»   » ಸೆಕ್ಸ್ ವರ್ಕರ್ ಪಾತ್ರದಲ್ಲಿ 'ಫೇರ್ ಅಂಡ್ ಲವ್ಲಿ' ಶ್ವೇತಾ

ಸೆಕ್ಸ್ ವರ್ಕರ್ ಪಾತ್ರದಲ್ಲಿ 'ಫೇರ್ ಅಂಡ್ ಲವ್ಲಿ' ಶ್ವೇತಾ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಸಿಂಪಲ್ ಬೆಡಗಿ ಶ್ವೇತಾ ಶ್ರೀವಾತ್ಸವ್ ಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಜೊತೆಗಿನ ಅವರ 'ಫೇರ್ ಅಂಡ್ ಲವ್ಲಿ' ಚಿತ್ರ ಇದೇ ಅಕ್ಟೋಬರ್ 24ಕ್ಕೆ ರಾಜ್ಯದಾದ್ಯಂತ ತೆರೆಕಾಣುತ್ತಿದೆ.

ಈ ಚಿತ್ರದಲ್ಲಿ ಶ್ವೇತಾ ಅವರು ಕಮರ್ಷಿಯಲ್ ಲೈಂಗಿಕ ಕಾರ್ಯಕರ್ತೆಯ ಪಾತ್ರ. ಈ ರೀತಿಯ ಸವಾಲಿನ ಪಾತ್ರಕ್ಕಾಗಿ ಅವರು ಬಹಳ ಸಮಯ ಕಾದಿದ್ದರಂತೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಬಳಿಕ ಅದದೇ ರೀತಿಯ ಪಾತ್ರಗಳು ಹುಡುಕಿಕೊಂಡು ಬಂದರೂ ಶ್ವೇತಾ ಸಹಿ ಹಾಕಿರಲಿಲ್ಲ. [ಸೆನ್ಸಾರ್ ನಲ್ಲಿ ಪಾಸಾದ 'ಫೇರ್ ಅಂಡ್ ಲವ್ಲಿ']


ಕಡೆಗೆ ನಿರ್ದೇಶಕ ರಘುರಾಮ್ ಅವರು ಕಥೆ ಹೇಳಿದಾಗ ಬಹಳ ಇಂಪ್ರೆಸ್ ಆದರಂತೆ. ಈ ರೀತಿಯ ಪಾತ್ರ ಮಾಡುವುದು ಹೇಗೆ ಎಂಬ ಬಗ್ಗೆಯೂ ಅವರಿಗೆ ಸ್ವಲ್ಪ ಅಳುಕಿತ್ತಂತೆ. ಶಬಾನಾ ಅಜ್ಮಿ, ಟಬು, ರಾಣಿ ಮುಖರ್ಜಿ ಹಾಗೂ ಮಿನುಗು ತಾರೆ ಕಲ್ಪನಾ ಅವರ ಪಾತ್ರ ಪೋಷಣೆಯನ್ನು ನೆನಪಿಸಿಕೊಂಡು ಥ್ರಿಲ್ ಆದರಂತೆ.

ನೈಜ ಘಟನೆಗಳ ಆಧಾರದ ಮೇಲೆ ಯತಿರಾಜ್ ಅವರು 'ಫೇರ್ ಅಂಡ್ ಲವ್ಲಿ' ಚಿತ್ರದ ಕಥೆಯನ್ನು ಬರೆದಿದ್ದಾರೆ. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಗೆ ತರುವ ಪ್ರಯತ್ನವನ್ನು ರಘುರಾಮ್ ಮಾಡಿದ್ದಾರೆ. ಶ್ವೇತಾ ಶ್ರೀವಾತ್ಸವ್ ಅವರ ವೃತ್ತಿ ಬದುಕಿನಲ್ಲಿ ಈ ಪಾತ್ರ ಮಹತ್ತರ ತಿರುವು ನೀಡಲಿದೆ ಎಂದೇ ಭಾವಿಸಲಾಗಿದೆ.

ಇನ್ನು ಈ ಚಿತ್ರದ ನಿರ್ಮಿಪಕರು ಮಹಿಳೆ ಎಂಬುದು ವಿಶೇಷ. ಜೆಡ್ ಪ್ಲಾಂಟ್ ಅಡಿಯಲ್ಲಿ ಶಿಲ್ಪ ರಮೇಶ್ ರಮಣಿ ಈ ಫೇರ್ ಅಂಡ್ ಲವ್ಲಿ ನಿರ್ಮಾಪಕರು. ಇತ್ತಿಚೆಗೆ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Sandalwood actress Shwetha Srivatsav plays a commercial sex worker in Fair and Lovely. Raghuram directed movie all set to release on 24th October.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada