For Quick Alerts
  ALLOW NOTIFICATIONS  
  For Daily Alerts

  'ನಾನು ನಟಿ, ಸಾರ್ವಜನಿಕ ಸ್ವತ್ತಲ್ಲ': ನಟಿ ಶುಭ್ರ ಅಯ್ಯಪ್ಪ ಆಕ್ರೋಶ

  |

  'ವಜ್ರಕಾಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಮಾಡೆಲ್ ಕಮ್ ನಟಿ ಶುಭ್ರ ಅಯ್ಯಪ್ಪ ಕೆಲವು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ನಾನು ನಟಿ, ನಾನು ಮಾಡೆಲ್, ನಾನು ಸಾರ್ವಜನಿಕ ದೃಷ್ಟಿಯಲ್ಲಿರಲು ಬಯಸಿದವಳು, ಆದರೆ ನಾನು ಸಾರ್ವಜನಿಕ ಸ್ವತ್ತಲ್ಲ'' ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

  ಇಷ್ಟೇ ಆಗಿದ್ದರೇ ಈ ಸುದ್ದಿಗೆ ಅಷ್ಟು ಪ್ರಾಮುಖ್ಯತೆ ಕೊಡಬೇಕಾಗಿರಲಿಲ್ಲವೇನೋ? ಆದರೆ ಶುಭ್ರ ಅಯ್ಯಪ್ಪ ಸುದೀರ್ಘವಾಗಿ ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇಂತಹ ಕ್ರೂರ ಮನಸ್ಸಿನ ವ್ಯಕ್ತಿಗಳು ಇರ್ತಾರಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಅಷ್ಟಕ್ಕೂ, ಶುಭ್ರ ಅಯ್ಯಪ್ಪ ಹೀಗೆ ಕೋಪ ಮಾಡಿಕೊಂಡಿರುವುದೇಕೆ? ಇಷ್ಟೊಂದು ಆಕ್ರೋಶ ಭರಿತವಾಗಿ ಈ ಪೋಸ್ಟ್ ಹಾಕಲು ಕಾರಣವೇನು? ಯಾರ ವಿರುದ್ಧ ವಜ್ರಕಾಯ ನಟಿ ರೊಚ್ಚಿಗೆದ್ದಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿದೆ. ಮುಂದೆ ಓದಿ.....

  ಫೋಟೋ ದುರ್ಬಳಕೆ ಆಗಿದೆ

  ಫೋಟೋ ದುರ್ಬಳಕೆ ಆಗಿದೆ

  ಶುಭ್ರ ಅಯ್ಯಪ್ಪ ಅವರ ಕೆಲವು ಖಾಸಗಿ ಫೋಟೋಗಳು ಲೀಕ್ ಆಗಿದೆ ಎನ್ನಲಾಗಿದೆ. ಶುಭ್ರ ಅಯ್ಯಪ್ಪ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲವಾಗಿ ಕಾಣಿಸಿಕೊಂಡಿರುವ ಫೋಟೋಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶುಭ್ರ ಅಯ್ಯಪ್ಪ ''ಕಿಡಿಗೇಡಿಗಳು ನನ್ನ ಬಿಕಿನಿ ಫೋಟೋಗಳನ್ನ ಫೋಟೋಶಾಪ್ ಬಳಸಿ, ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ'' ಎಂದು ನೋವು ಹಂಚಿಕೊಂಡಿದ್ದಾರೆ.

  ಬಿಕಿನಿ ತೊಟ್ಟು ನಾನು ರಸ್ತೆಯಲ್ಲಿ ಓಡಾಡಿಲ್ಲ

  ಬಿಕಿನಿ ತೊಟ್ಟು ನಾನು ರಸ್ತೆಯಲ್ಲಿ ಓಡಾಡಿಲ್ಲ

  ಶುಭ್ರ ಅಯ್ಯಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಬಿಕಿನಿ ಫೋಟೋಗಳನ್ನ ಹಂಚಿಕೊಂಡಿದ್ದರು. ಆ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೂಲಕ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ''ರಜೆಯಲ್ಲಿ ಸಾಮಾನ್ಯ ಮನುಷ್ಯಳಂತೆ ಎಂಜಾಯ್ ಮಾಡೋದ್ರಲ್ಲಿ ತಪ್ಪೇನಿದೆ? ನಾನು ಬಿಕಿನಿಯನ್ನ ರಸ್ತೆಯಲ್ಲಿ ಹಾಕಿಕೊಂಡು ತಿರುಗಾಡಿಲ್ಲ. ಬೀಚ್ ನಲ್ಲಿ ಹಾಕಿಕೊಂಡಿದ್ದೇನೆ. ನಾನು ಎಂಜಾಯ್ ಮಾಡಿದ ಫೋಟೋವನ್ನ ನನ್ನ ಖಾತೆಯಲ್ಲಿ ಹಂಚಿಕೊಂಡರೆ ತಪ್ಪೇನು? ಅದಕ್ಕೆ ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡಬೇಕು. ನನ್ನ ಮನಸ್ಸಿಗೆ ನೀವು ಆಗುವುದಿಲ್ಲವೇ?'' ಎಂದು ಪ್ರಶ್ನಿಸಿದ್ದಾರೆ.

  ನಾನು ಒಬ್ಬಳು ಹೆಣ್ಣು, ಮಗಳು, ತಂಗಿ ಎಲ್ಲವೂ

  ನಾನು ಒಬ್ಬಳು ಹೆಣ್ಣು, ಮಗಳು, ತಂಗಿ ಎಲ್ಲವೂ

  ''ನಾನು ಒಬ್ಬ ಹೆಣ್ಣು. ನನ್ನಲ್ಲೂ ಒಬ್ಬ ಮಗಳಿದ್ದಾಳೆ. ತಂಗಿ ಇದ್ದಾಳೆ. ಅಕ್ಕ ಇದ್ದಾಳೆ. ನನಗೂ ಪರ್ಸನಲ್ ಜೀವನ ಇದೆ. ನನಗೆ ಇಷ್ಟ ಬಂದಂತೆ ಜೀವಿಸಲು ಸ್ವತಂತ್ರವಿದೆ. ನಾನು ಎಲ್ಲರಂತೆ ಕೆಲಸ ಮಾಡುತ್ತೇನೆ. ನನಗೆ ಇಷ್ಟವಾಗುವಂತಹ ಬಟ್ಟೆ ತೊಡುತ್ತೇನೆ. ನನ್ನ ಕೆಲವು ಫೋಟೋಗಳನ್ನ ನೋಡಿ 'ನನಗೆ ಸಂಸ್ಕೃತಿ ಗೊತ್ತಿಲ್ಲ. ಸಂಸ್ಕೃತಿ ಇಲ್ಲದವಳು ಎಂದು ನೋಡುವುದು ಎಷ್ಟು ಸರಿ?'' ಎಂದು ಕೇಳಿದ್ದಾರೆ.

  ನಿಂದಿಸುವವರಿಗೆ ಉತ್ತರಿಸುವ ಅವಶ್ಯಕತೆ ಇಲ್ಲ

  ನಿಂದಿಸುವವರಿಗೆ ಉತ್ತರಿಸುವ ಅವಶ್ಯಕತೆ ಇಲ್ಲ

  ನನ್ನ ಪರವಾಗಿ ನಿಂತು ನನಗೆ ಸಪೋರ್ಟ್ ಮಾಡಿದವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ಹಾಗೂ ನನ್ನ ಫೋಟೋಗಳನ್ನ ನೋಡಿ ಕೆಟ್ಟದಾಗಿ ಕಾಮೆಂಟ್ ಮಾಡೋರಿಗೆ ನಾನು ಉತ್ತರಿಸಿಲ್ಲ. ಅವರಿಂದ ದೂರವಿರಲು ಪ್ರಯತ್ನಿಸುತ್ತೇನೆ. ನನ್ನ ಪ್ರೀತಿಸುವವರಿಗೆ ನಾನೆಂದು ತಲೆ ತಗ್ಗಿಸುವಂತಹ ಕೆಲಸ ಮಾಡಲ್ಲ'' ಎಂದು ನಟಿ ಶುಭ್ರ ಅಯ್ಯಪ್ಪ ತಮ್ಮ ನೋವು ಹಂಚಿಕೊಂಡಿದ್ದಾರೆ.

  Read more about: shubra aiyappa sandalwood
  English summary
  Kannada actress and model Shubra aiyappa clarified about her obscene morphed pictures, what went viral on social media and mobile whatsapps.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X