For Quick Alerts
  ALLOW NOTIFICATIONS  
  For Daily Alerts

  ಸೈಮಾ 2022: ನಾಮಿನೇಟ್ ಆದ ಕನ್ನಡದ ಟಾಪ್ ನಟರ ಪಟ್ಟಿ ಇಲ್ಲಿದೆ!

  |

  ಸಿನಿಮಾಗಳಿಗೆ, ಸಿನಿಮಾ ಕಲಾವಿದರಿಗೆ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರಲ್ಲಿ ಕೆಲವು ಪ್ರಶಸ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯ ಇದೆ. ಅಂತಹ ಪ್ರಮುಖ ಪ್ರಶಸ್ತಿಗಳಲ್ಲಿ ಸೈಮಾ ಪ್ರಶಸ್ತಿ ಕೂಡ ಒಂದು. ಸಿನಿಮಾಗಳಿಗೆ, ಕಲಾವಿದರಿಗೆ ಕೊಡುವ ಹೆಸರಾಂತ ಪ್ರಶಸ್ತಿಗಳಲ್ಲಿ ಸೈಮಾ ಪ್ರಶಸ್ತಿ ಕೂಡ ಒಂದು.

  ಸೈಮಾ ಅವಾರ್ಡ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. 'ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್' ಅನ್ನೇ ಚಿಕ್ಕದಾಗಿ ಸೈಮಾ ಎನ್ನಲಾಗುತ್ತೆ. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಸಿನಿಮಾಗಳಿಗೆ ನೀಡಲಾಗುತ್ತೆ.

  ಸೈಮಾ 2022 ನಾಮಿನೇಷನ್: ರಾಬರ್ಟ್, ಯುವರತ್ನ, ಗರುಡ ಗಮನ ವೃಷಭ ವಾಹನ!ಸೈಮಾ 2022 ನಾಮಿನೇಷನ್: ರಾಬರ್ಟ್, ಯುವರತ್ನ, ಗರುಡ ಗಮನ ವೃಷಭ ವಾಹನ!

  ಹಾಗಾಗಿ ಪ್ರತೀ ಬಾರಿ ಈ ಪ್ರಶಸ್ತಿ ಪಡದುಕೊಳ್ಳುವ ಸಿನಿಮಾ ಯಾವುವು? ಕಲಾವಿದರು ಯಾರು? ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಕನ್ನಡಿಗರಿಗೆ ಕನ್ನಡದ ಯಾವ ಸಿನಿಮಾ ಈ ಅವಾರ್ಡ್ ಪಡೆಯುತ್ತೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಈ ಬಾರಿ ಕನ್ನಡದ ಯಾವ ನಟರು ಈ ಪ್ರಶಸ್ತಿಗೆ ನಾಮನಿರ್ದೇಶನ ಆಗಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ...

  'ಸೈಮಾ'ಗೆ ದರ್ಶನ್ ನಾಮಿನೇಟ್!

  'ಸೈಮಾ'ಗೆ ದರ್ಶನ್ ನಾಮಿನೇಟ್!

  ಸೈಮಾ ಪ್ರಶಸ್ತಿಗೆ ಕನ್ನಡದ ಹೆಸರಾಂತ ನಟರು ನಾಮಿನೇಟ್ ಆಗಿದ್ದಾರೆ. ನಟ ದರ್ಶನ್ ಕೂಡ ಈ ಸಾಲಿನಲ್ಲಿ ಇದ್ದಾರೆ. 'ರಾಬರ್ಟ್' ಸಿನಿಮಾದ ನಟನೆಗಾಗಿ ದರ್ಶನ್ ಹೆಸರು ನಾಮಿನೇಟ್ ಆಗಿದೆ. ನಟ ಚಾಲೆಂಜಿಂಜ್ ಸ್ಟಾರ್ ದರ್ಶನ್ 2022ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಈ ಸಿನಿಮಾ 2021ರ ಮಾರ್ಚ್‌ನಲ್ಲಿ ರಿಲೀಸ್ ಆಯ್ತು. ಕೊರೊನಾ ಹಾವಳಿ ನಡುವೆಯೂ 'ರಾಬರ್ಟ್' ಸಿನಿಮಾ ಗೆದ್ದು ಬೀಗಿತು. ನಟ ದರ್ಶನ್ ಚಿತ್ರದಲ್ಲಿ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು.

  'ಯುವರತ್ನ'ಗಾಗಿ ಪುನೀತ್ ರಾಜ್‌ಕುಮರ್!

  'ಯುವರತ್ನ'ಗಾಗಿ ಪುನೀತ್ ರಾಜ್‌ಕುಮರ್!

  ನಟ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಹೆಸರು 2022ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದೆ. 'ಯುವರತ್ನ' ಸಿನಿಮಾಗಾಗಿ ಪುನೀತ್ ರಾಜ್‌ಕುಮಾರ್ ಹೆಸರು ನಾಮಿನೇಟ್ ಆಗಿದೆ. 'ಯುವರತ್ನ' ನಟ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಬಂದು ಹಿಟ್ ಲಿಸ್ಟ್ ಸೇರಿದ ಸಿನಿಮಾ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಯುವರತ್ನ' 2021 ಏಪ್ರಿಲ್‌ನಲ್ಲಿ ರಿಲೀಸ್ ಆಗಿತ್ತು.

  ಸೈಮಾ ರೇಸ್‌ನಲ್ಲಿ, ಗಣೇಶ್, ಧನಂಜಯ್!

  ಸೈಮಾ ರೇಸ್‌ನಲ್ಲಿ, ಗಣೇಶ್, ಧನಂಜಯ್!

  2022ರ ಸೈಮಾ ಪ್ರಶಸ್ತಿಗೆ ಕನ್ನಡದ ಹೆಸರಾಂತ ನಟರು ನಾಮಿನೇಟ್ ಆಗಿದ್ದಾರೆ. ಈ ರೇಸ್‌ನಲ್ಲಿ ನಟ ಗಣೇಶ್ ಮತ್ತು ಧನಂಜಯ್ ಕೂಡ ಇದ್ದಾರೆ. ನಟ ಧನಂಜಯ್ 'ಬಡವ ರಾಸ್ಕಲ್' ಚಿತ್ರದ ಅಭಿನಯಕ್ಕಾಗಿ ನಾಮಿನೇಟ್ ಆಗಿದ್ದಾರೆ. ಹಾಗೆ ನಟ ಗಣೇಶ್ ಹೆಸರು ಕೂಡ ಪಟ್ಟಿಯಲ್ಲಿ ಇದೆ. ಗಣೇಶ್ 'ಸಕ್ಕತ್' ಸಿನಿಮಾದ ನಟೆನೆಗಾಗಿ ನಾಮಿನೇಟ್ ಆಗಿದ್ದಾರೆ. ಈ ಎರಡೂ ಸಿನಿಮಾಗಳು ಕೂಡ ಕಳೆ ವರ್ಷ ತೆರೆಕಂಡಿವೆ.

  ಶಿವಣ್ಣ, ರಿಷಬ್ ಶೆಟ್ಟಿ!

  ಶಿವಣ್ಣ, ರಿಷಬ್ ಶೆಟ್ಟಿ!

  ಒಟ್ಟು ಆರು ಮಂದಿ ನಟರ ಹೆಸರುಗಳು ಈ ಬಾರಿಯ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿವೆ. ಅದರಲ್ಲಿ ನಟ ಶಿವರಾಜ್ ಕುಮಾರ್‌ ಮತ್ತು ರಿಷಬ್ ಶೆಟ್ಟಿ ಕೂಡ ಇದ್ದಾರೆ. 'ಭಜರಂಗಿ' ಚಿತ್ರಕ್ಕಾಗಿ ನಟ ಶಿವರಾಜ್ ಕುಮಾರ್ ಹೆಸರು ನಾಮಿನೇಟ್ ಆಗಿದೆ. ಇನ್ನು 'ಗರುಡ ಗಮನ ವೃಷಭ' ವಾಹನ ಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಪ್ರಶಸ್ತಿ ಯಾರ ಮುಡಿಗೆ ಎನ್ನುವುದನ್ನು ನೋಡಬೇಕಿದೆ.

  English summary
  SIIMA Awards 2022 Nomination: Darshan, Puneeth Rajkumar, Dhananjay, Shivaraj Kumar, Ganesh Nominated, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X