»   » ಒಂಬತ್ತು ತಿಂಗಳ ಸಂಭ್ರಮದಲ್ಲಿ ಶ್ವೇತಾ ಶ್ರೀವಾತ್ಸವ್

ಒಂಬತ್ತು ತಿಂಗಳ ಸಂಭ್ರಮದಲ್ಲಿ ಶ್ವೇತಾ ಶ್ರೀವಾತ್ಸವ್

Posted By:
Subscribe to Filmibeat Kannada

ನಟಿ ಶ್ವೇತಾ ಶ್ರೀವಾತ್ಸವ್ ಮತ್ತೆ ಒಂಬತ್ತು ತಿಂಗಳ ಸಂಭ್ರಮದಲ್ಲಿದ್ದಾರೆ. ಹೌದು ಶ್ವೇತಾ ಅವರ ಪುಟ್ಟ ಕಂದಮ್ಮನಿಗೆ ಒಂಬತ್ತು ತಿಂಗಳು ತುಂಬಿಗೆ ಇದೇ ಸಂಭ್ರಮದಲ್ಲಿ ಇದೇ ಖುಷಿಯಲ್ಲಿ ಶ್ವೇತಾ ಶ್ರೀವಾತ್ಸವ್ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ತಾಯಂದಿರ ದಿನಾಚರಣೆಯ ಅಂಗವಾಗಿ ಶ್ವೇತಾ ಈ ಶೂಟ್ ಮಾಡಿಸಿದ್ದು ಮುದ್ದು ಮಗಳ ಜೊತೆಯಲ್ಲಿ ಮಾಡಿಸಿರೋ ಮೊದಲ ಫೋಟೋ ಶೂಟ್ ಇದಾಗಿದೆ. ಅಶ್ಮಿತಾಳಿಗೆ ಒಂಬತ್ತು ತಿಂಗಳು ತುಂಬಿರುವ ಖುಷಿ ಒಂದೆಡೆ ಆದರೆ ಮತ್ತೊಂದು ಕಡೆ ತಾಯಂದಿರ ದಿನವನ್ನು ಒಟ್ಟಿಗೆ ಆಚರಣೆ ಮಾಡುತ್ತಿದ್ದಾರೆ ಶ್ವೇತಾ ಮತ್ತು ಫ್ಯಾಮಿಲಿ.

Shweta Srivastav and daughter Asmita have shot for mothers day

ನಟಿ ಶ್ವೇತಾ ಶ್ರೀವಾತ್ಸವ್ ಬಾಳಲ್ಲಿ ಆಗಮಿಸಿದ 'ಅಶ್ಮಿತೆ'

ಫೇಸ್ ಬುಕ್ ನಲ್ಲಿ ಈ ಫೋಟೋಗಳನ್ನ ಶೇರ್ ಮಾಡಿರುವ ಶ್ವೇತಾ ತಾಯಿ ಆಗಿದ್ದು ಎಷ್ಟು ಖುಷಿ ಕೊಟ್ಟಿದೆ ಎನ್ನುವ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಕ್ಯಾಮೆರಾ ಮುಂದೆ ಅಮ್ಮ ಮಗಳು ರಾಜಕುಮಾರಿ ಹಾಗೂ ಯುವರಾಣಿಯಂತೆ ಪೋಸ್ ಕೊಟ್ಟಿರುವುದು ನೋಡುಗರನ್ನ ಆಕರ್ಷಿಸುತ್ತಿದೆ.

ಫೋಟೋ ಶೂಟ್ ಗಳಲ್ಲಿ ಶ್ವೇತಾ ಅವರನ್ನ ನೋಡಿದರೆ ಸಣ್ಣ ಬ್ರೇಕ್ ನ ನಂತರ ಚಿತ್ರರಂಗದಲ್ಲಿ ಮತ್ತೆ ತೊಡಗಿಸಿಕೊಳ್ಳಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ.

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ತಯಾರಾದ ಶ್ವೇತಾ ಶ್ರೀವಾತ್ಸವ್

English summary
Kannada actress Shweta Srivastav and daughter Asmita Srivastav have shot a new photo shoot for mother's day.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X