»   » 'ಕಿಚ್ಚನ್ ಟೈಂ'ನಿಂದ ಕಿಚ್ಚನ ಸಿನಿಮಾವರೆಗೂ ನಡೆದ ಶ್ರುತಿ ಹರಿಹರನ್

'ಕಿಚ್ಚನ್ ಟೈಂ'ನಿಂದ ಕಿಚ್ಚನ ಸಿನಿಮಾವರೆಗೂ ನಡೆದ ಶ್ರುತಿ ಹರಿಹರನ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ. ಅಂಬರೀಶ್ ಜೊತೆಯಾಗಿ ಸುಹಾಸಿನಿ ಅಭಿನಯಿಸುತ್ತಿದ್ದಾರೆ. ಇನ್ನು ಕಿಚ್ಚನ ಜೊತೆಯಲ್ಲಿ ನಾಯಕಿಯಾಗಿ ಅಭಿನಯಿಸೋದಕ್ಕೆ ನಟಿ ಶೃತಿ ಹರಿಹರನ್ ಸೆಲೆಕ್ಟ್ ಆಗಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಬಿಗ್ ಬಾಸ್ ಕಾರ್ಯಕ್ರಮದ ಕಿಚ್ಚನ್ ಟೈಂ ನಲ್ಲಿ ಕಾಣಿಸಿಕೊಂಡಿದ್ದ ನಟಿ ಶೃತಿ ಈಗ ಸುದೀಪ್ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.

ಕಡಿಮೆ ಸಮಯದಲ್ಲೇ ಅದ್ಬುತ ಕಲಾವಿದೆ ಎನ್ನುವ ಪಟ್ಟವನ್ನ ಪಡೆದುಕೊಂಡಿರುವ ನಟಿ ಶೃತಿ ಹರಿಹರನ್. ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಶೃತಿ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಮುಂದಾಗಿರುವ ಶೃತಿ ಕಿಚ್ಚನ ಜೊತೆ ನಾಯಕಿಯಾಗಿದ್ದಾರೆ.

ಮೊದಲ ಬಾರಿಗೆ ಸ್ಕ್ರೀನ್ ಶೇರ್

ಬಿಗ್ ಬಾಸ್ ಕಿಚ್ಚನ್ ಟೈಂ ನಲ್ಲಿ ಭಾಗಿಯಾಗಿದ್ದ ನಟಿ ಶೃತಿ ಹರಿಹರನ್ ಈಗ ಬಿಗ್ ಸ್ಕ್ರೀನ್ ಮೇಲೆ ಕಿಚ್ಚನ ನಾಯಕಿಯಾಗಲಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಸುದೀಪ್ ಹೀರೋಯಿನ್ ಆಗಿ ಶೃತಿ ಅಭಿನಯಿಸಲಿದ್ದಾರೆ.

ನಟಿಯೂ ಹೌದು ನಿರ್ಮಾಪಕಿಯೂ ಹೌದು

ಶೃತಿ ಹರಿಹರನ್ ಅಭಿನಯಕ್ಕೆ ಬೌಲ್ಡ್ ಆಗದವರಿಲ್ಲ. ಮೂರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಶೃತಿ ಆಕ್ಟ್ ಮಾಡಿರುವ ಕನ್ನಡದ ದಿ ವಿಲನ್, ಟೆಸ್ಲಾ, ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್, ತಮಿಳಿನ ರಾ ರಾ ರಾಜಶೇಖರ್ ಚಿತ್ರಗಳು ಬಿಡುಗಡೆಯಾಗಬೇಕಿವೆ. ಇವುಗಳ ಜೊತೆಯಲ್ಲಿ ಈಗ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಶೃತಿ ಅಭಿನಯಿಸಲಿದ್ದಾರೆ.

ಕುತೂಹಲ ಮೂಡಿಸಲಿರುವ ಟೀಸರ್

ಜಾಕ್ ಮಂಜು ನಿರ್ಮಾಣದಲ್ಲಿ ಸೆಟ್ಟೇರಲಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾವನ್ನ ಗುರು ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಿರುವ ಅಂಬಿ ನಿಂಗ್ ವಯಸ್ಸಾಯ್ತೋ ತಂಡ ಮುಂದಿನ ವಾರದಲ್ಲಿ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ತಿದೆ. ಮೊದಲಿಗೆ ಅಂಬರೀಶ್ ಹಾಗೂ ಸುಹಾಸಿನಿ ಕಾಂಬಿನೇಶನ್ ಸೀನ್ ಗಳ ಶೂಟಿಂಗ್ ಮಾಡಲಿದೆ.

ಹೇಗೆ ಕಾಣಿಸುತ್ತಾರೆ ಕಿಚ್ಚ.?

ಫೆಬ್ರವರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಇಬ್ಬರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದು ಇಂದಿನ ಟೆಕ್ನಾಲಜಿ ಬಳಸಿ ಅಂಬರೀಶ್ ಅವರ ಎತ್ತರಕ್ಕೆ ಸರಿ ಹೊಂದುವಂತೆ ಸುದೀಪ್ ಅವರ ಹೈಟ್ ಅನ್ನ ಮ್ಯಾಚ್ ಮಾಡಲಾಗುತ್ತಂತೆ. ಈಗಾಗಲೇ ಇದಕ್ಕಾಗಿ ತಯಾರಿ ಮಾಡಿಕೊಂಡಿರುವ ನಿರ್ದೇಶಕ ಗುರು ಗಾಣಿಗ ತೆರೆ ಮೇಲೆ ಸುದೀಪ್ ರನ್ನ ಬೇರೆಯದ್ದೇ ರೀತಿಯಲ್ಲಿ ಪ್ರೆಸೆಂಟ್ ಮಾಡಲು ಮುಂದಾಗಿದ್ದಾರೆ.

English summary
Kannada Actress Shruti Hariharan will play lead role in Sudeep's upcoming movie 'Ambi Ning Vaisayaito'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada