For Quick Alerts
  ALLOW NOTIFICATIONS  
  For Daily Alerts

  'ಸೈಮಾ' ಪ್ರಶಸ್ತಿಗೆ ತೆರೆ: ಪುನೀತ್ ಬೆಸ್ಟ್ ನಟ, ಉಪ್ಪಿ ಬೆಸ್ಟ್ ನಿರ್ದೇಶಕ

  By Suneetha
  |

  6ನೇ (SIMA) ಸೈಮಾ: ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಆವಾರ್ಡ್ 2016ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.

  ಜೂನ್ 30 ಮತ್ತು ಜುಲೈ 1 ರಂದು ಈ ಅದ್ಧೂರಿ ಸಮಾರಂಭ ಸಿಂಗಾಪೂರ್ ನ ಸನ್ ಟೆಕ್ ಕನ್ವೆನ್ ಷನ್ ಮತ್ತು ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆದಿದ್ದು, ಕನ್ನಡ ಚಿತ್ರರಂಗದ ಸ್ಟಾರ್ ನಟರು ಭಾಗವಹಿಸಿ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ 'ರಣವಿಕ್ರಮ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತರೆ, ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ 'ಉಪ್ಪಿ 2' ಚಿತ್ರದ ನಿರ್ದೇಶನಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.[ಸೈಮಾ ಪ್ರಶಸ್ತಿ ರೇಸ್: ಕೆಂಡಸಂಪಿಗೆ, ರಂಗಿತರಂಗ ಚಿತ್ರದ್ದೇ ಹವಾ!]

  ಸ್ಯಾಂಡಲ್ ವುಡ್ ವಿಭಾಗದ ಸಂಭ್ರಮದ ಪ್ರಶಸ್ತಿ ಸಮಾರಂಭವನ್ನು ನಮ್ಮ ಕನ್ನಡದ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರು ನಡೆಸಿಕೊಟ್ಟರು. 6ನೇ 'ಸೈಮಾ' ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳು, ನಟ-ನಟಿಯರ ಸಂಪೂರ್ಣ ಲಿಸ್ಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಅತ್ಯುತ್ತಮ ನಟ ಪ್ರಶಸ್ತಿ

  ಅತ್ಯುತ್ತಮ ನಟ ಪ್ರಶಸ್ತಿ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (ಚಿತ್ರ: ರಣವಿಕ್ರಮ) ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡಿದ್ದಾರೆ.
  ಪ್ರಶಸ್ತಿಗೆ ನಾಮಿನೇಟ್ ಆಗಿದ್ದವರು:
  ಯಶ್ (ಮಾಸ್ಟರ್ ಪೀಸ್)
  ಅಜಯ್ ರಾವ್ (ಕೃಷ್ಣಲೀಲಾ)
  ನೀನಾಸಂ ಸತೀಶ್ (ರಾಕೆಟ್)
  ಉಪೇಂದ್ರ (ಉಪ್ಪಿ 2)

  ಅತ್ಯುತ್ತಮ ನಟಿ

  ಅತ್ಯುತ್ತಮ ನಟಿ

  ರಚಿತಾ ರಾಮ್ (ಚಿತ್ರ:ರನ್ನ) ಅವರು ಈ ಬಾರಿಯ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
  ಪ್ರಶಸ್ತಿಗೆ ನಾಮಿನೇಟ್ ಆಗಿದ್ದವರು:
  * ರಾಧಿಕಾ ಪಂಡಿತ್ (ಎಂದೆಂದಿಗೂ)
  * ಮಯೂರಿ ಕ್ಯಾತರಿ (ಕೃಷ್ಣ ಲೀಲಾ)
  * ಪರೂಲ್ ಯಾದವ್ (ವಾಸ್ತುಪ್ರಕಾರ)
  * ಶಾನ್ವಿ ಶ್ರೀವಾಸ್ತವ್ (ಮಾಸ್ಟರ್ ಪೀಸ್)

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಿರ್ದೇಶಕ

  ರಿಯಲ್ ಸ್ಟಾರ್ ಉಪೇಂದ್ರ (ಚಿತ್ರ : 'ಉಪ್ಪಿ 2') ಅವರು ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ಶಶಾಂಕ್ (ಕೃಷ್ಣಲೀಲಾ)
  * ಪವನ್ ಒಡೆಯರ್ (ರಣ ವಿಕ್ರಮ)
  * ದುನಿಯಾ ಸೂರಿ (ಕೆಂಡಸಂಪಿಗೆ)
  * ಚಂದ್ರಶೇಖರ್ ಬಂಡಿಯಪ್ಪ (ರಥಾವರ)

  ಅತ್ಯುತ್ತಮ ಪೋಷಕ ನಟ

  ಅತ್ಯುತ್ತಮ ಪೋಷಕ ನಟ

  ಪನ್ನಗ ಭರಣ (ಚಿತ್ರ:ಮೃಗಶೀರ) ಅವರು ಅತ್ಯುತ್ತಮ ಪೋಷಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ರಾಜೇಶ್ ನಟರಂಗ (ಕೆಂಡಸಂಪಿಗೆ)
  * ಪಿ ರವಿಶಂಕರ್ (ಆಟಗಾರ)
  * ಚೇತನ್ ಚಂದ್ರ(ಪ್ಲಸ್)
  * ಅರವಿಂದ್ ರಾವ್ (ರಂಗಿತರಂಗ)

  ಅತ್ಯುತ್ತಮ ಪೋಷಕ ನಟಿ

  ಅತ್ಯುತ್ತಮ ಪೋಷಕ ನಟಿ

  ನಟಿ ತೇಜಸ್ವಿನಿ ಪ್ರಕಾಶ್ (ಚಿತ್ರ:ಗೂಳಿಹಟ್ಟಿ) ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ಶೀತಲ್ ಶೆಟ್ಟಿ (ಕೆಂಡಸಂಪಿಗೆ)
  * ದೀಪಿಕಾ ಕಾಮಯ್ಯ (ನೀನೆ ಬರಿ ನೀನೆ)
  * ಕರುಣ್ಯಾ ರಾಮ್ (ವಜ್ರಕಾಯ)
  * ಐಶ್ವರ್ಯಾ ನಾಗ್ (ಮುದ್ದು ಮನಸೇ)

  ಅತ್ಯುತ್ತಮ ವಿಲನ್

  ಅತ್ಯುತ್ತಮ ವಿಲನ್

  ಡೈಲಾಗ್ ಕಿಂಗ್ ಸಾಯಿಕುಮಾರ್ (ಚಿತ್ರ: ರಂಗಿತರಂಗ) ಅತ್ಯುತ್ತಮ ವಿಲನ್ ಆಗಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ಪಿ ರವಿಶಂಕರ್ (ಮಾಸ್ಟರ್ ಪೀಸ್)
  * ವಿಕ್ರಮ್ ಸಿಂಗ್ (ರಣವಿಕ್ರಮ)
  * ಪ್ರಕಾಶ್ ಬೆಳವಾಡಿ (ಕೆಂಡಸಂಪಿಗೆ)
  * ಪ್ರಕಾಶ್ ರೈ (ಮಿ. ಐರಾವತ)

  ಅತ್ಯುತ್ತಮ ಸಾಹಿತ್ಯ

  ಅತ್ಯುತ್ತಮ ಸಾಹಿತ್ಯ

  ಅನುಪ್ ಭಂಡಾರಿ (ಹಾಡು: 'ಈ ಸಂಜೆ', ಚಿತ್ರ: ರಂಗಿತರಂಗ') ಅವರು ಚೊಚ್ಚಲ ಚಿತ್ರದ ಹಾಡಿಗೆ ಸೈಮಾ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  ಮಂಜು ಮಾಂಡವ್ಯ (Annange Love / Masterpiece)
  ಜಯಂತ್ ಕಾಯ್ಕಿಣಿ (Kanasali Nadesu / Kendasampige)
  ಕೆ ಕಲ್ಯಾಣ್ (Ninnalle / Endendigu)
  ಎಪಿ ಅರ್ಜುನ್ (Raja Rani / Rhaatee)

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅರ್ಜುನ್ ಜನ್ಯ (ಚಿತ್ರ: ವಜ್ರಕಾಯ) ಅವರು ಈ ಬಾರಿಯ ಸೈಮಾದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
  ನಾಮಿನೇಟ್ ಆಗಿದ್ದವರು,
  ವಿ ಹರಿಕೃಷ್ಣ (ಮಾಸ್ಟರ್ ಪೀಸ್)
  ಶ್ರೀಧರ್ ವಿ ಸಂಭ್ರಮ್ (ಕೃಷ್ಣಲೀಲ)
  ಗುರುಕಿರಣ್ (ಉಪ್ಪಿ 2)
  ಅರ್ಜುನ್ ಜನ್ಯ (ವಜ್ರಕಾಯ)
  ಅನೂಪ್ ಭಂಡಾರಿ (ರಂಗಿತರಂಗ)

  ಅತ್ಯುತ್ತಮ ಹಿನ್ನಲೆ ಗಾಯಕಿ

  ಅತ್ಯುತ್ತಮ ಹಿನ್ನಲೆ ಗಾಯಕಿ

  ಇಂಚರಾ ರಾವ್ (ಕರೆಯೋಲೆ ಹಾಡು; ಚಿತ್ರ: 'ರಂಗಿತರಂಗ') ಅವರು ಅತ್ಯುತ್ತಮ ಹಾಡುಗಾರ್ತಿಯಾಗಿ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  ಅನುರಾಧಾ ಭಟ್ (Mareyada Pustaka / Rathaavara)
  ಇಂಚರಾ ರಾವ್ (Kareyole / RangiTaranga)
  ಇಂದು ನಾಗರಾಜ್ (Ka Thalakatu / Mr. Airavata)
  ಶ್ವೇತಾ ಮೋಹನ್ (Kanasali Nadesu / Kendasampige)
  ಅಪೂರ್ವ ಶ್ರೀಧರ್ (Krishna Calling / Krishna Leela)

  ಅತ್ಯುತ್ತಮ ಹಿನ್ನಲೆ ಗಾಯಕ

  ಅತ್ಯುತ್ತಮ ಹಿನ್ನಲೆ ಗಾಯಕ

  ಸಂತೋಷ್ ವೆಂಕಿ (ರಾಜ ರಾಣಿ ಹಾಡು; ಚಿತ್ರ: ರಾಟೆ) ಅವರು ಈ ಬಾರಿ ಸೈಮಾ ಅತ್ಯುತ್ತಮ ಹಿನ್ನಲೆ ಗಾಯಕರಾಗಿ ಹೊರಹೊಮ್ಮಿದ್ದಾರೆ.
  ನಾಮಿನೇಟ್ ಆಗಿದ್ದವರು,
  ಗುರುಕಿರಣ್ (Baekoo Baekoo / Uppi 2)
  ವಿಜಯ್ ಪ್ರಕಾಶ್ (Airdelu Airchilu / Rana Vikrama)
  ಅರ್ಮಾನ್ ಮಲೀಕ್ (Free Ide / Siddhartha)
  ಸಂತೋಶ್ ವೆಂಕಿ (Raja Rani / Rhaatee)
  ಕಾರ್ತಿಕ್ (Nenape Nithya Mallige / Kendasampige)

  ಅತ್ಯುತ್ತಮ ಕಾಮಿಡಿಯನ್

  ಅತ್ಯುತ್ತಮ ಕಾಮಿಡಿಯನ್

  ಕಾಮಿಡಿ ನಟ ಚಿಕ್ಕಣ್ಣ (ಚಿತ್ರ: ಮಾಸ್ಟರ್ ಪೀಸ್) ಅವರು ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ಕಾಮಿಡಿ ನಟ ಪ್ರಶಸ್ತಿ ಪಡೆದಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ಸಾಧು ಕೋಕಿಲ (ರಾಮ್ ಲೀಲಾ)
  * ಚಿಕ್ಕಣ್ಣ (ಮಾಸ್ಟರ್ ಪೀಸ್)
  * ರಂಗಾಯಣ ರಘು (ರಣ ವಿಕ್ರಮ)
  * ಅಚ್ಯುತ್ ಕುಮಾರ್ (ಕೃಷ್ಣಲೀಲಾ)
  * ತಬ್ಲಾ ಲೀಲಾ (ಎಂದೆಂದಿಗೂ)

  ಅತ್ಯುತ್ತಮ ಉದಯೋನ್ಮುಖ ನಟ

  ಅತ್ಯುತ್ತಮ ಉದಯೋನ್ಮುಖ ನಟ

  ನಟ ವಿನಯ್ ರಾಜ್ ಕುಮಾರ್ (ಚಿತ್ರ: ಸಿದ್ದಾರ್ಥ್) ಅವರು ಅತ್ಯುತ್ತಮ ಉದಯೋನ್ಮುಖ ನಟನಾಗಿ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ನಿರೂಪ್ ಭಂಡಾರಿ (ರಂಗಿತರಂಗ)
  * ವಿನಯ್ ರಾಜ್ ಕುಮಾರ್ (ಸಿದ್ದಾರ್ಥ)
  * ಸಂತೋಶ್ ರೇವಾ (ಕೆಂಡಸಂಪಿಗೆ)
  * ಮಹೇಶ್ (ನಮಕ್ ಹರಾಮ್)
  * ಪ್ರತಾಪ್ ನಾರಾಯಣ್ (ಬೆಂಕಿಪಟ್ಣ)

  ಅತ್ಯುತ್ತಮ ಉದಯೋನ್ಮುಖ ನಟಿ

  ಅತ್ಯುತ್ತಮ ಉದಯೋನ್ಮುಖ ನಟಿ

  ನಟಿ ಮಾನ್ವಿತ ಹರೀಶ್ (ಚಿತ್ರ:ಕೆಂಡಸಂಪಿಗೆ) ಅವರು ಚೊಚ್ಚಲ ಚಿತ್ರದ ನಟನೆಗೆ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ನಭಾ ನಟೇಶ್ (ವಜ್ರಕಾಯ)
  * ಮಾನ್ವಿತಾ ಹರೀಶ್ (ಕೆಂಡಸಂಪಿಗೆ)
  * ಊರ್ವಶಿ ರೌಟೆಲಾ (ಮಿ. ಐರಾವತ)
  * ರಾಧಿಕಾ ಚೇತನ್ (ರಂಗಿತರಂಗ)
  * ಅಪೂರ್ವ ಗೌಡ (ಫಸ್ಟ್ Rank ರಾಜು)

  ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ

  ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ

  ಅನುಪ್ ಭಂಡಾರಿ (ಚಿತ್ರ: ರಂಗಿತರಂಗ) ಅವರು ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
  ನಾಮಿನೇಟ್ ಆಗಿದ್ದವರು,
  * ರಾಜ್ ಕುಮಾರ್ ರೆಡ್ಡಿ (ಊಜಾ)
  * ಮಂಜು ಮಾಂಡವ್ಯ (ಮಾಸ್ಟರ್ ಪೀಸ್)
  * ಅನೂಪ್ ಭಂಡಾರಿ (ರಂಗಿತರಂಗ)
  * ಇಮ್ರಾನ್ ಸರ್ದಾರಿಯಾ (ಎಂದೆಂದಿಗೂ)
  * ಪ್ರಿಯಾ ಬೆಳ್ಳಿಯಪ್ಪ (ರಿಂಗ್ ರೋಡ್ ಸುಮ)

  ಅತ್ಯುತ್ತಮ ನಟಿ, ಕ್ರಿಟಿಕ್ಸ್ ಚಾಯ್ಸ್

  ಅತ್ಯುತ್ತಮ ನಟಿ, ಕ್ರಿಟಿಕ್ಸ್ ಚಾಯ್ಸ್

  ನಟಿ ಶಾನ್ವಿ ಶ್ರೀವಾತ್ಸವ (ಚಿತ್ರ: ಮಾಸ್ಟರ್ ಪೀಸ್) ಅವರು ಕ್ರಿಟಿಕ್ಸ್ ಪರವಾಗಿ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.

  ಅತ್ಯುತ್ತಮ ನಟ, ಕ್ರಿಟಿಕ್ಸ್ ಚಾಯ್ಸ್

  ಅತ್ಯುತ್ತಮ ನಟ, ಕ್ರಿಟಿಕ್ಸ್ ಚಾಯ್ಸ್

  ನಟ ಸತೀಶ್ ನಿನಾಸಂ (ಚಿತ್ರ:ರಾಕೆಟ್) ಅವರು ಕ್ರಿಟಿಕ್ಸ್ ಪರವಾಗಿ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಚಿತ್ರ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಮೈತ್ರಿ' ಸಿನಿಮಾ 6ನೇ ಸೈಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ.
  ನಾಮಿನೇಟ್ ಆಗಿದ್ದ ಚಿತ್ರ,
  * ಕೆಂಡಸಂಪಿಗೆ (ಪರಿಮಳ ಫಿಲಂ ಫ್ಯಾಕ್ಟರಿ)
  * ರಂಗಿತರಂಗ (ಶ್ರೀ ದೇವಿ ಎಂಟರ್ಟೈನರ್ಸ್)
  * ಮೈತ್ರಿ (ಓಂಕಾರ್ ಮೂವೀಸ್)
  * ಉಪ್ಪಿ 2 (ಉಪೇಂದ್ರ ಪ್ರೊಡಕ್ಷನ್ಸ್)
  * ಕೃಷ್ಣ ಲೀಲಾ (ಶ್ರೀ ಕೃಷ್ಣಾ ಆರ್ಟ್ ಕ್ರಿಯೇಷನ್ಸ್)

  English summary
  The two-day sixth South Indian International Movie Awards (2016) came to an end at Suntec Convention and Exhibition Centre in Singapore on Friday, July 1. The awards for Telugu and Kannada films were presented on the first day. The event united all four Southern film industries. Who's who of Tamil, Telugu, Malayalam and Kannada industries will attend the awards ceremony. Here is the Complete Winners list.
  Saturday, July 2, 2016, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X