For Quick Alerts
  ALLOW NOTIFICATIONS  
  For Daily Alerts

  'ಯಜಮಾನ' ನಿರ್ಮಾಪಕಿ ಜೊತೆ ಮತ್ತೊಂದು ಸಿನಿಮಾ ಮಾಡ್ತಾರೆ ದರ್ಶನ್

  |
  ಯಜಮಾನ' ನಿರ್ಮಾಪಕಿ ಜೊತೆ ಮತ್ತೊಂದು ಸಿನಿಮಾ ಮಾಡ್ತಾರೆ ದರ್ಶನ್ | FILMIBEAT KANNADA

  'ಯಜಮಾನ' ಸಿನಿಮಾ ಬಿಡುಗಡೆಗೆ ಇನ್ನು ಮೂರೇ ದಿನಗಳು ಬಾಕಿ ಇದೆ. ದರ್ಶನ್ ಜೊತೆಗೆ ಸಿನಿಮಾ ಮಾಡಬೇಕು ಎನ್ನುವ ನಿರ್ಮಾಪಕಿ ಶೈಲಜಾ ನಾಗ್ ಅವರ ಆಸೆ ಈಡೇರಿದೆ.

  'ಯಜಮಾನ' ಮಾತ್ರವಲ್ಲ ಈ ಚಿತ್ರದ ನಂತರ ನಿರ್ಮಾಪಕಿ ಶೈಲಜಾ ನಾಗ್, ದರ್ಶನ್ ಅವರ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ದರ್ಶನ್ ಗೆ ತಮ್ಮ ಮುಂದಿನ ಸಿನಿಮಾದ ಮುಂಗಡ ಹಣವನ್ನು ನೀಡಿದ್ದಾರಂತೆ.

  ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಅಪ ಪ್ರಚಾರ.! ಈ ಬಗ್ಗೆ ದಾಸನೇ ಕೊಟ್ರು ಪ್ರತ್ಯುತ್ತರ

  ಇತ್ತೀಚಿಗೆ 'ಯಜಮಾನ' ಸಿನಿಮಾದ ಸಂದರ್ಶನದಲ್ಲಿ ಮಾತನಾಡಿದ ದರ್ಶನ್ ಈ ವಿಷಯವನ್ನು ಹಂಚಿಕೊಂಡರು. ''ಯಜಮಾನ' ಸಿನಿಮಾ ಇಷ್ಟೊಂದು ಚೆನ್ನಾಗಿ ಬರಬೇಕು ಅಂದರೆ ಅದಕ್ಕೆ ಕಾರಣ ಶೈಲಜಾ ನಾಗ್ ಹಾಗೂ ಹರಿಕೃಷ್ಣ. ಶೈಲಜಾ ನಾಗ್ ನಾನು ಈವರೆಗೆ ಕೆಲಸ ಮಾಡಿದ ಬೆಸ್ಟ್ ನಿರ್ಮಾಪಕರಲ್ಲಿ ಒಬ್ಬರು'' ಎಂದರು.

  ಅಂದಹಾಗೆ, ಶೈಲಜಾ ನಾಗ್ ಹಾಗೂ ದರ್ಶನ್ ಮತ್ತೆ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಆ ಸಿನಿಮಾದ ನಿರ್ದೇಶಕರು ಯಾರು ಎನ್ನುವುದು ಸದ್ಯಕ್ಕೆ ನಿರ್ಧಾರವಾಗಿಲ್ಲ.

  ಇನ್ನು ದರ್ಶನ್ ಕ್ರೇಜ್ ನೋಡಿ ಶೈಲಜಾ ನಾಗ್ ಕೂಡ ಅಚ್ಚರಿ ಪಟ್ಟಿದ್ದರು. ಸಿನಿಮಾದ ಹಾಡುಗಳು, ಟ್ರೇಲರ್ ಗಳು ಸೂಪರ್ ಹಿಟ್ ಆಗಿದ್ದು, ಸಿನಿಮಾ ಕೂಡ ಯಶಸ್ಸು ಕಾಣುತ್ತದೆ ಎನ್ನುವ ಉತ್ಸಾಹದಲ್ಲಿ ಇಡೀ ತಂಡ ಇದೆ.

  English summary
  'Yajamana' producer Shylaja Nag will be producing another movie to Challenging Star Darshan. She allready gave advance amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X