»   » ಅಬ್ಬಾ...ಶ್ರುತಿ ಹರಿಹರನ್ ಪ್ರತಿಭೆಗೆ ಇಷ್ಟೊಂದು ಬೇಡಿಕೆನಾ.!

ಅಬ್ಬಾ...ಶ್ರುತಿ ಹರಿಹರನ್ ಪ್ರತಿಭೆಗೆ ಇಷ್ಟೊಂದು ಬೇಡಿಕೆನಾ.!

Posted By:
Subscribe to Filmibeat Kannada
ಸಿನಿಮಾರಂಗದಲ್ಲಿ ಈಗ ಬಾರಿ ಬೇಡಿಕೆಯಿರುವ ನಟಿ ಶ್ರುತಿ ಹರಿಹರನ್ | Filmibeat Kannada

ಕನ್ನಡದಲ್ಲಿ ನಾಯಕಿಯರು ಕಮ್ಮಿ, ಅವಕಾಶ ಸಿಕ್ಕರು ಬಳಸಿಕೊಳ್ಳುವವರು ಕಮ್ಮಿ ಎಂಬ ಮಾತಿದೆ. ಆದ್ರೆ, ಈ ಮಾತು ನಟಿ ಶ್ರುತಿ ಹರಿಹರನ್ ಅವರಿಗೆ ಸಂಬಂಧಪಡಲ್ಲ. ಯಾಕಂದ್ರೆ, ಈಕೆಯ ಪ್ರತಿಭೆಗೆ ಅದೃಷ್ಟ ಎಂಬುವುದು ಅಂಟಿಕೊಂಡು ಬರ್ತಿದೆ.

ಸ್ಟಾರ್ ನಾಯಕರಿಗೂ ಶ್ರುತಿ ನಾಯಕಿ ಆಗ್ಬೇಕು. ಹೊಸಬರ ಚಿತ್ರಕ್ಕೂ ಶ್ರುತಿ ಅವರ ಅಭಿನಯ ಬೇಕು. ಇನ್ನು ಪ್ರಯೋಗಾತ್ಮಕ ಪಾತ್ರಗಳಿಗಂತೂ ಶ್ರುತಿ ಹೆಸರು ಮುಂಚೂಣಿಯಲ್ಲಿರುತ್ತೆ. ಇದರ ಪ್ರತಿಫಲ ಈಗ ಶ್ರುತಿ ಹರಿಹರನ್ ಸಿಕ್ಕಾಪಟ್ಟೆ ಬಿಜಿ.

ಇವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ನೋಡಿದ್ರೆ ಒಂದು ಕ್ಷಣ ಆಶ್ಚರ್ಯವಾಗುವುದಂತು ಗ್ಯಾರೆಂಟಿ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳು, ತೆಲುಗು ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹಾಗಿದ್ರೆ, ಶ್ರುತಿ ಅಭಿನಯಿಸುತ್ತಿರುವ ಹೊಸ ಸಿನಿಮಾಗಳು ಯಾವುದು ಎಂದು ಮುಂದೆ ನೀಡಲಾಗಿದೆ. ಓದಿ......

'ದಿ ವಿಲನ್' ರಿಲೀಸ್ ಆಗಬೇಕಿದೆ

ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಪ್ರೇಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ತೆರೆಕಾಣುವ ಸಾಧ್ಯತೆ ಇದೆ.

ಭೂತಯ್ಯನ ಮೊಮ್ಮಗ ಅಯ್ಯು

ನಾಗರಾಜ್ ಪೀಣ್ಯ ಆಕ್ಷನ್ ಕಟ್ ಹೇಳುತ್ತಿರುವ 'ಭೂತಯ್ಯನ ಮೊಮ್ಮಗ ಅಯ್ಯು' ಚಿತ್ರದಲ್ಲಿ ಶ್ರುತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ, ತಬಲಾ ನಾಣಿ, ರವಿಶಂಕರ್, ರಾಕ್ ಲೈನ್ ಸುಧಾಕರ್, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಉಮೇಶ್, ಸಿದ್ದಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಭೂತಯ್ಯನ ಮೊಮ್ಮಗ ಅಯ್ಯು' ಜೊತೆ ಶೃತಿ ಹರಿಹರನ್

ಹಂಬಲ್ ಪೊಲಿಟಿಶಿಯನ್ ನಾಗರಾಜ್

ಟಿವಿ ಸ್ಟಾರ್, ಆರ್ ಜೆ ಡ್ಯಾನೀಶ್ ಸೇಠ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಚಿತ್ರದಲ್ಲೂ ಶ್ರುತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ಬಿಡುಗಡೆ ಮಾಡಿರುವ ಚಿತ್ರ ಆದಷ್ಟೂ ಬೇಗ ತೆರೆಗೆ ಬರಲಿದೆ.

'ಲೇಡಿಸ್ ಟೈಲರ್' ನಲ್ಲೂ ಶ್ರುತಿ

'ನೀರ್ದೋಸೆ' ಖ್ಯಾತಿಯ ನಿರ್ದೇಶಕ ವಿಜಯ ಪ್ರಸಾದ್ ನಿರ್ದೇಶನ ಮಾಡಲಿರುವ 'ಲೇಡಿಸ್ ಟೈಲರ್' ಚಿತ್ರಕ್ಕೆ ಶ್ರುತಿ ಹರಿಹರನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರಕ್ಕಾಗಿ ಶ್ರುತಿ ತಮ್ಮ ತೂಕವನ್ನ ಹೆಚ್ಚಿಸಿಕೊಳ್ಳಬೇಕಿದೆ.

ಸ್ಟಾರ್ ಕಲಾವಿದರು ರಿಜೆಕ್ಟ್ ಮಾಡಿದ 'ಚಿತ್ರಕ್ಕೆ' ಶ್ರುತಿ ಅದೃಷ್ಟವಾಗ್ತಾರಾ.?

'ರಾಜರಥ'ದಲ್ಲಿ ಶ್ರುತಿ ಸವಾರಿ

'ರಂಗಿತರಂಗ' ಖ್ಯಾತಿಯ ಭಂಡಾರಿ ಬ್ರದರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ರಾಜರಥ' ಚಿತ್ರದಲ್ಲಿ ಶ್ರುತಿ ಹರಿಹರನ್ ವಿಶೇಷ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಸಿನಿಮಾ ಜನವರಿ 25ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

'ರಾಜರಥ'ದಲ್ಲಿ ಸವಾರಿ ಮಾಡಲಿರುವ ಶ್ರುತಿ ಹರಿಹರನ್

'ಅಂಬಿ ನಿಂಗೆ ವಯಸಾಯ್ತೋ' ಚಿತ್ರದಲ್ಲಿ ನಟನೆ.!

ಸುದೀಪ್ ಮತ್ತು ಅಂಬರೀಷ್ ಜೋಡಿಯ 'ಅಂಬಿ ನಿಂಗೆ ವಯಸಾಯ್ತೋ' ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಶ್ರುತಿ ಹರಿಹರನ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಈ ಆಫರ್ ಶ್ರುತಿಗೆ ಬಂದಿದ್ದು, ಇನ್ನು ಮಾತುಕತೆ ಹಂತದಲ್ಲಿದೆಯಂತೆ.

ಕೆ.ಎಂ ಚೈತನ್ಯ ಸಿನಿಮಾಗೆ ನಾಯಕಿ

'ಆ ದಿನಗಳು', 'ಆಟಗಾರ', 'ಆಕೆ' ಚಿತ್ರಗಳ ನಂತರ ನಿರ್ದೇಶಕ ಕೆ.ಎಂ ಚೈತನ್ಯ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಚಿರು ಸರ್ಜಾ ನಾಯಕನಾಗಿದ್ದು, ಶ್ರುತಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಇನ್ನು ಶುರುವಾಗಬೇಕಿದೆ.

ಹೊಸ ಚಾಲೆಂಜ್ ಗೆ ಸಿದ್ದವಾದ ಶ್ರುತಿ ಹರಿಹರನ್.!

ನಿರ್ದೇಶಕ ಮನ್ಸೋರೆ ಸಿನಿಮಾದಲ್ಲಿ ಶ್ರುತಿ

ರಾಜ್ಯ ಪ್ರಶಸ್ತಿ ಖ್ಯಾತಿಯ ನಿರ್ದೇಶಕ ಮನ್ಸೋರೆ ಅವರ ಹೊಸ ಚಿತ್ರದಲ್ಲಿ ಶ್ರುತಿ ನಟಿಸುತ್ತಿದ್ದಾರಂತೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಗಂಭೀರವಾದ ಹೆಣ್ಣಿನ ಪಾತ್ರ ನಿರ್ವಹಿಸುತ್ತಿದ್ದಾರಂತೆ.

ತಮಿಳು ಚಿತ್ರದಿಂದ ಆಫರ್

ತಮಿಳಿನ ಹೊಸ ಚಿತ್ರದಲ್ಲಿ ನಟಿಸುವಂತೆ ಶ್ರುತಿಗೆ ಆಫರ್ ಬಂದಿದೆಯಂತೆ. ಆದ್ರೆ, ಅದು ಇನ್ನು ಮಾತುಕತೆ ಹಂತದಲ್ಲಿದೆ ಎನ್ನಲಾಗಿದೆ. ಹೀಗಾಗಿ, ಈ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಬಹಿರಂಗವಾಗಿಲ್ಲ.

ತೆಲುಗಿನಲ್ಲಿ ಲೂಸಿಯಾ ಬೆಡಗಿ

ತಮಿಳಿನ ನಂತರ ತೆಲುಗಿನ ಒಂದು ಚಿತ್ರದಲ್ಲಿ ಶ್ರುತಿ ನಟಿಸಲಿದ್ದಾರೆ. ಈ ಚಿತ್ರ ಹೊಸಬರ ಸಿನಿಮಾ ಆಗಿದ್ದು ಇನ್ನೂ ಹೆಸರಿಟ್ಟಿಲ್ಲ.

ಟಾಲಿವುಡ್ ನಲ್ಲಿ 'ತಾರಕ್' ಚೆಲುವೆ: ಚತುರ್ಭಾಷಾ ನಟಿ ಆದ ಶೃತಿ ಹರಿಹರನ್

ಹೊಸಬರ ಚಿತ್ರದಲ್ಲಿ ಶ್ರುತಿ

ಇದಷ್ಟೇ ಅಲ್ಲದೇ, ಕನ್ನಡದ 'ಟೆಸ್ಲಾ' ಎನ್ನುವ ಹೊಸ ಸಿನಿಮಾದಲ್ಲಿ ಶ್ರುತಿ ಹರಿಹರನ್ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸಂಚಾರಿ ವಿಜಯ್ ಜೊತೆ ಕೂಡ ಒಂದು ಸಿನಿಮಾ ಮಾಡ್ತಿದ್ದಾರೆ.

ಪ್ರತಿಭೆ ಜೊತೆ ಲಕ್

ಒಂದು ಕಡೆ ಪ್ರತಿಭೆ ಇನ್ನೊಂದು ಕಡೆ ಅದೃಷ್ಟ... ಎರಡು ಇರುವ ಶೃತಿಗೆ ಒಳ್ಳೊಳ್ಳೆ ಸಿನಿಮಾ ಅವಕಾಶ ಹುಡುಕಿಕೊಂಡು ಬರುತ್ತಿದೆ. ಒಂದ್ಕಡೆ ಸ್ಟಾರ್ ನಟರ ಸಿನಿಮಾಗಳು, ಮತ್ತೊಂದೆಡೆ ಪ್ರಯೋಗಾತ್ಮಕ ಪಾತ್ರಗಳು, ಅದರ ಜೊತೆಯಲ್ಲಿ ಹೊಸಬರ ಚಿತ್ರಗಳಲ್ಲಿ ಕೂಡ ನಟನೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶ್ರುತಿಯಷ್ಟು ಸಿನಿಮಾಗಳು ಯಾವ ನಟಿಯ ಕೈಯಲ್ಲೂ ಇಲ್ಲ.

ಕದ್ದು-ಮುಚ್ಚಿ ಮದುವೆ ಆಗಿದ್ದಾರಂತೆ ನಟಿ ಶೃತಿ ಹರಿಹರನ್: ಹೌದಾ.?

English summary
kannada actress shruthi hariharan upcoming movie list in kannada and tamil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada