Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೊಡ್ಡ ವಿರಾಮದ ಬಳಿಕ 'ರಾಘವೇಂದ್ರ ಸ್ಟೋರ್ಸ್'ಗೆ ಬಂದ ಶ್ವೇತ ಶ್ರೀವಾತ್ಸವ್
ನಟನೆಯಿಂದ ದೂರ ಉಳಿದಿದ್ದ ನಟಿ ಶ್ವೇತ ಶ್ರೀವಾತ್ಸವ್ ಮತ್ತೆ ಮರಳಿದ್ದು, ಇದೀಗ 'ರಾಘವೇಂದ್ರ ಸ್ಟೋರ್ಸ್'ಗೆ ಎಂಟ್ರಿ ಕೊಟ್ಟಿದ್ದಾರೆ.
'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಟಿ ಶ್ವೇತ ಶ್ರೀವಾತ್ಸವ್ ಮಗುವಾದ ಬಳಿಕ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. 2016ರಲ್ಲಿ ಬಿಡುಗಡೆ ಆದ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ಶ್ವೇತ ನಟಿಸಿರಲಿಲ್ಲ.
ಇದೀಗ 'ಹೋಪ್' ಎಂಬ ಸಿನಿಮಾದಲ್ಲಿ ನಟಿಸಿರುವ ಶ್ವೇತ ಶ್ರೀವಾತ್ಸವ್, ಇದೀಗ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಶ್ವೇತ ಇದೇ ಮೊದಲ ಬಾರಿಗೆ ಜಗ್ಗೇಶ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ. 'ರಾಘವೇಂದ್ರ ಸ್ಟೋರ್ಸ್' ಸಿನಿಮಾವು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಶ್ವೇತ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು 'ಕೆಜಿಎಫ್' ಖ್ಯಾತಿಯ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ.
'ಯವರತ್ನ', ರಾಮಾಚಾರಿ' 'ರಾಜಕುಮಾರ' ಸಿನಿಮಾಗಳ ನಿರ್ದೇಶಕ ಸಂತೋಶ್ ಆನಂದ್ ರಾಮ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾದ ಬಗ್ಗೆ ಸ್ವತಃ ಜಗ್ಗೇಶ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿ ಹೋಟೆಲ್ ಮಾಲೀಕನ ಕಮ್ ಅಡುಗೆ ಭಟ್ಟನ ಪಾತ್ರದಲ್ಲಿ ಜಗ್ಗೇಶ್ ನಟಿಸಿದ್ದು, ಕೌಟುಂಬಿಕ ಮೌಲ್ಯಗಳನ್ನು ಸಿನಿಮಾ ಮೂಲಕ ಹೇಳಲಿದ್ದಾರೆ ನಿರ್ದೇಶಕ ಸಂತೋಶ್ ಆನಂದ್ ರಾಮ್.
ನಾಟಕಗಳಿಂದ ನಟನೆ ಆರಂಭಿಸಿದ ನಟಿ ಶ್ವೇತ ಶ್ರೀವಾತ್ಸವ್ ಬಳಿಕ ಟಿವಿ ಶೋಗಳ ನಿರೂಪಕಿ ಆದರು. 'ಸಿಲ್ಲಿ-ಲಲ್ಲಿ', 'ಮನ್ವಂತರ', 'ಮಳೆಬಿಲ್ಲು', 'ಲಕ್ಷ್ಮಿ ಕಟಾಕ್ಷ', ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು. ಬಳಿಕ 'ಮುಖಾ-ಮುಖಿ' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಬಳಿಕ 'ಆ ದಿನಗಳು' ಸಿನಿಮಾದಲ್ಲಿ ಕೊತ್ವಾಲ್ ರಾಮಚಂದ್ರನ ಮಡದಿಯ ಪಾತ್ರದಲ್ಲಿ ನಟಿಸಿದರು. ಬಳಿಕ 'ಸೈಬರ್ ಯುಗದೊಳ್ ನವಯುಗ ಪ್ರೇಮ ಕಾವ್ಯ' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಸಹ ಪಡೆದುಕೊಂಡರು. ಬಳಿಕ ನಟಿಸಿದ 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಸಿನಿಮಾ ಶ್ವೇತ ಶ್ರೀವಾತ್ಸವ್‌ಗೆ ದೊಡ್ಡ ಹೆಸರು ತಂದುಕೊಟ್ಟಿತು. ಬಳಿಕ ಪ್ರೇಮ್ ಎದುರಿಗೆ 'ಫೇರ್ ಆಂಡ್ ಲೌಲಿ' ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಶ್ವೇತ ನಟಿಸಿದರು. ಈ ಸಿನಿಮಾಕ್ಕೂ ಶ್ವೇತಾಗೆ ಫಿಲಂ ಫೇರ್ ಪ್ರಶಸ್ತಿ ಲಭಿಸಿತು. ಬಳಿಕ 2016 ರಲ್ಲಿ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ನಟಿಸಿದ ಶ್ವೇತ ಆ ಬಳಿಕ ಸತತ ಐದು ವರ್ಷ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. 2022ರಲ್ಲಿ 'ಹೋಪ್' ಸಿನಿಮಾ ಒಪ್ಪಿಕೊಂಡು ಚಿತ್ರೀಕರಣ ಮುಗಿಸಿದ್ದಾರೆ. ಇದೀಗ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.