twitter
    For Quick Alerts
    ALLOW NOTIFICATIONS  
    For Daily Alerts

    ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು?

    |

    ಸದ್ಯ ನಮ್ಮ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ನಡೆಯುತ್ತಿದೆ. ಸೈಮಾ ದಶಕ ಪೂರೈಸಿರುವುದು ವಿಶೇಷವಾಗಿದ್ದು, ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣ ಈ ಬಾರಿಯ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

    ಈ ಕಾರ್ಯಕ್ರಮದ ಮೊದಲ ದಿನ ( ಸೆಪ್ಟೆಂಬರ್ 10 )ಕನ್ನಡ ಮತ್ತು ತೆಲುಗು ಚಿತ್ರರಂಗಗಳ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿಗೆ ಭಾಜನರಾದರೆ, ಗರುಡಗಮನ ವೃಷಭವಾಹನ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು, ರಾಬರ್ಟ್ ಚಿತ್ರದ ನಿರ್ದೇಶನಕ್ಕೆ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು ಹಾಗೂ ಆಶಿಕಾ ರಂಗನಾಥ್ ಮತ್ತು ಅಮೃತಾ ಅಯ್ಯಂಗಾರ್ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಗೆದ್ದರು.

    ಕೊರೊನಾ ವೈರಸ್ ಭೀತಿ: ಐಫಾ ಅವಾರ್ಡ್ಸ್ ಮುಂದಕ್ಕೆಕೊರೊನಾ ವೈರಸ್ ಭೀತಿ: ಐಫಾ ಅವಾರ್ಡ್ಸ್ ಮುಂದಕ್ಕೆ

    ಕಳೆದ ವರ್ಷ ಬಿಡುಗಡೆಯಾಗಿ ಸಿನಿಪ್ರೇಕ್ಷಕರಿಂದ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಯುವರತ್ನ ಚಿತ್ರದಲ್ಲಿನ ಪುನೀತ್ ರಾಜ್ ಕುಮಾರ್ ಅವರ ಉತ್ತಮ ಅಭಿನಯಕ್ಕೆ ಈ ಬಾರಿಯ ಸೈಮಾ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಾಯಕನಟ ಪ್ರಶಸ್ತಿ ಲಭಿಸಿದೆ.

     ಅಪ್ಪು ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಧನಂಜಯ್

    ಅಪ್ಪು ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಧನಂಜಯ್

    ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅತ್ಯುತ್ತಮ ನಾಯಕನಟ ಪ್ರಶಸ್ತಿ ಘೋಷಣೆಯಾದಾಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾಲಿ ಧನಂಜಯ್ ಪುನೀತ್ ಅವರ ಬದಲಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಹಾಗೂ ಇದೇ ವೇಳೆ ಹಾಜರಿದ್ದ ಕನ್ನಡದ ಕೆಲ ಕಲಾವಿದರು ಧನಂಜಯ್ ಅವರ ಒಟ್ಟಿಗೆ ಸೇರಿ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ.

     ಪೋಸ್ಟ್ ಹಂಚಿಕೊಂಡ ನಿರ್ದೇಶಕ ಸಂತೋಷ್

    ಪೋಸ್ಟ್ ಹಂಚಿಕೊಂಡ ನಿರ್ದೇಶಕ ಸಂತೋಷ್

    ಇನ್ನು ತಾವು ನಿರ್ದೇಶಿಸಿದ್ದ ಯುವರತ್ನ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಬಂದಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ 'ನನ್ನ ಅಣ್ಣನಿಗೆ ಅತ್ಯುತ್ತಮ ನಾಯಕನಟ ಪ್ರಶಸ್ತಿ ದೊರೆತಿದೆ, ಲವ್ ಯು ಅಪ್ಪು ಅಣ್ಣಾ. ನಮ್ಮ ತಂಡದ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಧನಂಜಯ್ ಅವರಿಗೆ ಧನ್ಯವಾದಗಳು' ಎಂದು ಬರೆದಿದ್ದಾರೆ.

     ಅಪ್ಪುಗೆ ಇದು ಐದನೇ ಸೈಮಾ

    ಅಪ್ಪುಗೆ ಇದು ಐದನೇ ಸೈಮಾ

    ಪುನೀತ್ ರಾಜ್ ಕುಮಾರ್ ಗೆದ್ದ ಐದನೇ ಸೈಮಾ ಪ್ರಶಸ್ತಿ ಇದಾಗಿದ್ದು, ಇದು ಕನ್ನಡ ಕಲಾವಿದರೋರ್ವರು ಸೈಮಾ ಅವಾರ್ಡ್ಸ್ ಇತಿಹಾಸದಲ್ಲಿಯೇ ಗೆದ್ದಿರುವ ಅತಿಹೆಚ್ಚು ಪ್ರಶಸ್ತಿ ಎಂಬ ದಾಖಲೆಯೂ ಆಗಿದೆ. ಮೊದಲಿಗೆ ಹುಡುಗರು ಚಿತ್ರಕ್ಕೆ ಅತ್ಯುತ್ತಮ ನಾಯಕನಟ ಪ್ರಶಸ್ತಿ ಪಡೆದಿದ್ದ ಪುನೀತ್ ಸೈಮಾ ಯೂತ್ ಐಕಾನ್ ಪಡೆದರು, ರಣವಿಕ್ರಮ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ರಾಜಕುಮಾರ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್ ಪಡೆದಿದ್ದರು. ಇದೀಗ ಯುವರತ್ನ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುವ ಮೂಲಕ ಐದನೇ ಬಾರಿಗೆ ಸೈಮಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

     ಸೈಮಾ ಗೆದ್ದ ಕನ್ನಡದ ಎಲ್ಲಾ ಕಲಾವಿದರ ಪಟ್ಟಿ

    ಸೈಮಾ ಗೆದ್ದ ಕನ್ನಡದ ಎಲ್ಲಾ ಕಲಾವಿದರ ಪಟ್ಟಿ

    ಈ ಬಾರಿಯ ಸೈಮಾ ಅವಾರ್ಡ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಕಲಾವಿದರ ಸಂಪೂರ್ಣ ಪಟ್ಟಿ ಇಲ್ಲಿದೆ.

    ಅತ್ಯುತ್ತಮ ಚಿತ್ರ - ಗರುಡ ಗಮನ ವೃಷಭ ವಾಹನ

    ಅತ್ಯುತ್ತಮ ನಿರ್ದೇಶಕ - ತರುಣ್ ಸುಧೀರ್ (ರಾಬರ್ಟ್)

    ಅತ್ಯುತ್ತಮ ಛಾಯಾಗ್ರಾಹಕ - ಸುಧಾಕರ್ ರಾಜ್ (ರಾಬರ್ಟ್)

    ಅತ್ಯುತ್ತಮ ನಟ - ಪುನೀತ್ ರಾಜ್‌ಕುಮಾರ್ (ಯುವರತ್ನ)

    ಅತ್ಯುತ್ತಮ ನಟಿ - ಅಮೃತ ಅಯ್ಯಂಗಾರ್ - ( ಬಡವ ರಾಸ್ಕಲ್ )

    ಅತ್ಯುತ್ತಮ ಪೋಷಕ ನಟ - ಪ್ರಮೋದ್ (ರತ್ನನ್ ಪ್ರಪಂಚ)

    ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಆರೋಹಿ ನಾರಾಯಣ (ದೃಶ್ಯ 2)

    ಅತ್ಯುತ್ತಮ ಖಳನಟ - ಪ್ರಮೋದ್ ಶೆಟ್ಟಿ (ಹೀರೊ)

    ಅತ್ಯುತ್ತಮ ಹಾಸ್ಯನಟ - ಚಿಕ್ಕಣ್ಣ (ಪೊಗರು)

    ಅತ್ಯುತ್ತಮ ಉದಯೋನ್ಮುಖ ನಟ - ನಾಗಭೂಷಣ ಎನ್ ಎಸ್ (ಇಕ್ಕಟ್)

    ಅತ್ಯುತ್ತಮ ಉದಯೋನ್ಮುಖ ನಟಿ - ಶರಣ್ಯ ಶೆಟ್ಟಿ (1980)

    ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಗುರು ಶಂಕರ್ (ಬಡವ ರಾಸ್ಕಲ್)

    ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಕೆಆರ್‌ಜಿ ಸ್ಟುಡಿಯೋಸ್ (ರತ್ನನ್ ಪ್ರಪಂಚ)

    ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯ (ರಾಬರ್ಟ್)

    ಅತ್ಯುತ್ತಮ ಗೀತರಚನೆಕಾರ - ವಾಸುಕಿ ವೈಭವ್ - ನಿನ್ನ ಸನಿಹಕೆಯಿಂದ "ನಿನ್ನ ಸನಿಹಕೆ"

    ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲಿಕ್, ಥಮನ್ ಎಸ್ - ಯುವರತ್ನದಿಂದ "ನೀನಾದೆ ನಾ"

    ಅತ್ಯುತ್ತಮ ಹಿನ್ನೆಲೆ ಗಾಯಕಿ - ಚೈತ್ರ ಜೆ ಆಚಾರ್ - "ಸೂಜುಗದ ಸೂಜುಮಲ್ಲಿಗೆ" ಫ್ರಮ್ ಗರುಡ ಗಮನ ವೃಷಭ ವಾಹನ

    English summary
    SIIMA 2022: Dhananjaya received the Best Actor Award on behalf of Puneeth Rajkumar. Read on
    Sunday, September 11, 2022, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X