For Quick Alerts
  ALLOW NOTIFICATIONS  
  For Daily Alerts

  'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಸಹ ನಿರ್ಮಾಪಕ ನೇಣಿಗೆ ಶರಣು

  By Harshitha
  |

  'ಸಿಂಪಲ್ಲಾಗೊಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ಬಹುಪರಾಕ್' ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಅಭಿಜಿತ್ ಪಟೇಲ್ (36) ಮಂಗಳವಾರ ನೇಣಿಗೆ ಶರಣಾಗಿದ್ದಾರೆ.

  ಕಿರ್ಲೋಸ್ಕರ್ ಕಾಲೊನಿ ನಿವಾಸಿಯಾದ ಅಭಿಜಿತ್ ಪಟೇಲ್, ಪೀಣ್ಯ ಸಮೀಪದ ಶೆಟ್ಟಿಹಳ್ಳಿಯಲ್ಲಿರುವ ನೀರು ಪೂರೈಕೆ ಘಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ ಬೆಳಗ್ಗೆ ನೇರವಾಗಿ ನೀರು ಪೂರೈಕೆ ಘಟಕಕ್ಕೆ ತೆರಳಿದ್ದ ಅಭಿಜಿತ್, ಕೆಲಕಾಲ ಟ್ಯಾಂಕರ್ ಚಾಲಕರ ಜೊತೆ ಮಾತನಾಡಿದ್ದಾರೆ. [ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ವಿಮರ್ಶೆ]

  ನಂತರ ಚಾಲಕರು ನೀರು ಸರಬರಾಜು ಮಾಡಲು ಹೊರಟಿದ್ದಾರೆ. ಅವರುಗಳು ವಾಪಸ್ ಬರುವಷ್ಟರಲ್ಲಿ ಅಭಿಜಿತ್ ನೇಣು ಬಿಗಿದುಕೊಂಡಿದ್ದಾರೆ. ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಅಭಿಜಿತ್ ಅವರಿಗೆ ಮೂವರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದು ತಿಳಿದುಬಂದಿಲ್ಲ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

  English summary
  Abhijit Patel, Co-Producer for the Kannada Movies 'Simpallagond Love Story', 'Ulidavaru Kandanthe' and 'Bahuparak' has committed suicide on tuesday (September 22nd) in Penya, Bengaluru.
  Wednesday, September 23, 2015, 13:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X