನಂದ್ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಬೆಳ್ಳಿ ಪರದೆಮೇಲೆ ಮಿಂಚಿದರು.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಕೂಡ ಇದು. ಇಬ್ಬರ ಕಾಂಬಿನೇಶನ್ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಮೊದಲ ಸಿನಿಮಾದ ಸಕ್ಸಸ್ ಸುಧಾರಾಣಿ ಸಿನಿ ಜೀವನದ ದಿಕ್ಕನ್ನೇ ಬದಲಾಯಿಸಿತು. ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ಸುಧಾರಾಣಿ ಇಂದಿಗೂ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇಂದು 51 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಧಾರಾಣಿಗೆ ನೆಚ್ಚಿನ ಗೆಳತಿಯರು ಸಖತ್ ಸರ್ಪ್ರೈಸ್ ನೀಡಿ ಅಚ್ಚರಿ ಮೂಡಿಸಿದ್ದಾರೆ.

  ಗೆಳತಿಗೆ ಸರ್ಪ್ರೈಸ್ ನೀಡಿದ ಶ್ರುತಿ-ಮಾಳವಿಕಾ

  ಗೆಳತಿಗೆ ಸರ್ಪ್ರೈಸ್ ನೀಡಿದ ಶ್ರುತಿ-ಮಾಳವಿಕಾ

  ಚಿತ್ರರಂಗದ ಹಿರಿಯ ನಟಿಯರು, ನೆಚ್ಚಿನ ಸ್ನೇಹಿತರಾದ ನಟಿ ಶ್ರುತಿ ಮತ್ತು ವಾಳವಿಕಾ ಅವಿನಾಶ್ ಇಬ್ಬರು ಸುಧಾರಾಣಿ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ದಿಢೀರ್ ಆಗಿ ಬಂದ ಶ್ರುತಿ ಮತ್ತು ಮಾಳವಿಕಾ ನೋಡಿ ಸುಧಾರಾಣಿ ಫುಲ್ ಖುಷ್ ಆಗಿದ್ದಾರೆ. ಈ ಮೂವರು ನಟಿಯರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಪಾರ್ಟಿ ಅಂತ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ಸುಧಾರಾಣಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಸಂತಸ ಪಟ್ಟಿದ್ದಾರೆ.

  ಸ್ನೇಹಿತೆಯರಿಗೆ ಧನ್ಯವಾದ ತಿಳಿಸಿದ ಸುಧಾರಾಣಿ

  ಸ್ನೇಹಿತೆಯರಿಗೆ ಧನ್ಯವಾದ ತಿಳಿಸಿದ ಸುಧಾರಾಣಿ

  ಇಬ್ಬರು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳನ್ನು ಮತ್ತು ವಿಡಿಯೋವನ್ನು ಸುಧಾರಾಣಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಸುಧಾರಾಣಿ ಮಗಳು, ಶ್ರುತಿ ಮಗಳು ಕೂಡ ಇದ್ದಾರೆ. ಸ್ನೇಹಿತರು ಬಂದು ಸರ್ಪ್ರೈಸ್ ನೀಡಿದ ಬಗ್ಗೆ ಸುಧಾರಾಣಿ, " ದೊಡ್ಡ ಸರ್ಪ್ರೈಸ್ ನನಗಾಗಿ ಕಾಯುತ್ತಿದೆ. ಧನ್ಯವಾದಗಳು ನನ್ನ ಆಪ್ತ ಸ್ನೇಹಿತರೇ. ಈ ಅದ್ಭುತ ಸರ್ಪ್ರೈಸ್ ಗೆ ಶ್ರುತಿ ಮತ್ತು ಮಾಳವಿಕಾ ಅವರಿಗೆ ಧನ್ಯವಾದಗಳು. ಈ ಪ್ಲಾನ್ ನಲ್ಲಿ ಭಾಗಿಯಾಗಿದ್ದ ಗೌರಿ ಶ್ರುತಿ (ಶ್ರುತಿ ಮಗಳು) ಮತ್ತು ನಿಧಿ (ಸುಧಾರಾಣಿ ಮಗಳು) ಅವರಿಗೂ ಧನ್ಯವಾದ. ನನ್ನ ಜನ್ಮ ದಿನವನ್ನು ಸ್ಮರಣೀಯ ದಿನವನ್ನಾಗಿ ಮಾಡಿದ್ದೀರಿ" ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ.

  ನಟಿ ಶ್ರುತಿ ಪ್ರತಿಕ್ರಿಯೆ

  ನಟಿ ಶ್ರುತಿ ಪ್ರತಿಕ್ರಿಯೆ

  "ಪ್ರೀತಿಯ ಗೆಳತಿ ಚುಮ್ಮಿಗೆ ಹುಟ್ಟುಹಬ್ಬದ ಶುಭಾಶಯಗಳು. ಜಗತ್ತಿನ ಎಲ್ಲಾ ಸಂತೋಷ, ನೆಮ್ಮದಿ ನಿನ್ನ ದಾಗಲಿ. ಪ್ರತಿವರ್ಷ ಹೀಗೆ birthday surprise ಕೊಡುವ ಅವಕಾಶ ಸಿಗಲಿ. Have a wonderful life dear" ಎಂದು ಹೇಳಿದ್ದಾರೆ.

  ಲೀಲಾವತಿ ಮನೆಗೆ ಭೇಟಿ ನೀಡಿದ್ದ ಸ್ನೇಹಿತೆಯರು

  ಲೀಲಾವತಿ ಮನೆಗೆ ಭೇಟಿ ನೀಡಿದ್ದ ಸ್ನೇಹಿತೆಯರು

  ಕೆಲವು ಸುಂದರ ಕ್ಷಣಗಳ ಫೋಟೋವನ್ನು ಸುಧಾರಾಣಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚಿಗೆ ವ್ಯಕ್ತವಾಗಿದೆ. ಇನ್ನು ಮೊನ್ನೆಯಷ್ಟೆ ಆಪ್ತ್ ಗೆಳತಿಯರು ಹಿರಿಯ ನಟಿ ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚಿಗಷ್ಟೆ ಬಚ್ಚಲು ಮನೆಯಲ್ಲಿ ಕಾಲು ಜಾರಿಬಿದ್ದು ಸೊಂಟ ಮತ್ತು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹಿರಿಯ ನಟಿ ಲೀಲಾವತಿ ಅವರನ್ನು ಶ್ರುತಿ, ಮಾಳವಿಕಾ ಮತ್ತು ಸುಧಾರಾಣಿ ಭೇಟಿಯಾಗಿ ಮಾತನಾಡಿಸಿದ್ದರು. ಲೀಲಾವತಿಯವರ ನೆಲಮಂಗಳ ನಿವಾಸಕ್ಕೆ ಭೇಟಿ ನೀಡಿದ್ದ ನಟಿಮಣಿಯರು ಲೀಲಾವತಿ ಅವರ ಮನೆಯಲ್ಲಿ ಕೆಲ ಸಮಯ ಕಾಲ ಕಳೆದಿದ್ದರು.

  ಲೀಲಾವತಿ ಬಗ್ಗೆ ಸುಧಾರಾಣಿ ಪೋಸ್ಟ್

  ಲೀಲಾವತಿ ಬಗ್ಗೆ ಸುಧಾರಾಣಿ ಪೋಸ್ಟ್

  ಈ ಬಗ್ಗೆ ನಟಿ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಹಿರಿಯ ನಟಿ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದರು. "ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ" ಎಂದು ಸುಧಾರಾಣಿ ಹೇಳಿದ್ದರು.

  English summary
  Senior Actress Shruthi and Malavika surprise to Sudharani for her birthday.
  Sunday, August 15, 2021, 21:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X