»   » ಐತಿಹಾಸಿಕ ಚಿತ್ರದಲ್ಲಿ ಯಾವ ನಟಿಗೆ ಸಿಗುತ್ತೆ ಬಂಪರ್ ಆಫರ್.!

ಐತಿಹಾಸಿಕ ಚಿತ್ರದಲ್ಲಿ ಯಾವ ನಟಿಗೆ ಸಿಗುತ್ತೆ ಬಂಪರ್ ಆಫರ್.!

Posted By:
Subscribe to Filmibeat Kannada

'ರಾಗ' ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಹೊಸ ಸಾಹಸಕ್ಕೆ ಕೈಹಾಕಿರುವುದು ಗೊತ್ತೆ ಇದೆ. 'ಆ ದಿನಗಳು' ಚೇತನ್ ಜೊತೆ ಐತಿಹಾಸಿಕ ಸಿನಿಮಾ ಮಾಡುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆಗಳು ನಡೆಯುತ್ತಿದೆ.

ಬ್ರಿಟಿಷ್ ಕಾಲದ ಕಥೆಯನ್ನ ಆಯ್ಕೆ ಮಾಡಿಕೊಂಡಿರುವ ಪಿ.ಸಿ.ಶೇಖರ್ ಬಿಗ್ ಬಜೆಟ್ ಹಾಕಿ ಸಿನಿಮಾ ಮಾಡ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಮಹಾತ್ಮ ಗಾಂಧಿ ಮತ್ತು ನೆಹರೂ ಅವರ ಛಾಯೆ ಕೂಡ ಬರಲಿದೆಯಂತೆ.

Shruti hassan approached for historical role in Kannada

ಚೇತನ್ ಜೊತೆ ಹೊಸ ಸಾಹಸಕ್ಕೆ ಕೈಹಾಕಿದ ಪಿ.ಸಿ.ಶೇಖರ್.!

ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ದಕ್ಷಿಣ ಭಾರತದ ಸ್ಟಾರ್ ನಟಿಯರನ್ನ ಸಂಪರ್ಕಿಸಲಾಗುತ್ತಿದೆ. ಈಗಾಗಲೇ ತಮಿಳು ನಟಿ ಶ್ರೀದಿವ್ಯಾ ಮತ್ತು ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಿರ್ದೇಶಕರ ಗಮನದಲ್ಲಿದ್ದಾರಂತೆ.

ಸದ್ಯಕ್ಕೆ ಯಾವ ನಟಿಯನ್ನ ಆಯ್ಕೆ ಮಾಡಿಲ್ಲ. ಆದ್ರೆ, ಶ್ರುತಿ ಹಾಸನ್ ಗಾಗಿ ಕನ್ನಡದ ನಿರ್ದೇಶಕರು ಪೈಪೋಟಿಗೆ ಬಿದ್ದಿದ್ದಾರೆ ಎನ್ಸುತ್ತೆ. ನಿರ್ದೇಶಕ ನಂದಕಿಶೋರ್, ಧ್ರುವ ಸರ್ಜಾ ಅಭಿನಯಿಸಲಿರುವ 'ಪೊಗರು' ಚಿತ್ರಕ್ಕೆ ಶ್ರುತಿ ಅವರನ್ನ ಕರೆತರುವ ಚಿಂತನೆಯಲ್ಲಿದ್ದಾರೆ. ಈ ಮಧ್ಯೆ ಪಿ.ಸಿ ಶೇಖರ್ ತಮ್ಮ ಐತಿಹಾಸಿಕ ಚಿತ್ರಕ್ಕೆ ಶ್ರುತಿಗೆ ಆಫರ್ ಮಾಡಲು ಮುಂದಾಗಿದ್ದಾರೆ. ನಿಜಕ್ಕೂ ಶ್ರುತಿ ಹಾಸನ್ ಕನ್ನಡಕ್ಕೆ ಬರ್ತಾರ, ಬಂದ್ರು ಯಾವ ಚಿತ್ರದ ಮೂಲಕ ಬರ್ತಾರೆ ಎನ್ನುವುದು ಕಾದುನೋಡಬೇಕಿದೆ.

English summary
South Actress Shruti hassan approached for historical role in pc shekar's Kannada film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X