»   » ದಿ ವಿಲನ್ ಸಿನಿಮಾದಿಂದ ಹೊರ ಬಂದ ಇಬ್ಬರು ನಟಿಯರು

ದಿ ವಿಲನ್ ಸಿನಿಮಾದಿಂದ ಹೊರ ಬಂದ ಇಬ್ಬರು ನಟಿಯರು

Posted By:
Subscribe to Filmibeat Kannada
ದಿ ವಿಲನ್ ಸಿನಿಮಾದಿಂದ ಹೊರ ಬಂದ ಇಬ್ಬರು ನಟಿಯರು | Oneindia Kannada

ಜೋಗಿ ಪ್ರೇಮ್ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದರೆ ಚಿತ್ರ ಪ್ರಾರಂಭದಿಂದ ಕೊನೆಯ ವರೆಗೂ ಸುದ್ದಿ ಆಗುತ್ತಲೇ ಇರುತ್ತದೆ. ದಿ ವಿಲನ್ ಸಿನಿಮಾ ವಿಚಾರದಲ್ಲೂ ಹಾಗೆ, ಟೈಟಲ್ ಫಿಕ್ಸ್ ಆಗಿದ್ದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸೌಂಡ್ ಮಾಡುತ್ತಲೇ ಇದೆ.

ಮೊನೆ ಮೊನೆಯಷ್ಟೇ ಸಿನಿಮಾದ ಆಡಿಯೋ ಮತ್ತು ಟೀಸರ್ ಬಿಡುಗಡೆ ಮಾಡಲು ಪ್ರಧಾನಿ ಮೋದಿ ಬರುತ್ತಾರೆ ಇದಕ್ಕಾಗಿ ಸಿನಿಮಾ ತಂಡ ಸಿದ್ದತೆ ಮಾಡಿಕೊಂಡಿದೆ ಎಂದು ಸುದ್ದಿ ಆಗಿತ್ತು. ಆ ನಂತರ ಇವೆಲ್ಲಾ ಸುಳ್ಳು ಎಂದು ಖುದ್ದು ನಿರ್ದೇಶಕ ಪ್ರೇಮ್ ಅವರೇ ತಿಳಿಸಿದ್ದರು.

ಜೋಗಿ ಪ್ರೇಮ್ ಹೆಸರಿನಲ್ಲಿ ಮಾಡಿದ್ರು ಗಿಮಿಕ್

ಈಗ ದಿ ವಿಲನ್ ತಂಡದಿಂದ ನಿಂದ ಹೊಸ ನ್ಯೂಸ್ ಹೊರಬಂದಿದೆ. ಚಿತ್ರದಲ್ಲಿದ್ದ ಇಬ್ಬರು ನಟಿಯರು ಟೀಂ ನಿಂದ ಹೊರ ಬಂದಿದ್ದಾರಂತೆ. ಯಾರು ಆ ನಟಿಯರು? ಇಂತಹ ದೊಡ್ಡ ಸಿನಿಮಾದಿಂದ ಹೊರಗೆ ಬರಲು ಕಾರಣವೇನು? ದಿ ವಿಲನ್ ಸಿನಿಮಾ ರಿಲೀಸ್ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

ದಿ ವಿನಲ್ ಚಿತ್ರದಲ್ಲಿಲ್ಲ ಶೃತಿ ಹರಿಹರನ್

ದಿ ವಿಲನ್ ಸಿನಿಮಾ ಸೆಟ್ಟೇರಿದಾಗ ನಟಿ ಶೃತಿ ಹರಿಹರನ್ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅವರ ಭಾಗದ ಚಿತ್ರೀಕರಣವೂ ಮುಗಿದಿದೆ ಎಂದು ಸುದ್ದಿ ಆಗಿತ್ತು. ನಿಜ ಎಂದರೆ ಶೃತಿ ದಿ ವಿಲನ್ ಟೀಂ ನಿಂದ ಹೊರ ಬಂದಿದ್ದಾರಂತೆ.

ಪ್ರೇಮ್ ಚಿತ್ರದಲ್ಲಿಲ್ಲ ಅರುಂಧತಿ ನಾಗ್

ದಿ ವಿಲನ್ ಸಿನಿಮಾದಲ್ಲಿ ಅರುಂಧತಿ ನಾಗ್ ಕೂಡ ಅಭಿನಯಿಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಚಿತ್ರದಲ್ಲಿ ತಾಯಿ ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಕಾರಣ ಅರುಂಧತಿ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿತ್ತು. ಆದರೆ ಆ ಜಾಗಕ್ಕೆ ನಟಿ ಶರಣ್ಯ ಬಂದಿದ್ದಾರೆ.

ಚಿತ್ರದಲ್ಲಿ ಡಿಲೀಟ್ ಆದ ಶೃತಿ ಹರಿಹರನ್

ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಶೃತಿ ಹರಿಹರನ್ ಹಳ್ಳಿ ಹುಡುಗಿ ಪಾತ್ರದಲ್ಲಿ ಅಭಿನಯಿಸಬೇಕಾಗಿತ್ತು. ಡೇಟ್ಸ್ ಸರಿ ಹೊಂದದ ಕಾರಣ ಅಭಿನಯಿಸಿಲ್ಲ. ಆದ್ದರಿಂದ ನಿರ್ದೇಶಕ ಪ್ರೇಮ್ ಶೃತಿ ಸೀನ್ ಗಳನ್ನ ಡಿಲೀಟ್ ಮಾಡಿದ್ದಾರಂತೆ.

ಲಕ್ಷ್ಮೀ ಹಬ್ಬಕ್ಕೆ ದಿ ವಿಲನ್

ಆಗಸ್ಟ್ ತಿಂಗಳಲ್ಲಿ ದಿ ವಿಲನ್ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕ ಸಿ ಆರ್ ಮನೋಹರ್ ನಿರ್ಧರಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರಗಳು ವರಮಾಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರುವುದು ಹಾಗೂ ಬಿಡುಗಡೆ ಆಗುವುದು ಕಾಮನ್ ವಿಚಾರ. ಹಾಗಾಗಿ ದಿ ವಿಲನ್ ಕುಡ ವರಮಾಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

English summary
Kannada Actress Shruthi Hariharan and Arundhati Nag are not acting in The Villain movie. kollywood actress Sharanya replaced of Arundhati Nag character. The film is being released for the Varma Lakshmi festival

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X