»   » ಶಿವಣ್ಣನ 'ವಜ್ರಕಾಯ' ಪ್ರವೇಶಿಸಿದ ದಂತದ ಗೊಂಬೆ ಶುಭ್ರಾ

ಶಿವಣ್ಣನ 'ವಜ್ರಕಾಯ' ಪ್ರವೇಶಿಸಿದ ದಂತದ ಗೊಂಬೆ ಶುಭ್ರಾ

Posted By:
Subscribe to Filmibeat Kannada

ನಟಿಯಾಗಿ ಚಲಾವಣೆಯಲ್ಲಿರುವ ಸೂಪರ್ ಮಾಡೆಲ್ ಶುಭ್ರಾ ಅಯ್ಯಪ್ಪ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಬೆಂಗಳೂರು ಮೂಲದ ಈ ಬೆಡಗಿ ಈಗಾಗಲೆ ತೆಲುಗು, ತಮಿಳು ಚಿತ್ರಗಳಲ್ಲಿ ಬಿಜಿಯಾಗಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಅಡಿಯಿಟ್ಟಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಎ ಹರ್ಷ ಆಕ್ಷನ್ ಕಟ್ ಹೇಳುತ್ತಿರುವ ವಜ್ರಕಾಯ ಚಿತ್ರದಲ್ಲಿ ಅವರು ವಿಶೇಷ ಪಾತ್ರವನ್ನು ಪೋಷಿಸುತ್ತಿದ್ದಾರೆ. ತಮಿಳು ನಟ ಧನುಷ್ ಹಾಡಿರುವ ಈ ಹಾಡಿನಲ್ಲಿ ಶುಭ್ರಾ ತಮ್ಮ ಸೊಂಟ ಬಳುಕಿಸಿರುವುದು ವಿಶೇಷ. [ಕನ್ನಡದಲ್ಲಿ ಕೊಲವೆರಿಡಿ ಹಾಡು ಬಂದಿದೆ, ಹೆಡ್ ಸೆಟ್ ಹಾಕ್ಕೊಳ್ಳಿ]ಚಿತ್ರದ ಆರಂಭಿಕ 15 ನಿಮಿಷಗಳ ಕಾಲ ಶುಭ್ರಾ ಕಾಣಿಸಲಿದ್ದಾರೆ. ತಮಿಳಿನ ''ವೈ ದಿಸ್ ಕೊಲವೆರಿ...'' ರೇಂಜ್ ನಲ್ಲಿ ಗೀತ ಸಾಹಿತಿ ಮೋಹನ್ ರಚಿಸಿರುವ ''ನೋ ಪ್ರಾಬ್ಲಂ....ನೋ ಪ್ರಾಬ್ಲಂ....'' ಹಾಡಿಗೆ ದನಿಯಾಗಿದ್ದಾರೆ ಧನುಷ್. ಅರ್ಜುನ್ ಜನ್ಯ ಹಾಕಿರುವ ಪೆಪ್ಪಿ ತಾಳಕ್ಕೆ, ಧನುಷ್ 'ಶೃತಿ' ಸರಿಯಾಗಿ ಸೇರಿರುವ ಕಾರಣ, ಹಾಡನ್ನ ಕೇಳಿದ ತಕ್ಷಣ ಎಂಥವರೂ ತಲೆದೂಗುವುದು ಗ್ಯಾರಂಟಿ.


ಈ ಬಗ್ಗೆ ಮಾತನಾಡಿರುವ ಶುಭ್ರಾ, "ಇದುವರೆಗಿನ ಶೂಟಿಂಗನ್ನು ಸಖತ್ ಎಂಜಾಯ್ ಮಾಡಿದ್ದೇನೆ. ಇದೇ ತಿಂಗಳಲ್ಲಿ ವೆನಿಸ್ ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು ನಾವೆಲ್ಲಾ ಹೊರಡಲು ಸಿದ್ಧವಾಗಿದ್ದೇವೆ" ಎಂದಿದ್ದಾರೆ. ತಾನು ಇದುವರೆಗೂ ನೋಡಿರುವ ತಾರೆಗಳ ಪೈಕಿ ಶುಭ್ರಾ ಅವರು ಬಹಳ ಗೌರವಾನ್ವಿತ ತಾರೆ ಎಂದು ಹರ್ಷ ಈಗಾಗಲೆ ಸರ್ಟಿಫಿಕೇಟ್ ನೀಡಿದ್ದಾರೆ.


ಭಜರಂಗಿ ಚಿತ್ರವನ್ನು ಬಹಳ ಪ್ರೀತಿಯಿಂದ ಮಾಡಿದ್ದೆ. ಜನರೂ ಕೂಡಾ ಅದಕ್ಕೆ ಉತ್ತಮ ಬೆಂಬಲ ನೀಡಿ, ಸ್ವೀಕರಿಸಿದರು. ಆದರೆ ಭಜರಂಗಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿತ್ತು ಎನ್ನುವ ನೋವು ನನ್ನನ್ನು ಕಾಡುತ್ತಿತ್ತು. ವಜ್ರಕಾಯ ಚಿತ್ರಕ್ಕೆ ಖಂಡಿತ ಯು ಸರ್ಟಿಫಿಕೇಟ್ ಸಿಗುವ ಭರವಸೆ ಇದೆ ಎನ್ನುತ್ತಾರೆ ಹರ್ಷಾ.


ಚಿತ್ರದ ಉಳಿದ ಪಾತ್ರವರ್ಗದಲ್ಲಿ ಸಾಧುಕೋಕಿಲಾ, ಚಿಕ್ಕಣ್ಣ, ಪ್ರತಾಪ್, ಜಯಸುಧಾ, ಅತುಲ್ ಕುಲಕರ್ಣಿ, ರವಿಕಾಳೆ ಮುಂತಾದವರಿದ್ದಾರೆ. ಚಿತ್ರಕ್ಕೆ ಸಂಗೀತ ಅರ್ಜುನ್ ಜನ್ಯಾ ಅವರದ್ದು, ಚಿತ್ರದ ನಿರ್ಮಾಪಕರು ಸಿ ಆರ್ ಮನೋಹರ್. (ಏಜೆನ್ಸೀಸ್)

English summary
Supermodel-turned-actress Shubra Aiyappa will be seen in a special role in Hat Trick Hero Shivrajkumar starrer 'Vajrakaaya'. The movie is being directed by choreographer-turned-director A Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada