Just In
Don't Miss!
- News
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
- Sports
ಕೊಹ್ಲಿ-ಸ್ಟೋಕ್ಸ್ ಮಧ್ಯೆ ಮಾತಿನ ಚಕಮಕಿ, ಅಂಪೈರ್ಗಳ ಮಧ್ಯ ಪ್ರವೇಶ: ವಿಡಿಯೋ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Education
IIMB Recruitment 2021: ಅಕಾಡೆಮಿಕ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲೈಂಗಿಕ ಕಿರುಕುಳದ ಹೇಳಿಕೆಯ ನಂತರ: ಶೃತಿ ಕೊಟ್ಟ ಮೊದಲ ಪ್ರತಿಕ್ರಿಯೆ

ಖಾಸಗಿ ಸುದ್ದಿವಾಹಿನಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ (ಕಾಸ್ಟಿಂಗ್ ಕೌಚ್) ಸಿನಿಮಾರಂಗಕ್ಕೆ ಬರುವಾಗ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ನಟಿ ಶೃತಿ ಹರಿಹರನ್ ನಿನ್ನೆ(ಜ.19) ಮಾತನಾಡಿದ್ದರು.
ಬೆಳಗಾಗುತ್ತಲೇ ದೊಡ್ಡ ಮಟ್ಟದಲ್ಲಿ ಈ ಸುದ್ದಿ ಹರಿದಾಡಿತ್ತು. ಸುಮಾರು ಐದು ತಿಂಗಳ ಹಿಂದೆಯೂ ಶೃತಿ ಈ ಬಗ್ಗೆ ಮಾತನಾಡಿದ್ದರು. ನಿನ್ನೆ ನಡೆದ "ಸೆಕ್ಸಿಸಮ್ ಇನ್ ಇಂಡಿಯಾ" ಸಿನಿಮಾ ವಿಷಯದಲ್ಲಿ ಮಾತನಾಡುತ್ತಾ ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಶೃತಿ ನೇರ ನುಡಿಯಲ್ಲಿ ಮಾತನಾಡಿದ್ದರು.
ಇಷ್ಟೆಲ್ಲಾ ಮಾತನಾಡಿದ ನಂತರ ಶೃತಿ ಯಾವುದೇ ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ಹಾಗಾದ್ರೆ ಶೃತಿ ಎಲ್ಲಿದ್ದಾರೆ? ಈ ಬಗ್ಗೆ ಶೃತಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದೇನು? ಮಾಧ್ಯಮದವರ ಬಳಿ ಶೃತಿ ಮಾಡಿರುವ ಮನವಿ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಪ್ರತಿಕ್ರಿಯೆ ನೀಡದ ನಟಿ
ನಿನ್ನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ಶೃತಿ ಹರಿಹರನ್ ನಂತರ ಯಾವುದೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿಲ್ಲ. "ಮುಂಜಾನೆ 5-30 ರಿಂದ ಮಾಧ್ಯಮಗಳಿಂದ ಕರೆ ಬರಲು ಶುರುವಾಗಿದೆ. ಅವರಿಗೆ ಅವರ ಸುದ್ದಿ ಬೇಕು, ಸಾಕಷ್ಟು ಸುಳ್ಳು ಸುದ್ದಿ ಮಾಡುವ ಮೀಡಿಯಾಗಳು ಇವೆ. ಹಾಗಾಗಿ ನನಗೆ ಅವರು ಕರೆ ಮಾಡಿರುವುದು ಆಶ್ಚರ್ಯವೇನು ತಂದಿಲ್ಲ. ನನಗೆ ನನ್ನ ಅಭಿಪ್ರಾಯವನ್ನ ನೀಡಲು ಸಮಯ ಕೊಡಿ" ಎಂದು ಶೃತಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿಕೊಂಡಿದ್ದಾರೆ.

ಯಾರಿಗೂ ಹೆದರಿಸುವ ತಂತ್ರ ಮಾಡಿಲ್ಲ
ತನ್ನ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಶೃತಿ "ಇದು ಸಿನಿಮಾರಂಗಕ್ಕೆ ಬರುವವರನ್ನ ಹೆದರಿಸುವ ತಂತ್ರ ಅಲ್ಲ. ನನಗಾದ ಅನುಭವವನ್ನ ಹೇಳಿಕೊಂಡಿದ್ದೇನೆ. ಸಿನಿಮಾರಂಗ ವೈಯುಕ್ತಿಕವಾಗಿ ನನಗೆ ತುಂಬಾ ಇಷ್ಟವಾಗಿದೆ. ನನಗೆ ಇಲ್ಲಿ ಕೆಲಸ ಮಾಡಿ ತೃಪ್ತಿ ಸಿಕ್ಕಿದೆ. ನನ್ನ ಮನೆಯವರು ಕೂಡ ನಾನು ಕಲಾವಿದೆ ಆಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ" ಎಂದಿದ್ದಾರೆ.

ಪ್ರತಿಭೆ ಇದ್ದಲ್ಲಿ ಪುರಸ್ಕಾರ ಖಂಡಿತ
''ನನ್ನಂತೆ ಸಾಕಷ್ಟು ಜನರು ಲೈಂಗಿಕ ಕಿರುಕುಳವನ್ನ ಅನುಭವಿಸಿರುತ್ತಾರೆ. ಅವರ ಜೊತೆಯಲ್ಲಿ ಸಹಕರಿಸಿ ಸಿನಿಮಾರಂಗದಲ್ಲಿ ಫೇಮಸ್ ಆಗುತ್ತೇವೆ ಎಂದುಕೊಳ್ಳುವುದು ಸುಳ್ಳು. ಪ್ರತಿಭೆ ಮತ್ತು ಶ್ರಮ ಇದ್ದ ಕಡೆಯಲ್ಲಿ ಅದಕ್ಕೆ ಪ್ರತಿಫಲ ಇದ್ದೇ ಇರುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.

ಒಳ್ಳೆಯವರು ಇದ್ದಾರೆ ಚಿತ್ರರಂಗದಲ್ಲಿ
"ಚಿತ್ರರಂಗ ಈಗ ಬದಲಾಗಿದೆ. ಇಲ್ಲಿಯೂ ಸಾಕಷ್ಟು ಜನ ಒಳ್ಳೆಯವರು ಇದ್ದಾರೆ. ಅದೆಷ್ಟೋ ಒಳ್ಳೆಯ ಕಲಾವಿದರು ಮತ್ತು ತಂತ್ರಜ್ಞರ ಜೊತೆ ನಾನು ಕೆಲಸ ಮಾಡಿಲ್ಲ. ಈಗ ಬರುತ್ತಿರುವ ನವ ಕಲಾವಿದರು ಯಾವುದೇ ಕಿರುಕುಳ ಇಲ್ಲದೇ ಸ್ಟಾರ್ ಆಗಿದ್ದಾರೆ ಅವರುಗಳ ಬಗ್ಗೆ ನನಗೆ ಖುಷಿ ಇದೆ" ಎಂದು ಬರೆದಿದ್ದಾರೆ ಶೃತಿ

ಕ್ಯಾಂಪೆನ್ ಪ್ರಾರಂಭಿಸಿದ ನಟಿ
ಸಿನಿಮಾರಂಗದಲ್ಲಿ ಲೈಗಿಂಕ ಕಿರುಕುಳ ನಿಲ್ಲಬೇಕು ಎಂದು ಶೃತಿ ಹರಿಹರನ್ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.