For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮತ್ತು ಸಲ್ಮಾನ್ ನಡುವಿನ ಹೋಲಿಕೆಯಾದರೂ ಏನು?

  |

  ದರ್ಶನ್ ತೂಗುದೀಪ್ ಮತ್ತು ಸಲ್ಮಾನ್ ಖಾನ್ ನಡುವೆ ಹಲವಾರು ಹೋಲಿಕೆಗಳಿವೆ. ಇದಕ್ಕೆ ಮೊದಲಿಗೆ ಕೊಡಬಹುದಾದ ಉದಾಹರಣೆಯಿಂದರೆ ದರ್ಶನ್ ಮತ್ತು ಸಲ್ಮಾನ್ ಖಾನ್ ಇಬ್ಬರಿಗೂ ಇರುವ ಅವರದೇ ಆದ ಅಸಂಖ್ಯಾತ ಅಭಿಮಾನಿಗಳು.

  ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಹೇಗೆ ಬಾಕ್ಸ್ ಆಫೀಸ್ ಕಿಂಗೋ ಹಾಗೇ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ. ದರ್ಶನ್ ಅವರ ಸತತ ಐದು ಚಿತ್ರಗಳಾದ ಸಾರಥಿ, ಚಿಂಗಾರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಮತ್ತು ಬೃಂದಾವನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಚಿತ್ರಗಳು.

  ಅತ್ತ ಸಲ್ಮಾನ್ ಖಾನ್ ಅವರ ರೆಡಿ, ದಬಾಂಗ್, ಬಾಡಿ ಗಾರ್ಡ್, ಏಕ್ ಥಾ ಟೈಗರ್ ಚಿತ್ರಗಳು ಬಾಕ್ಸ್ ಆಫೀಸ್ ಲೂಠಿ ಹೊಡೆದ ಚಿತ್ರಗಳು.

  ಸಲ್ಮಾನ್ ಖಾನ್ ಅವರ ಹೊಸ ಜೈ ಹೋ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಆಯ್ಕೆಯಾದ ರವಿ ವರ್ಮಾ, ಈ ಇಬ್ಬರೂ ಸ್ಟಾರ್ ನಟರ ನಡುವೆ ಕೆಲವೊಂದು ಹೋಲಿಗೆಗಳನ್ನು ಮಾಡಿದ್ದಾರೆ.

  ಸಲ್ಮಾನ್ ಖಾನ್, ಸನಾ ಖಾನ್, ಡೈಶಿ ಶಾ, ನದಿರಾ ಬಬ್ಬರ್, ಜೆನಿಲಿಯಾ ದೇಶಮುಖ್ ಮತ್ತು ಕಪಿಲ್ ಶರ್ಮಾ ಪ್ರಮುಖ ತಾರಾಗಣದಲ್ಲಿರುವ ಜೈ ಹೋ ಚಿತ್ರ ಬರುವ ವರ್ಷ ಜನವರಿ 24ರಂದು ಬಿಡುಗಡೆಯಾಗಲಿದೆ.

  'ಒನ್ ಇಂಡಿಯಾ' ಜೊತೆ ಮಾತನಾಡುತ್ತಿದ್ದ ರವಿ ವರ್ಮಾ ಸಲ್ಮಾನ್ ಮತ್ತು ದರ್ಶನ್ ನಡುವೆ ಹೋಲಿಕೆ ಮಾಡಿದ್ದು ಹೀಗೆ? ಸ್ಲೈಡಿನಲ್ಲಿ..

  ಸಲ್ಮಾನ್ ಮತ್ತು ದರ್ಶನ್

  ಸಲ್ಮಾನ್ ಮತ್ತು ದರ್ಶನ್

  ಈ ಇಬ್ಬರೂ ಸ್ಟಾರ್ ನಟರು ಈಸಿ ಗೋಯಿಂಗ್ ನಡತೆಯವರು. ಚಿತ್ರೀಕರಣದ ಸಮಯದಲ್ಲಿ ಸಹ ಕಲಾವಿದರ ಮತ್ತು ತಂತ್ರಜ್ಞರ ಜೊತೆ ಬೆರೆತು ಶೂಟಿಂಗ್ ನಲ್ಲಿ ಭಾವಹಿಸುತ್ತಾರೆ. ಸೆಟ್ ನಲ್ಲಿರುವ ಎಲ್ಲರನ್ನೂ ಗೌರವಿಸುತ್ತಾರೆ.

  ಇನ್ನೊಬ್ಬರಿಂದ ಕಲಿಯುವ ಗುಣ

  ಇನ್ನೊಬ್ಬರಿಂದ ಕಲಿಯುವ ಗುಣ

  ಇಬ್ಬರೂ ನಟರಿಗೂ ಈಗೋ ಅನ್ನೋದು ಇಲ್ಲವೇ ಇಲ್ಲ. ಇನ್ನೊಬ್ಬರಿಂದ ಕಲಿಯುವುದು ಸಾಕಷ್ಟಿರುತ್ತದೆ ಎನ್ನುವ ಗುಣವಿರುವವರು. ತಮಗೆ ಗೊತ್ತಿಲ್ಲದೇ ಇರುವುದನ್ನು ಸಹ ಕಲಾವಿದರಿಂದ ಕಲಿಯುವ ಗುಣ ಇಬ್ಬರಲ್ಲೂ ಇರುವ ಇನ್ನೊಂದು ಹೋಲಿಕೆ.

  ಕಮಿಟೆಡ್ ನಟರು

  ಕಮಿಟೆಡ್ ನಟರು

  ನಿರ್ದೇಶಕರು ವಹಿಸಿದ ಜವಾಬ್ದಾರಿಯನ್ನು ಶ್ರದ್ದೆಯಿಂದ ಮಾಡುವ ಗುಣ ಇಬ್ಬರೂ ನಟರಲ್ಲಿದೆ. ಸನ್ನಿವೇಶಕ್ಕೆ ತಕ್ಕಂತೆ ತಮ್ಮ ನಟನೆ ಸರಿಬರುವ ತನಕ ಎಷ್ಟು ಟೇಕಾದರೂ ಯಾವುದೇ ಮುಲಾಜಿಲ್ಲದೆ ನಟಿಸುತ್ತಾರೆ. ಅದೇ ರೀತಿ ಬೇರೆ ಕಲಾವಿದರಿಂದಲೂ ಇದನ್ನೇ ಬಯಸುತ್ತಾರೆ.

  ಸಾಹಸ ಸನ್ನಿವೇಶ

  ಸಾಹಸ ಸನ್ನಿವೇಶ

  ಸಾಹಸ ಸನ್ನಿವೇಶದಲ್ಲಿ ಯಾವುದೇ ಅಳುಕಿಲ್ಲದೇ ಇಬ್ಬರೂ ನಟಿಸುವುದು ನನ್ನಂತಃ ಸಾಹಸ ನಿರ್ದೇಶಕರಿಗಾಗುವ ಲಾಭ. ಸಾಹಸ ಸನ್ನಿವೇಶದಲ್ಲಾಗುವ ಕೆಲವೊಂದು ಗಾಯಗಳಿಗೆ ಇಬ್ಬರೂ ನಟರು ಕ್ಯಾರೇ ಅನ್ನುವುದಿಲ್ಲ.

  ನಿರ್ದೇಶಕರ ನಟರು

  ನಿರ್ದೇಶಕರ ನಟರು

  ಈ ಇಬ್ಬರ ನಡುವಣ ಇನ್ನೊಂದು ಪ್ರಮುಖ ಹೋಲಿಕೆ ನಾನು ಗಮನಿಸಿರುವುದು ಎಂದರೆ ಇಬ್ಬರೂ ನಿರ್ದೇಶಕರ ನಟರು. ನಿರ್ದೇಶಕರು ಹೇಳುವ ಸನ್ನಿವೇಶಕ್ಕೆ ಯಾವುದೇ ಮರು ಪ್ರಶ್ನೆ ಹಾಕುವುದಿಲ್ಲ. ಈ ಎಲ್ಲಾ ಪ್ರಮುಖ ಹೋಲಿಕೆಗಳು ಈ ಇಬ್ಬರೂ ನಟರನ್ನು ಅವರವರ ಭಾಷೆಯ ಮಾರುಕಟ್ಟೆಯಲ್ಲಿ 'ಕಿಂಗ್' ಆಗಿ ಮಾಡಿರುವುದು ಅನ್ನುತ್ತಾರೆ ಸಾಹಸ ನಿರ್ದೇಶಕ ರವಿ ವರ್ಮಾ.

  English summary
  Similarities between Darshan and Salman Khan in Kannada stunt director Ravi Varma words.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X