For Quick Alerts
  ALLOW NOTIFICATIONS  
  For Daily Alerts

  ದಿಗಂತ್ ತರಹನೇ ಇರುವ ತದ್ರೂಪಿ ನಟ ಯಾರಿವ?

  By ಜೀವನರಸಿಕ
  |

  ಅದೇನೋ ಹೇಳ್ತಾರಲ್ಲ ಪ್ರಪಂಚದಲ್ಲಿ ಏಳು ಜನ ಒಂದೇ ಥರ ಇರ್ತಾರೆ ಅಂತ. ಇದು ನಿಜವಾದ ಲಾಜಿಕ್ಕೋ ಅಥವಾ ನಿರ್ದೇಶಕರ ಮಾಡೋ ತರಹ ಸುಮ್ನೆ ಗಿಮಿಕ್ಕೋ ಗೊತ್ತಿಲ್ಲ. ಆದರೆ ಕೆಲವೊಂದ್ಸಾರಿ ನಾವೂ ಅದರ ಬಗ್ಗೆ ಯೋಚಿಸ್ತೀವಿ. ಅವರ ಥರಾ ಇವರೂ ಇದ್ದಾರಲ್ಲ ಅಂಥ ಕಾಲ್ಯುಕ್ಯುಲೇಟ್ ಮಾಡಿರ್ತೀವಿ.

  ಸುಮ್ನೆ ಆದ್ರೂ ಯೋಚ್ನೆ ಮಾಡಿರ್ತೀವಿ. ಇದು ಸಿನಿಮಾ ರಂಗಕ್ಕೂ ಹೊಸತಲ್ಲ. ಅಂತಹ ಒಂದಷ್ಟು ಸೇಮ್ ಟು ಸೇಮ್ ಜೋಡಿಯನ್ನ ನಾವ್ ನಿಮ್ಗೆ ತೋರಿಸ್ತೀವಿ ಮತ್ತು ಅವರ ಸಮಾನತೆಗಳನ್ನೂ ಹೇಳ್ತಾ ಹೋಗ್ತೀವಿ. ನಿಮ್ಗೂ ಹೌದಲ್ವ ಅಂತ ಅನ್ನಿಸದೇ ಇರೋದಿಲ್ಲ.

  ಸದ್ಯ ಕನ್ನಡದ ದಿಗಂತ್ ಬಾಲಿವುಡ್ ನಲ್ಲಿ 'ಫಟಕ್' ಅನ್ನೊ ಸಿನಿಮಾ ಮೂಲಕ ನಟನಾಗಿ ಮಿಂಚೋಕೆ ರೆಡಿಯಾಗ್ತಿದ್ದಾರೆ. ನೀಲ್ ನಿತಿನ್ ಮುಖೇಶ್ ರ ದಶೆರಾ, ಇಷ್ಕಿರಿಯಾ ಸಿನಿಮಾಗಳು ತೆರೆಗೆ ಬರೋಕೆ ರೆಡಿಯಾಗಿವೆ.

  ದೂದ್ಪೇಡ ದಿಗಂತ್-ನೀಲ್ ನಿತಿನ್ ಮುಖೇಶ್

  ದೂದ್ಪೇಡ ದಿಗಂತ್-ನೀಲ್ ನಿತಿನ್ ಮುಖೇಶ್

  ಕನ್ನಡದ ಹ್ಯಾಂಡ್ಸಮ್ ಹೀರೋ ದಿಗಂತ್ ಈಗ ಬಾಲಿವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಈ ಮಲೆನಾಡಿನ ತವರು ಶಿವಮೊಗ್ಗದ ಸಾಗರದ ಹುಡುಗನನ್ನ ನೋಡ್ತಿದ್ರೆ ಬಾಲಿವುಡ್ ನ ನೀಲ್ ನಿತಿನ್ ಮುಖೇಶ್ ನೆನಪಾಗ್ತಾರೆ. ಇಬ್ಬರಲ್ಲೂ ಇರೋ ಸಾಮಾನ್ಯ ಹೋಲಿಕೆ ಅಂದ್ರೆ ಇಬ್ಬರೂ ಗಾಡ್ ಫಾದರ್ ಗಳಿಲ್ಲದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. ಸದ್ಯ ಈ ಇಬ್ಬರೂ ನಟರು ಒಂದು ದೊಡ್ಡ ಗೆಲುವಿಗಾಗಿ ಕಾದಿರೋ ಸ್ಟಾರ್ ಗಳು.

  ದಿಗಂತ್ ಮತ್ತು ನೀಲ್ ನಿತಿನ್ ಮುಖೇಶ್

  ದಿಗಂತ್ ಮತ್ತು ನೀಲ್ ನಿತಿನ್ ಮುಖೇಶ್

  ಈ ಇಬ್ಬರೂ ಸ್ಟಾರ್ಗಳ ಫೋಟೋವನ್ನ ಅಕ್ಕಪಕ್ಕದಲ್ಲಿಟ್ಟು ಇಬ್ಬರ ಬಗ್ಗೆ ಗೊತ್ತೇ ಇಲ್ಲದ ಯಾರಿಗಾದ್ರೂ ತೋರಿಸಿದ್ರೆ ಇವ್ರಿಬ್ರೂ ಅಣ್ಣ ತಮ್ಮಂದಿರಾ ಇಲ್ಲ ಟ್ವಿನ್ಸಾ ಅಂತ ಕೇಳೋದು ಗ್ಯಾರಂಟಿ.

  ಇಬ್ಬರ ಹೇರ್ ಮತ್ತು ಹೇರ್ ಸ್ಟೈಲ್ ಕೂಡ ಒಂದೇ

  ಇಬ್ಬರ ಹೇರ್ ಮತ್ತು ಹೇರ್ ಸ್ಟೈಲ್ ಕೂಡ ಒಂದೇ

  ನೀಲ್ ನಿತಿನ್ ಮುಖೇಶ್ ಮತ್ತು ದಿಗಂತ್ ಇಬ್ಬರೂ ಸ್ಟಾರ್ ಗಳದ್ದು ಗುಂಗುರು ತಲೆಕೂದಲು. ಹೇರ್ ಸ್ಟೈಲನ್ನೂ ಇಬ್ಬರೂ ಸ್ಟಾರ್ ಗಳು ಫಾಲೋ ಮಾಡೋದು ಹೆಚ್ಚೂ ಕಡಿಮೆ ಒಂದೇ ರೀತಿ.

  ಇಬ್ಬರ ಕಲರ್ ಕೂಡ ಕೆಂಚು ಕೆಂಚು

  ಇಬ್ಬರ ಕಲರ್ ಕೂಡ ಕೆಂಚು ಕೆಂಚು

  ನೀಲ್ ನಿತಿನ್ ಮುಖೇಶ್, ದಿಗಂತ್ ಇಬ್ಬರ ಮೈಬಣ್ಣ ಮತ್ತು ತಲೆಕೂದಲು ಎಲ್ಲವೂ ಕೆಂಚು ಕೆಂಚು. ಇವ್ರಿಬ್ಬರೂ ಒಂದೇ ತರಹ ಕಾಣೋದು ಇವ್ರ ಕಲರ್ ನಿಂದಾನೆ.

  ಎಲ್ಲಿಂದೆಲ್ಲಿಯ ಸಂಬಂಧ

  ಎಲ್ಲಿಂದೆಲ್ಲಿಯ ಸಂಬಂಧ

  ದೂದ್ ಪೇಡ, ಚಾಕೋಲೇಟ್ ಹೀರೋ ಅಂತ ಹೆಸ್ರು ಪಡ್ಕೊಂಡಿದ್ದಾರೆ ಕನ್ನಡದ ದಿಗಂತ್. ಬಾಲಿವುಡ್ ನ ಈ ಹ್ಯಾಂಡಸಮ್ ಹೀರೋಗೆ ಯಾವುದೇ ಟೈಟಲ್ ಗಳಿಲ್ಲ ಆದ್ರೆ ಇಬ್ಬರೂ ನೋಡೋಕೆ ತದ್ರೂಪಿಗಳು.

  ದಿಗಂತ್ ಗೂ ನೀಲ್ ಗೂ ವಯಸ್ಸಲ್ಲೂ ದೊಡ್ಡ ವ್ಯತ್ಯಾಸವಿಲ್ಲ

  ದಿಗಂತ್ ಗೂ ನೀಲ್ ಗೂ ವಯಸ್ಸಲ್ಲೂ ದೊಡ್ಡ ವ್ಯತ್ಯಾಸವಿಲ್ಲ

  ಇನ್ನು ಏಜ್ ನಲ್ಲೂ ಈ ಸ್ಟಾರ್ ಗಳ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಕನ್ನಡದ ದಿಗಂತ್ ಗಿಂತ ನೀಲ್ ನಿತಿನ್ ಮುಖೇಶ್ ಎರಡು ವರ್ಷ ದೊಡ್ಡವರು.

  English summary
  Similarities between Kannada actor Diganth and bollywood star Neil Nitin Mukesh. Both actors look alike, their hair stlye, skin tone, both are handsome.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X