»   » ಸೈಮಾ ಪ್ರಶಸ್ತಿ ಗೆದ್ದ ನಟ-ನಟಿಯರು ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ..

ಸೈಮಾ ಪ್ರಶಸ್ತಿ ಗೆದ್ದ ನಟ-ನಟಿಯರು ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ..

Posted By:
Subscribe to Filmibeat Kannada

ಪ್ರತಿಷ್ಠಿತ ''ದಕ್ಷಿಣ ಭಾರತದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ(ಸೈಮಾ)' ಪ್ರದಾನ ಕಾರ್ಯಕ್ರಮ ನಿನ್ನೆ ತೆಲುಗು ಮತ್ತು ಕನ್ನಡ ಚಿತ್ರರಂಗ ವಿಭಾಗಕ್ಕೆ ನೆರವೇರಿದೆ. ಅಂತಿಮವಾಗಿ ಬಹಳ ನಿರೀಕ್ಷೆಯ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದೆ.

2017 ನೇ ಸಾಲಿನ ಸೈಮಾ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಶಿವರಾಜ್ ಕುಮಾರ್ ರವರಿಗೆ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಶ್ರದ್ಧಾ ಶ್ರೀನಾಥ್ ರವರಿಗೆ ಲಭಿಸಿದೆ. ಅಲ್ಲದೇ ಹಲವು ಹೊಸಬರ ಸಿನಿಮಾಗಳು ಮತ್ತು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿರುವ ಹೊಸ ನಟರು ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೈಮಾ ಪ್ರಶಸ್ತಿ ಪಡೆದ ಕನ್ನಡಿಗರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ.

ಅತ್ಯುತ್ತಮ ನಟ

ಸೆಂಚುರಿ ಸ್ಟಾರ್ ಶಿವಣ್ಣ ಅವರಿಗೆ 'ಶಿವಲಿಂಗ' ಚಿತ್ರದ ಅಭಿನಯಕ್ಕಾಗಿ 2017 ನೇ ಸಾಲಿನ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ನಟಿ

ಪವರ್ ಕುಮಾರ್ ನಿರ್ದೇಶನದ 'ಯೂ ಟರ್ನ್' ಚಿತ್ರದಲ್ಲಿನ ಅಭಿನಯದಕ್ಕಾಗಿ ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

ಅತ್ಯುತ್ತಮ ಫೋಷಕ ನಟ

ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರ 150 ದಿನಗಳನ್ನು ಭರ್ಜರಿಯಾಗಿ ಪೂರೈಸಿದೆ. ಈ ಚಿತ್ರದಲ್ಲಿಯ ಅಭಿನಯಕ್ಕಾಗಿ ಮೈಸೂರು ಮೂಲದ ಚಂದನ್ ಆಚಾರ್ ಸೈಮಾ ಅತ್ಯುತ್ತಮ ಫೋಷಕ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಅತ್ಯುತ್ತಮ ಫೋಷಕ ನಟಿ

'ರಂಗಿತರಂಗ' ಖ್ಯಾತಿಯ ನಟಿ ರಾಧಿಕ ಚೇತನ್ ರವರಿಗೆ 'ಯೂ ಟರ್ನ್' ಚಿತ್ರದಲ್ಲಿಯ ನಟನೆಗೆ ಅತ್ಯುತ್ತಮ ಪೋಷಕ ನಟಿ ಸೈಮಾ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಖಳನಟ

ಸ್ಯಾಂಡಲ್ ವುಡ್ ನ ಕಂಚಿನ ಕಂಠನ ನಟ ವಶಿಷ್ಟ ಎನ್ ಸಿಂಹ ರವರು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿಯ ಅಭಿನಯದಿಂದ ಸೈಮಾ ಅತ್ಯುತ್ತುಮ ಖಳನಟ ಪ್ರಶಸ್ತಿ ವಿಜೇತರಾಗಿದ್ದಾರೆ.

ಅತ್ಯುತ್ತಮ ಹಿನ್ನೆಲೆ ಗಾಯಕಿ

'ದೊಡ್ಮನೆ ಹುಡ್ಗ' ಚಿತ್ರದ 'ಥ್ರಾಸ್ ಆಗ್ತೈತಿ' ಹಾಡಿಗಾಗಿ ಇಂದು ನಾಗರಾಜ್ ರವರು ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ಹಿನ್ನೆಲೆ ಗಾಯಕ

'ಮುಂಗಾರು ಮಳೆ' ಚಿತ್ರದ 'ಸರಿಯಾಗಿ ನೆನಪಿದೆ ನನಗೆ' ಹಾಡನ್ನು ಹಾಡಿರುವ ಅರ್ಮಾನ್ ಮಲ್ಲಿಕ್ ರವರಿಗೆ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ.

ಬೆಸ್ಟ್ ಕಾಮಿಡಿಯನ್

ಗಣೇಶ್ ಅಭಿನಯದ 'ಸುಂದರಾಂಗ ಜಾಣ' ಚಿತ್ರದಲ್ಲಿ ರವಿಶಂಕರ್ ಗೌಡ ರವರು ಕನ್ನಡ ಸಿನಿಪ್ರಿಯರಿಗೆ ಸಖತ್ ಮನರಂಜನೆ ನೀಡಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ 'ಬೆಸ್ಟ್ ಕಾಮಿಡಿಯನ್' ಸೈಮಾ ಪ್ರಶಸ್ತಿ ನೀಡಲಾಗಿದೆ.

ಅತ್ಯುತ್ತಮ ಗೀತೆರಚನೆಕಾರ

'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವ ನಾನು ನೋಡಲಿ' ಹಾಡು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಹಾಡನ್ನು ಬರೆದ ಧನಂಜಯ ರಂಜನ್ ರವರಿಗೆ ಸೈಮಾ ಅತ್ಯುತ್ತಮ ಗೀತೆರಚನಾಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅತ್ಯುತ್ತಮ ಉದಯೋನ್ಮುಖ ನಟಿ

ಚಂದನವನದಲ್ಲಿ ತಾವು ಅಭಿನಯಿಸಿದ ಮೊದಲ ಚಿತ್ರದಿಂದಲೇ ಫೇಮಸ್ ಆಗಿರುವ 'ಕಿರಿಕ್ ಪಾರ್ಟಿ' ಚಿತ್ರದ ನಟಿ ರಶ್ಮಿಕಾ ಮಂದಣ್ಣ ಗೆ 2017 ನೇ ಸಾಲಿನ ಸೈಮಾ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ದೊರೆತಿದೆ.

ಅತ್ಯುತ್ತಮ ಉದಯೋನ್ಮುಕ ನಟ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರಸ್ವಾಮಿ ರವರಿಗೆ 'ಜಾಗ್ವಾರ್' ಚಿತ್ರದ ಅಭಿನಯಕ್ಕಾಗಿ ಸೈಮಾ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ ಲಭಿಸಿದೆ.

ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್

'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿಯ ನಟನೆಗಾಗಿ ನಟಿ ಪಾರುಲ್ ಯಾದವ್ ರವರಿಗೆ ಸೈಮಾ 'ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್' ಪ್ರಶಸ್ತಿ ನೀಡಲಾಗಿದೆ.

ವರ್ಷದ ಬೆಸ್ಟ್ ಎಂಟರ್‌ಟೈನರ್/ಡೈರೆಕ್ಟರ್/ಸಿನಿಮಾ

ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಸ್ಯಾಂಡಲ್ ವುಡ್ ನ ಈ ವರ್ಷದ ಬೆಸ್ಟ್ ಎಂಟರ್‌ಟೈನಿಂಗ್ ಚಿತ್ರ ಯಾವುದು ಅಂದ್ರೆ ಎಲ್ಲರೂ 'ಕಿರಿಕ್ ಪಾರ್ಟಿ' ಎನ್ನುತ್ತಾರೆ. ಆದ್ದರಿಂದ 2017 ನೇ ಸಾಲಿನ ಕನ್ನಡ ಬೆಸ್ಟ್ ಎಂಟರ್‌ಟೈನರ್ ಆಗಿ ರಕ್ಷಿತ್ ಶೆಟ್ಟಿ ಗೆ ಸೈಮಾ ಪ್ರಶಸ್ತಿ ನೀಡಲಾಗಿದೆ. ಅಲ್ಲದೇ ರಿಷಬ್ ಶೆಟ್ಟಿಗೆ ಸೈಮಾ ಬೆಸ್ಟ್ ನಿರ್ದೇಶಕ ಪ್ರಶಸ್ತಿ ಸಹ ಲಭಿಸಿದ್ದು, 'ಕಿರಿಕ್ ಪಾರ್ಟಿ' ಚಿತ್ರವು ಸಹ ಸಿನಿಮಾಗಳ ವಿಭಾಗದಿಂದ ಸೈಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಉದಯೋನ್ಮುಖ ನಿರ್ದೇಶಕ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶನಕ್ಕಾಗಿ ಹೇಮಂತ್ ಎಂ ರಾವ್ ರವರಿಗೆ ಸೈಮಾ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

English summary
Kannada Actor Shivarajkumar and Actress Shraddha Srinath has won SIIMA 2017 Best Actor and Best Actress Award. 2017 SIIMA Awards Winners complete list is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada