For Quick Alerts
  ALLOW NOTIFICATIONS  
  For Daily Alerts

  ಸೈಮಾ 2019: 'ಯಜಮಾನ' ಹವಾ, 'ಮಹರ್ಷಿ' ಕ್ರೇಜ್, ಯಾರಿಗೆ ಪ್ರಶಸ್ತಿ?

  |

  2019ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ಅತಿ ಹೆಚ್ಚು ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ಸೈಮಾ ಪ್ರಶಸ್ತಿ ನೀಡಲಾಗಿಲ್ಲ. ಇದೀಗ, 2019ನೇ ವರ್ಷದ ಚಿತ್ರಗಳಿಗೆ ಸೈಮಾ ಪ್ರಶಸ್ತಿ ಸಮಾರಂಭ ಮಾಡಲು ಆಯೋಜಕರು ನಿರ್ಧರಿಸಿದ್ದು, ಸೆಪ್ಟೆಂಬರ್ 11 ಮತ್ತು 12 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

  ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಇದೀಗ, ಆಯಾ ಭಾಷೆಯಲ್ಲಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನವಾಗಿರುವ ಟಾಪ್ ಸಿನಿಮಾಗಳ ಪಟ್ಟಿ ಮತ್ತು ಆ ಚಿತ್ರಗಳು ಯಾವ ವಿಭಾಗದಲ್ಲಿ ನಾಮಿನೇಟ್ ಆಗಿದೆ ಎನ್ನುವುದರ ವಿವರ ಬಹಿರಂಗವಾಗಿದೆ.

   'ಇದು ಜಸ್ಟ್ ಬಿಗಿನಿಂಗ್': 2015ರಲ್ಲಿ ಯಶ್ ಹೇಳಿದ್ದ ಮಾತು ನೆನಪಿದೆಯೇ? 'ಇದು ಜಸ್ಟ್ ಬಿಗಿನಿಂಗ್': 2015ರಲ್ಲಿ ಯಶ್ ಹೇಳಿದ್ದ ಮಾತು ನೆನಪಿದೆಯೇ?

  ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ನಟಿಸಿರುವ 'ಯಜಮಾನ' ಸಿನಿಮಾ ಅತಿ ಹೆಚ್ಚು ವಿಭಾಗಳಲ್ಲಿ ನಾಮಿನೇಷನ್ ಆಗಿದೆ ಎಂಬ ವಿಚಾರ ಹೊರಬಿದ್ದಿದ್ದು, ಡಿ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಅದೇ ರೀತಿ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ನಟಿಸಿ, ರಾಷ್ಟ್ರ ಪ್ರಶಸ್ತಿ ಪಡೆದ 'ಮಹರ್ಷಿ' ಚಿತ್ರವೂ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ತಮಿಳಿನಲ್ಲಿ ಧನುಶ್ ನಟನೆಯ ಅಸುರನ್ ಹೆಚ್ಚು ವಿಭಾಗದಲ್ಲಿ ನಾಮಿನೇಟ್ ಆಗಿದೆ. ಮುಂದೆ ಓದಿ...

  ಕನ್ನಡದಲ್ಲಿ 'ಯಜಮಾನ' ಹವಾ

  ಕನ್ನಡದಲ್ಲಿ 'ಯಜಮಾನ' ಹವಾ

  2019ರಲ್ಲಿ ಬಿಡುಗಡೆಯಾಗಿದ್ದ ಚಿತ್ರ 'ಯಜಮಾನ' ಸೈಮಾ ಪ್ರಶಸ್ತಿ ಸುತ್ತಿನಲ್ಲಿ ಒಟ್ಟು 12 ವಿಭಾಗದಲ್ಲಿ ನಾಮಿನೇಷನ್ ಆಗಿದೆ. ಹರಿಕೃಷ್ಣ ನಿರ್ದೇಶಿಸಿದ್ದ ಈ ಚಿತ್ರವನ್ನು ಶೈಲಜಾ ನಾಗ್ ನಿರ್ಮಾಣ ಮಾಡಿದ್ದರು. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದರು. ಸ್ವತಃ ಹರಿಕೃಷ್ಣ ಸಂಗೀತ ನೀಡಿದ್ದರು. ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಭರ್ಜರಿ ಗಳಿಕೆ ಕಂಡಿತ್ತು.

  Siima 2019 : ಸೈಮಾದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ 'ಕೆಜಿಎಫ್', 'ಅಯೋಗ್ಯ'Siima 2019 : ಸೈಮಾದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ 'ಕೆಜಿಎಫ್', 'ಅಯೋಗ್ಯ'

  ಯಾವ ವಿಭಾಗದಲ್ಲಿ ನಾಮಿನೇಷನ್ ಆಗಿದೆ

  ಯಾವ ವಿಭಾಗದಲ್ಲಿ ನಾಮಿನೇಷನ್ ಆಗಿದೆ

  ಸೈಮಾ 2019ನೇ ಸಾಲಿನಲ್ಲಿ ಯಜಮಾನ ಸಿನಿಮಾ 12 ವಿಭಾಗದಲ್ಲಿ ನಾಮಿನೇಷನ್ ಆಗಿದೆ.

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಟ

  ಅತ್ಯುತ್ತಮ ನಟಿ

  ಅತ್ಯುತ್ತಮ ಪೋಷಕ ನಟ

  ಅತ್ಯುತ್ತಮ ಪೋಷಕ ನಟಿ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಹಿನ್ನೆಲೆ ಗಾಯಕ

  ಅತ್ಯುತ್ತಮ ಹಿನ್ನೆಲೆ ಗಾಯಕಿ

  ಅತ್ಯುತ್ತಮ ಖಳನಾಯಕ

  ಅತ್ಯುತ್ತಮ ಛಾಯಾಗ್ರಾಹಕ

  ಅತ್ಯುತ್ತಮ ಹಾಸ್ಯನಟ

  ತೆಲುಗಿನಲ್ಲಿ 'ಮಹರ್ಷಿ' ಕ್ರೇಜ್

  ತೆಲುಗಿನಲ್ಲಿ 'ಮಹರ್ಷಿ' ಕ್ರೇಜ್

  2019ನೇ ಸಾಲಿನಲ್ಲಿ ಅತ್ಯುತ್ತಮ ಮನರಂಜನಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದ ಮಹರ್ಷಿ ಸಿನಿಮಾ ಟಾಲಿವುಡ್ ಪೈಕಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನವಾಗಿದೆ.

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಟ

  ಅತ್ಯುತ್ತಮ ನಟಿ

  ಅತ್ಯುತ್ತಮ ಪೋಷಕ ನಟ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಗೀತೆ ರಚನೆಕಾರ

  ಅತ್ಯುತ್ತಮ ಹಿನ್ನೆಲೆ ಗಾಯಕ

  ಅತ್ಯುತ್ತಮ ಖಳನಾಯಕ

  ಅತ್ಯುತ್ತಮ ಛಾಯಾಗ್ರಾಹಕ

  ತಮಿಳಿನಲ್ಲಿ ಅಸುರನ್

  ತಮಿಳಿನಲ್ಲಿ ಅಸುರನ್

  ಅಸುರನ್ ಚಿತ್ರದ ನಟನೆಗಾಗಿ ಧನುಶ್ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. 2019ರಲ್ಲಿ ತೆರೆಕಂಡ ಈ ಸಿನಿಮಾ ಈಗ ಸೈಮಾ ಪ್ರಶಸ್ತಿಯಲ್ಲಿ ಮೋಡಿ ಮಾಡಿದೆ. ಒಟ್ಟು ಹತ್ತು ವಿಭಾಗದಲ್ಲಿ ನಾಮನಿರ್ದೇಶನವಾಗಿದೆ.

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಟ

  ಅತ್ಯುತ್ತಮ ನಟಿ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಗೀತೆ ರಚನೆಕಾರ

  ಅತ್ಯುತ್ತಮ ಹಿನ್ನೆಲೆ ಗಾಯಕ

  ಅತ್ಯುತ್ತಮ ಹಿನ್ನೆಲೆ ಗಾಯಕಿ

  ಅತ್ಯುತ್ತಮ ನವನಟ

  ಅತ್ಯುತ್ತಮ ಛಾಯಾಗ್ರಾಹಕ

  ಕುಂಬಳಂಗಿ ನೈಟ್ಸ್

  ಕುಂಬಳಂಗಿ ನೈಟ್ಸ್

  ಮಲಯಾಳಂ ಭಾಷೆಯಲ್ಲಿ 'ಕುಂಬಳಂಗಿ ನೈಟ್ಸ್' ಚಿತ್ರ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಪೋಷಕ ನಟ

  ಅತ್ಯುತ್ತಮ ಪೋಷಕ ನಟಿ

  ಅತ್ಯುತ್ತಮ ಸಂಗೀತ ನಿರ್ದೇಶಕ

  ಅತ್ಯುತ್ತಮ ಗೀತೆರಚನೆಕಾರ

  ಅತ್ಯುತ್ತಮ ಹಿನ್ನೆಲೆ ಗಾಯಕಿ

  ಅತ್ಯುತ್ತಮ ಖಳನಾಯಕ

  ಅತ್ಯುತ್ತಮ ನವನಟ

  ಅತ್ಯುತ್ತಮ ನವನಟಿ

  ಅತ್ಯುತ್ತಮ ನವ ನಿರ್ದೇಶಕ

  ಅತ್ಯುತ್ತಮ ನವ ನಿರ್ಮಾಪಕ

  ಅತ್ಯುತ್ತಮ ಛಾಯಾಗ್ರಾಹಕ

  ಇದಕ್ಕೂ ಮುಂಚೆ ಮಲೇಶಿಯಾ, ಶಾರ್ಜಾ, ಅಬುಧಾಬಿ, ದುಬೈ, ಸಿಂಗಾಪೂರ್ ಅಂತಹ ರಾಷ್ಟ್ರಗಳಲ್ಲಿ ಸೈಮಾ ಕಾರ್ಯಕ್ರಮ ನಡೆಯುತ್ತಿತ್ತು. ಇದೀಗ, ಈ ವರ್ಷ ಹೈದರಾಬಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

  English summary
  South Indian International Movie Awards (SIIMA) released nominations list of 2019. Yajamana movie in kannada are leading the SIIMA Nominations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X